For the best experience, open
https://m.suddione.com
on your mobile browser.
Advertisement

ಉತ್ತರಕಾಶಿ ಸುರಂಗ ಕುಸಿತ ಪ್ರಕರಣ | ಇನ್ನೂ ಮುಗಿಯದ ಕಾರ್ಯಾಚರಣೆ : ಇಂದು ಪೂರ್ಣಗೊಳ್ಳುವ ಸಾಧ್ಯತೆ...!

09:14 AM Nov 25, 2023 IST | suddionenews
ಉತ್ತರಕಾಶಿ ಸುರಂಗ ಕುಸಿತ ಪ್ರಕರಣ   ಇನ್ನೂ ಮುಗಿಯದ ಕಾರ್ಯಾಚರಣೆ   ಇಂದು ಪೂರ್ಣಗೊಳ್ಳುವ ಸಾಧ್ಯತೆ
Advertisement

ಸುದ್ದಿಒನ್, ಉತ್ತರಕಾಶಿ, ನವೆಂಬರ್ 24: ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿ ಸುರಂಗ ಕುಸಿತದ ಘಟನೆಯಲ್ಲಿ ಸಿಲುಕಿರುವ ಕಾರ್ಮಿಕರು ಶುಕ್ರವಾರವೂ ಹೊರಬರಲು ಸಾಧ್ಯವಾಗಿಲ್ಲ. ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ 41 ಕಾರ್ಮಿಕರು ಸಿಲುಕಿದ್ದಾರೆ. ಶುಕ್ರವಾರವೂ ಅಮೆರಿಕದ ಆಗರ್ ಯಂತ್ರದ ಮೂಲಕ ಅವಶೇಷಗಳನ್ನು ತೆಗೆಯಲು ಸಾಧ್ಯವಾಗಲಿಲ್ಲ. ಯಂತ್ರದ ಬದಲು ಮನುಷ್ಯರಿಂದ ಅವಶೇಷಗಳನ್ನು ತೆಗೆಯಬಹುದೇ? ಎಂದು ತಜ್ಞರು ಪರಿಶೀಲಿಸುತ್ತಿದ್ದಾರೆ. 

Advertisement

ಮತ್ತೊಂದೆಡೆ, ಈ ಹಿಂದೆ ವಿಪತ್ತು ತಡೆ ತಂಡಗಳು ಅವಶೇಷಗಳನ್ನು ತೆಗೆಯುವಾಗ ಎದುರಾದ ಕಬ್ಬಿಣದ ತೊಲೆಯನ್ನು ಕತ್ತರಿಸಿ ಕೊರೆಯುವಿಕೆಯನ್ನು ಪುನರಾರಂಭಿಸಿದ್ದರು.
ರಕ್ಷಣೆಗಾಗಿ ಕಬ್ಬಿಣದ ಪೈಪ್ ವೆಲ್ಡಿಂಗ್ ಆರಂಭಿಸಲಾಗಿದೆ.

57 ಮೀಟರ್ ನಲ್ಲಿ ಆಗರ್ ಯಂತ್ರದ ಮೂಲಕ 48 ಮೀಟರ್ ವರೆಗೆ ಅಗೆದಿದೆ. ಪೈಪ್ ಮೂಲಕ ಕಾರ್ಮಿಕರನ್ನು ಕರೆತರುವ ಪ್ರಕ್ರಿಯೆಯಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.

Advertisement

ಈ ಭಾಗದ ಗ್ರಾಮಸ್ಥರು ಸ್ಥಳೀಯ ದೇವತೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಾಚರಣೆ ಯಶಸ್ವಿಯಾಗುವಂತೆ ಪ್ರಾರ್ಥಿಸುತ್ತಿದ್ದಾರೆ.

Tags :
Advertisement