For the best experience, open
https://m.suddione.com
on your mobile browser.
Advertisement

ಉತ್ತರ ಪ್ರದೇಶ ಫಲಿತಾಂಶ | ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಗೆಲುವು : ಕಾಂಗ್ರೆಸ್ ಭದ್ರಕೋಟೆ ಮತ್ತೆ 'ಕೈ'ವಶ

08:03 PM Jun 04, 2024 IST | suddionenews
ಉತ್ತರ ಪ್ರದೇಶ ಫಲಿತಾಂಶ   ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ಗೆಲುವು   ಕಾಂಗ್ರೆಸ್ ಭದ್ರಕೋಟೆ ಮತ್ತೆ  ಕೈ ವಶ
Advertisement

ಸುದ್ದಿಒನ್ : ಉತ್ತರ ಪ್ರದೇಶದಲ್ಲಿ ಯಾರು ಗೆದ್ದರೆ ಅವರಿಗೆ ದೆಹಲಿ ಗದ್ದುಗೆ ಎಂಬ ಮಾತಿದೆ. ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರಪ್ರದೇಶದಲ್ಲಿ ಒಟ್ಟು 80 ಲೋಕಸಭಾ ಸ್ಥಾನಗಳಿವೆ. ಆ ರಾಜ್ಯದ ಸ್ಥಾನಗಳು ಸಾರ್ವತ್ರಿಕ ಚುನಾವಣೆಯಲ್ಲಿ ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸುತ್ತವೆ. 

Advertisement

2014 ಮತ್ತು 2019 ರ ಚುನಾವಣೆಗಳಲ್ಲಿ, ಬಿಜೆಪಿ ಅಲ್ಲಿ ಭಾರಿ ಸಂಖ್ಯೆಯ ಸ್ಥಾನಗಳನ್ನು ಗೆದ್ದು ತನ್ನದೇ ಆದ ಸರ್ಕಾರವನ್ನು ರಚಿಸಿತ್ತು. ಆದರೆ, ಈ ಬಾರಿ ಅಲ್ಲಿ ಬಿಜೆಪಿಗೆ ಮುಖಭಂಗವಾಗಿದೆ. ಅಲ್ಲಿ ಇಂಡಿಯಾ ಮೈತ್ರಿಕೂಟ ಅಸಾಧಾರಣವಾದ ಮೇಲುಗೈ ಸಾಧಿಸಿದೆ.  ಕಳೆದ ಚುನಾವಣೆಯಲ್ಲಿ ಮಿತ್ರಪಕ್ಷಗಳೊಂದಿಗೆ 65 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಅರ್ಧದಷ್ಟು ಸ್ಥಾನ ಕಳೆದುಕೊಂಡಿದೆ. ಅಖಿಲೇಶ್ ನೇತೃತ್ವದಲ್ಲಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಒಟ್ಟಾಗಿ ಸ್ಪರ್ಧಿಸಿ ಉತ್ತಮ ಫಲಿತಾಂಶ ಪಡೆದಿವೆ. ಕಳೆದ ಚುನಾವಣೆಯಲ್ಲಿ ಸೋತಿದ್ದ ಅಮೇಥಿಯನ್ನು ಕಾಂಗ್ರೆಸ್ ಮತ್ತೆ ವಶಪಡಿಸಿಕೊಂಡಿದೆ.

ಅಲ್ಲದೆ, ಆ ಪಕ್ಷಕ್ಕೆ ಭದ್ರಕೋಟೆಯಾಗಿದ್ದ ಮತ್ತೊಂದು ಲೋಕಸಭಾ ಸ್ಥಾನ, ರಾಯ್ ಬರೇಲಿಯಲ್ಲಿ ಕಾಂಗ್ರೆಸ್ ಗೆದ್ದಿದೆ. ಈ ಕ್ಷೇತ್ರವನ್ನು ಪ್ರತಿನಿಧಿಸುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದರು. ಆದ್ದರಿಂದ ಈ ಬಾರಿ ರಾಹುಲ್ ಗಾಂಧಿ ಅಲ್ಲಿಂದ ಸ್ಪರ್ಧಿಸಿದ್ದರು.
ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಮತ್ತು ಅಮೇಠಿಯಿಂದ ಕಿಶೋರಿಲಾಲ್ ಶರ್ಮಾ ಅವರು  ಈ ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.

Advertisement

Advertisement
Advertisement
Tags :
Advertisement