Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಅಶ್ಲೀಲ ಪದ ಬಳಕೆ : ಸಿಟಿ ರವಿ ಅರೆಸ್ಟ್..!

07:36 PM Dec 19, 2024 IST | suddionenews
Advertisement

ಬೆಳಗಾವಿ: ಇಂದು ಮಧ್ಯಾಹ್ನದಿಂದಾನೂ ಸಿಟಿ ರವಿ ಆಡಿದ್ದಾರೆ ಎನ್ನಲಾದ ಮಾತುಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಬಳಸಿರುವ ಅಶ್ಲೀಲ ಪದಕ್ಕೆ ಎಲ್ಲರಿಂದಾನೂ ವಿರೋಧ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಸಿಟಿ ರವಿ ಅರೆಸ್ಟ್ ಆಗಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ದೂರಿನ ಮೇರೆಗೆ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

Advertisement

ಎಂಎಲ್​ಸಿ ಸಿ.ಟಿ ರವಿ ವಿರುದ್ಧ ಬಿಎನ್​ಎಸ್​​​ ಆ್ಯಕ್ಟ್​​​ ಸೆಕ್ಷನ್​​ 75 ಮತ್ತು ಸೆಕ್ಷನ್​​ 79 ಅಡಿಯಲ್ಲಿ ಎಫ್​ಐಆರ್​ ದಾಖಲು ಮಾಡಲಾಗಿದೆ. ಸೆಕ್ಷನ್​​ 75 ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಗೆ ನಿಂದನೆ ಹಾಗೂ ಸೆಕ್ಷನ್​​ 79 ಕೈ ಸನ್ನೆ ಮತ್ತು ಅಶ್ಲೀಲ ಪದ ಪ್ರಯೋಗ ಆಗಿದ್ದು, ಜಾಮೀನು ರಹಿತ ಕೇಸ್​​ ಇದಾಗಿದೆ. ಹಿರೇಬಾಗೇವಾಡಿ ಠಾಣೆ ಪೊಲೀಸ್ರು ಎಫ್​ಐಆರ್​ ಮಾಡಿದ್ದಾರೆ. ಹೀಗಾಗಿ ಸಿ.ಟಿ ರವಿ ಬಂಧನವಾಗಿದೆ.

ಇಂದು ವಿಧಾನ ಪರಿಷತ್ ಅಧಿವೇಶನದ ವೇಳೆ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪವಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ವೇ.. ಎಂಬ ಪದ ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಈ ಪದ ಬಳಕೆಯಿಂದ ಲಕ್ಷ್ಮೀ ಹೆಬ್ಬಾಳ್ಕರ್ ಅಧಿವೇಶನದಲ್ಲಿಯೇ ಕಣ್ಣೀರು ಹಾಕಿದ್ದಾರೆ. ಯಾವುದೇ ಹೆಣ್ಣು ಮಗುವಿಗಾಗಲೀ ಅಂಥಹ ಕೆಟ್ಟ ಪದ ಬಳಕೆ ಮಾಡಿದರೆ ಸಹಿಸುವುದಾದರೂ ಹೇಗೆ..? ಸಿಎಂ ಸಿದ್ದರಾಮಯ್ಯ ಅವರಿಂದ ಹಿಡಿದು ಉಮಾಶ್ರೀ ಸೇರಿದಂತೆ ಕಾಂಗ್ರೆಸ್ ನಾಯಕರು ಸಿಟಿ ರವಿ ನಡೆಯನ್ನು ವಿರೋಧಿಸಿದ್ದಾರೆ.

Advertisement

Advertisement
Tags :
bengaluruchitradurgaCt Ravi Arrestedlakshmi hebbalkarobscene wordssuddionesuddione newsಅರೆಸ್ಟ್ಅಶ್ಲೀಲ ಪದಚಿತ್ರದುರ್ಗಬೆಂಗಳೂರುಲಕ್ಷ್ಮೀ ಹೆಬ್ಬಾಳ್ಕರ್ಸಿಟಿ ರವಿಸಿಟಿ ರವಿ ಅರೆಸ್ಟ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article