For the best experience, open
https://m.suddione.com
on your mobile browser.
Advertisement

ಉಪ್ಪರಿಗೇನಹಳ್ಳಿ ಹತ್ಯೆ ಪ್ರಕರಣ : ಆರೋಪಿಗಳ ಪತ್ತೆಗೆ ಗಡುವು ನೀಡಿದ ಶ್ರೀ ಪ್ರಣವಾನಂದ ಸ್ವಾಮೀಜಿ

04:19 PM Nov 16, 2024 IST | suddionenews
ಉಪ್ಪರಿಗೇನಹಳ್ಳಿ ಹತ್ಯೆ ಪ್ರಕರಣ   ಆರೋಪಿಗಳ ಪತ್ತೆಗೆ ಗಡುವು ನೀಡಿದ ಶ್ರೀ ಪ್ರಣವಾನಂದ ಸ್ವಾಮೀಜಿ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ ನ. 16 : ಕಳೆದ 2-3 ದಿನಗಳ ಹಿಂದೆ ಹೊಳಲ್ಕೆರೆ ತಾಲ್ಲೂಕು ಉಪ್ಪಿಗೇರನಹಳ್ಳಿ ಗ್ರಾಮದಲ್ಲಿ ನಮ್ಮ ಈಡಿಗ ಸಮುದಾಯದ ಮಹಿಳೆಯ ಹತ್ಯೆಯಾಗಿದೆ. ಆರೋಪಿಗಳ ಪತ್ತೆಗಾಗಿ ಈ ತಿಂಗಳ 29ರವರೆಗೆ ಗಡುವು ನೀಡುತ್ತೇವೆ. ಒಂದು ವೇಳೆ ಆರೋಪಿಗಳನ್ನು ಬಂಧಿಸದಿದ್ದರೆ ನವೆಂಬರ್ 30 ರಂದು ಎಸ್.ಪಿ ಕಛೇರಿಯ ಮುಂದೆ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದಾಗಿ ರಾಷ್ಟ್ರೀಯ ಈಡಿಗ ಮಹಾಮಂಡಳಿದ ಅಧ್ಯಕ್ಷರಾದ  ಶ್ರೀ ಪ್ರಣವಾನಂದ ಸ್ವಾಮೀಜಿ ಎಚ್ಚರಿಸಿದ್ದಾರೆ.

Advertisement

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಅದಗೆಟ್ಟಿದೆ... ಮೃತ ಮಹಿಳೆಯ ಮರಣೋತ್ತರ ಪರೀಕ್ಷಾ ವರದಿ ಹಾಗೂ ಎಫ್.ಎಸ್.ಎಲ್ ವರದಿಯನ್ನು ಶೀಘ್ರವಾಗಿ ತರಿಸಿಕೊಂಡು ತನಿಖೆಯನ್ನು ತ್ವರಿತಗೊಳಿಸಬೇಕಿದೆ ನಾನು ಸಹಾ ಇಂದು ಅಲ್ಲಿಗೆ ಭೇಟಿ  ನೀಡುವುದರ ಮೂಲಕ ಮೃತ ಕುಟುಂಬದವರಿಗೆ ಸಾತ್ವಾಂನವನ್ನು ಹೇಳಿ ಬಂದಿದ್ದೇನೆ ಅಲ್ಲಿನ ನೆರೆ ಹೊರೆಯವರು ಹೇಳುವ ಪ್ರಕಾರ ಆ ಮಹಿಳೆ ತುಂಬಾ ಸಾದುವಾಗಿದ್ದು ಯಾರ ತಂಟೆಗೆ ಸಹಾ ಹೋಗದೆ ತನ್ನಪಾಡಿಗೆ ತಾನು ಇದ್ದವಳು ತನ್ನ ಇಬ್ಬರ ಹೆಣ್ಣು ಮಕ್ಕಳಿಗೆ ಮದುವೆಯನ್ನು ಮಾಡಿ ಕೊಟ್ಟಿದ್ದಾಳೆ. ತನ್ನ ತಂಗಿ ಹಾಗೂ ಆಕೆಯ ಗಂಡನ ಜೊತೆಯಲ್ಲಿ ಜೀವನ ನಡೆಸುತ್ತಿದ್ದಳು ಎಂದು ತಿಳಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‍ನವರು ತನಿಖೆಯನ್ನು ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಆರೋಪಿ ಬಗ್ಗೆ ಯಾವುದೇ ಸುಳಿಯು ಸಿಕ್ಕಿಲ್ಲ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವನ್ನು ರಚಿಸಿ ಹತ್ಯೆಯ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದ ಶ್ರೀಗಳುಆರೋಪಿಗಳ ಪತ್ತೆಗಾಗಿ ಈ ತಿಂಗಳ 29ರವರೆಗೆ ಗಡುವು ನೀಡುತ್ತೇವೆ.. ಒಂದು ವೇಳೆ ಆರೋಪಿಗಳನ್ನು ಬಂಧಿಸದಿದ್ದರೆ ದಿನಾಂಕ:30.11.2024 ರಂದು ಎಸ್.ಪಿ ಕಛೇರಿಯ ಮುಂದೆ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದಾಗಿ ಎಚ್ಚರಿಸಿದರು.

ಈ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ 3-4 ದಿನಗಳಲ್ಲಿ  ಮಾನ್ಯ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಇದ್ದಲ್ಲದೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದ ಮೊರೆ ಹೋಗಲು ವಕೀಲರ ಜೊತೆ ಚರ್ಚೆ ನಡೆಸಲಿದ್ದೇವೆ ಎಂದು ಶ್ರೀ ಪ್ರಣವಾನಂದ ಶ್ರೀಗಳು ತಿಳಿಸಿದರು.

ಈಡಿಗ ಸಮಾಜದ ಜಿಲ್ಲಾ ಅಧ್ಯಕ್ಷ, ತಿಪ್ಪೇಸ್ವಾಮಿ.ಜಿ, ಜಿಲ್ಲಾ ಉಪಾಧ್ಯಕ್ಷ ಎಸ್.ಮೋಹನ್‍ಕುಮಾರ್,   ದಾವಣಗೆರೆ ಜಿಲ್ಲಾಧ್ಯಕ್ಷ ಪ್ರತಾಪ್, ಜಂಟಿ ಕಾರ್ಯದರ್ಶಿ ಮೋಹನ್, ಮಹಾಂತೇಶ್ ಭಾಗವಹಿಸಿದ್ದರು

Advertisement
Tags :
Advertisement