ಪಿಎಂ-ವಿದ್ಯಾಲಕ್ಷ್ಮೀ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ : ಯಾರಿಗೆಲ್ಲ ಇದರಿಂದ ಲಾಭವಿದೆ..?
ನವದೆಹಲಿ: ಇಂದಿನ ಕೇಂದ್ರ ಸಚಿವ ಸಂಪುಟದಲ್ಲಿ ಪಿಎಂ - ವಿದ್ಯಾಲಕ್ಷ್ಮೀ ಯೋಜನೆಗೆ ಅನುಮೋದನೆ ಸಿಕ್ಕಿದೆ. ಕೇಂದ್ರ ಸರ್ಕಾರ ಶುರು ಮಾಡಿರುವ ಕಾರ್ಯಕ್ರಮ ಇದಾಗಿದೆ. ಈ ಯೋಜನೆ ಮೂಲಕ ಬಡ ಹೆಣ್ಣು ಮಕ್ಕಳು ಓದುವ ಆಸೆಯನ್ನು ಈಡೇರಿಸಿಕೊಳ್ಳಬಹುದು. ಆರ್ಥಿಕ ಸಮಸ್ಯೆಯಿಂದ ಉನ್ನತ ಶಿಕ್ಷಣ ಮಾಡಲು ಸಾಧ್ಯವಾಗದೆ ಇರುವವರು ಈ ಯೋಜನೆ ಮೂಲಕ ಉನ್ನತ ಶಿಕ್ಷಣ ಮಾಡಬಹುದು. ಈ ಸಂಬಂಧ ಇಂದು ಪತ್ರಿಕಾ ಮಾಹಿತಿ ಬ್ಯೂರೋ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಉನ್ನತ ಶಿಕ್ಷಣ ಸಂಸ್ಥೆಗೆ ತಗುಲುವ ವೆಚ್ಚ, ಬೋಧನ ಶುಲ್ಕ, ಇತರ ವೆಚ್ಚಗಳನ್ನು ಭರಿಸಲು ಬ್ಯಾಂಕ್ ಗಳಿಂದ ಹಾಗೂ ಹಣಕಾಸು ಸಂಸ್ಥೆಗಳಿಂದ ಕೊಲ್ಯಾಟರಲ್ ಗಳು ಇಲ್ಲದೆ ಗ್ಯಾರಂಟಿದಾರರು ಇಲ್ಲದೆ ಸಾಲವನ್ನು ಪಡೆಯಬಹುದಾಗಿದೆ. ಉನ್ನತ ಶಿಕ್ಷಣ ಇಲಾಖೆಯು ಪಿಎಂ - ವಿದ್ಯಾಲಕ್ಷ್ಮೀ ಎಂಬ ಏಕೈಕ ಪೋರ್ಟಲ್ ಹೊಂದಿದ್ದು, ಎಲ್ಲಾ ಬ್ಯಾಂಕುಗಳು ಬಳಸಲು ಸರಳೀಕೃತ ಅಪ್ಲಿಕೇಷನ್ ಪ್ರಕ್ರಿಯೆ ಮೂಲಕ ವಿದ್ಯಾರ್ಥಿಗಳು ಶಿಕ್ಷಣ ಸಾಲ ಮತ್ತು ಬಡ್ಡಿ ರಿಯಾಯಿತಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಉನ್ನತ ಶಿಕ್ಷಣ ಇಲಾಖೆಯು ಏಕೀಕೃತ ಪೋರ್ಟಲ್ ಅನ್ನು ರಿಲೀಸ್ ಮಾಡುತ್ತದೆ. ಉನ್ನತ ಶಿಕ್ಷಣ ಇಲಾಖೆಯು “PM-Vidyalaxmi” ಎಂಬ ಕ್ರೋಢೀಕೃತ ಪೋರ್ಟಲ್ ಅನ್ನು ಪರಿಚಯಿಸುತ್ತಿದೆ. ಅಲ್ಲಿ ವಿದ್ಯಾರ್ಥಿಗಳು ವಿದ್ಯಾಲಕ್ಷ್ಮಿ ಯೋಜನೆಯಡಿ ಶಿಕ್ಷಣ ಸಾಲ ಮತ್ತು ಬಡ್ಡಿ ರಿಯಾಯಿತಿಗಾಗಿ ಅರ್ಜಿ ಸಲ್ಲಿಸಬಹುದು.
ಈ ಯೋಜನೆಯು NIRF ಶ್ರೇಯಾಂಕದಲ್ಲಿ ಅಗ್ರ 100ರೊಳಗೆ ಸ್ಥಾನ ಪಡೆದಿರುವ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತದೆ. ಜೊತೆಗೆ NIRFನಲ್ಲಿ 101-200ರಲ್ಲಿ ರಾಜ್ಯ ಸರ್ಕಾರದ HEIಗಳು ಮತ್ತು ಎಲ್ಲಾ ಕೇಂದ್ರ ಸರ್ಕಾರದ ಆಡಳಿತದ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೂ ಇದು ಅನ್ವಯವಾಗಲಿದೆ. ವರ್ಷಕ್ಕೆ 22 ಲಕ್ಷ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದು.