ಪ್ಯಾನ್ ಕಾರ್ಡ್ 2.0 ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ : ಮೊದಲಿದ್ದ ಪ್ಯಾನ್ ಕಾರ್ಡ್ ಅಮಾನ್ಯವಾ ?
ಸುದ್ದಿಒನ್ |
ಭಾರತದಲ್ಲಿ ವಿವಿಧ ವಿಶೇಷ ವೈಶಿಷ್ಟ್ಯಗಳು ಮತ್ತು ಸುಧಾರಿತ ಸೌಲಭ್ಯಗಳನ್ನು ಹೊಂದಿರುವ ಹೊಸ ಕಾರ್ಡ್ PAN 2.0 ಅನ್ನು ವಿತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಹಂತದಲ್ಲಿ ಜನರು ಈ PAN 2.0 ಕುರಿತು ವಿಭಿನ್ನ ಅಭಿಪ್ರಾಯಗಳು ಮತ್ತು ಪ್ರಶ್ನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಬಳಸುತ್ತಿರುವ ಪ್ಯಾನ್ ಕಾರ್ಡ್‌ಗಳು ಅಮಾನ್ಯವಾಗುತ್ತವೆಯಾ ? ಮತ್ತು ಪ್ರತಿಯೊಬ್ಬರೂ ಹೊಸ ಪ್ಯಾನ್ ಕಾರ್ಡ್‌ಗಳನ್ನು ಖರೀದಿಸಬೇಕು ಎಂಬ ಪ್ರಶ್ನೆಗಳನ್ನು ಜನರಲ್ಲಿ ಮೂಡುತ್ತಿವೆ. ಈ ಪ್ರಶ್ನೆಗಳಿಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ವಿವರಣೆ ನೀಡಿದ್ದಾರೆ. ಈ ಹಂತದಲ್ಲಿ ಈ PAN 2.0 ಎಂದರೇನು? ಅದನ್ನು ಪಡೆಯುವುದು ಹೇಗೆ? ಅದರ ವೈಶಿಷ್ಟ್ಯಗಳೇನು? ಎಂಬ ವಿವರಗಳನ್ನು ತಿಳಿಸಿದ್ದಾರೆ.
ಭಾರತೀಯ ನಾಗರಿಕರಿಗೆ PAN ಕಾರ್ಡ್ ಏಕೆ ಬೇಕು ?
ಭಾರತೀಯ ನಾಗರಿಕರಿಗೆ PAN ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಏಕೆಂದರೆ ನಾಗರೀಕರು ಆದಾಯ ತೆರಿಗೆಗೆ ಒಳಪಟ್ಟಿರುವುದೇ ಇದಕ್ಕೆ ಪ್ರಮುಖ ಕಾರಣ. ಆದಾಯ ತೆರಿಗೆ ಮತ್ತು ಪ್ಯಾನ್ ಕಾರ್ಡ್ ನಡುವಿನ ಸಂಬಂಧವೇನು? ಎಂಬ ಅನುಮಾನ ನಿಮಗಿರಬಹುದು. ಆದಾಯ ತೆರಿಗೆ ಮತ್ತು ಪ್ಯಾನ್ ಕಾರ್ಡ್ ಖಂಡಿತವಾಗಿಯೂ ಒಂದಕ್ಕೊಂದು ಸಂಬಂಧಿಸಿವೆ. ಇದನ್ನು PAN ಕಾರ್ಡ್ (PAN - permanent account number) ಎಂದು ಕರೆಯಲಾಗುತ್ತದೆ. ಇದರ ಮೂಲಕ, ವ್ಯಕ್ತಿಯು ಮಾಡಿದ ಯಾವುದೇ ನಗದು ವ್ಯವಹಾರವನ್ನು ಪ್ಯಾನ್ ಸಂಖ್ಯೆಯಲ್ಲಿ ದಾಖಲಿಸಲಾಗುತ್ತದೆ. ಈ ನೋಂದಣಿ ಯಾವುದೇ ಅಕ್ರಮ ನಗದು ವಹಿವಾಟುಗಳನ್ನು ತಡೆಯುತ್ತದೆ. ಒಬ್ಬ ವ್ಯಕ್ತಿಯು ಸಾಕಷ್ಟು ನಗದು ವಹಿವಾಟು ನಡೆಸಿದರೆ ಅಥವಾ ಸಾಕಷ್ಟು ಆದಾಯವನ್ನು ಗಳಿಸಿದರೆ, ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಮೂಲಕ ಮೇಲ್ವಿಚಾರಣೆ ಮಾಡುತ್ತದೆ. ಇದಲ್ಲದೇ ಪಾನ್ ಕಾರ್ಡ್‌ನ ನಂಬರ್ ಮೂಲಕ ಆದಾಯ ತೆರಿಗೆ ಪಾವತಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದು. ಭ್ರಷ್ಟಾಚಾರ ಮತ್ತು ವಂಚನೆ ತಡೆಯುವಲ್ಲಿ ಪ್ಯಾನ್ ಕಾರ್ಡ್ ಪ್ರಮುಖ ಪಾತ್ರ ವಹಿಸುತ್ತದೆ.
PAN 2.0 ಯೋಜನೆಯು ತಾಂತ್ರಿಕವಾಗಿ ಮುಂದುವರಿದಿದೆ. ಇದಲ್ಲದೆ, ತೆರಿಗೆ ಪಾವತಿದಾರರಿಗೆ ಸುಲಭವಾಗುವಂತೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಪ್ಯಾನ್ 2.0 ಯೋಜನೆಗಾಗಿ ಕೇಂದ್ರ ಸರ್ಕಾರವು ರೂ.1,435 ಕೋಟಿಗಳನ್ನು ಖರ್ಚು ಮಾಡಿದೆ. ಈ ಯೋಜನೆಯಿಂದ ಸಾರ್ವಜನಿಕರು ಅನೇಕ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಪ್ಯಾನ್ 2.0 ಯೋಜನೆಯನ್ನು ಅನುಮೋದಿಸಿದಾಗಿನಿಂದ, ಜನರು ಅದರ ಬಗ್ಗೆ ಹಲವಾರು ಪ್ರಶ್ನೆಗಳನ್ನು ಮತ್ತು ಗೊಂದಲಗಳನ್ನು ಹೊಂದಿದ್ದಾರೆ.
PAN 2.0 ಬಗ್ಗೆ ಸಾರ್ವಜನಿಕ ಪ್ರಶ್ನೆಗಳು :
ಪ್ಯಾನ್ ಕಾರ್ಡ್ ಅಮಾನ್ಯವೇ?
ಪ್ಯಾನ್ 2.0 ಖರೀದಿಸಿದರೆ ಹಳೆಯ ಪ್ಯಾನ್ ಕಾರ್ಡ್ ಮಾನ್ಯವಾಗುವುದಿಲ್ಲವಾ ಎಂಬ ಪ್ರಶ್ನೆ ಜನರಲ್ಲಿದೆ. ಕೇಂದ್ರ ಪ್ಯಾನ್ ಕಾರ್ಡ್ ತಂತ್ರಜ್ಞಾನವನ್ನು ಮಾತ್ರ ಬದಲಾಯಿಸಿದೆ. ಪ್ಯಾನ್ ಸಂಖ್ಯೆ ಬದಲಾಗಿಲ್ಲ. ಆದ್ದರಿಂದ ಜನರು ಆತಂಕ ಪಡುವುದು ಬೇಡ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ವಿವರಿಸಿದ್ದಾರೆ.
ಹೊಸ ಪ್ಯಾನ್ ಕಾರ್ಡ್‌ಗೆ ಶುಲ್ಕ ಪಾವತಿಸಬೇಕಾ ?
ಪ್ಯಾನ್ 2.0 ಯೋಜನೆಯ ಘೋಷಣೆಯೊಂದಿಗೆ, ಹೊಸ ಪ್ಯಾನ್ ಕಾರ್ಡ್ ನೀಡಲಾಗುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಪ್ಯಾನ್ 2.0 ಯೋಜನೆಯಡಿ ಜನರಿಗೆ ಖಂಡಿತವಾಗಿ ಹೊಸ ಪ್ಯಾನ್ ಕಾರ್ಡ್ ನೀಡಲಾಗುವುದು. ಪ್ಯಾನ್ 2.0 ಸರ್ಕಾರದ ಹೊಸ ಯೋಜನೆಯಾಗಿದೆ. ಅಲ್ಲದೆ ಇದು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ. ಆದ್ದರಿಂದ ಜನರು ಹೊಸ ಪ್ಯಾನ್ ಕಾರ್ಡ್ ನೀಡಲು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಕೇಂದ್ರ ಸಚಿವ ಸಂಪುಟವು ಪ್ಯಾನ್ 2.0 ಯೋಜನೆಯನ್ನು ಅನುಮೋದಿಸಿರುವುದರಿಂದ, ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ಲಭ್ಯವಾಗಲಿದೆ.