For the best experience, open
https://m.suddione.com
on your mobile browser.
Advertisement

ಯೂನಿಯನ್ ಬ್ಯಾಂಕ್ ಹಗರಣ : ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಶಿವರಾಮೇಗೌಡ..!

09:33 PM Aug 05, 2024 IST | suddionenews
ಯೂನಿಯನ್ ಬ್ಯಾಂಕ್ ಹಗರಣ   ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಶಿವರಾಮೇಗೌಡ
Advertisement

ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ಮೂಡಾ ಹಗರಣ‌ ಹಾಗೂ ವಾಲ್ಮೀಕಿ ಹಗರಣ ಸಾಕಷ್ಟು ಸದ್ದು ಮಾಡ್ತಾ ಇದೆ. ಇದರ ನಡುವೆ ಯೂನಿಯನ್ ಬ್ಯಾಂಕ್ ಹಗರಣ ಸಂಬಂಧ ಬಂಧನದ ಭೀತಿ ಎದುರಿಸುತ್ತಿರುವ ಬಿಜೆಪಿ ನಾಯಕ ಎಲ್.ಆರ್.ಶಿವರಾಮೇಗೌಡ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ.

Advertisement
Advertisement

ಯೂನಿಯನ್ ಬ್ಯಾಂಕ್ ಗೆ 20 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಶಿವರಾಮೇಗೌಡರು ಬಂಧನದ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ಕೋರ್ಟ್ ಗೆ ಇಂದು ನಿರೀಕಗಷಣಾ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಸಿಬಿಐ ಪರ ಅಭಿಯೋಜಕರು ಕಾಲಾವಕಾಶ ಕೋರಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಸಿಬಿಐಗೆ ಸೂಚಿಸಿದ ಕೋರ್ಟ್ ವಿಚಾರಣೆಯನ್ನು ಆಗಸ್ಟ್ 7 ಕ್ಕೆ ಮುಂದೂಡಿದೆ. ಜಮೀನು ಮಾಲೀಕರೊಂದಿಗೆ ಸೇರಿ ಬ್ಯಾಂಕ್ ಗಳಿಂದ 32 ಕೋಟಿ ರೂಪಾಯಿ ಪಡೆದುಕೊಳ್ಳಲಾಗಿದೆ. ಶಾಲೆಯ ಬಾಡಿಗೆ ಹಣವನ್ನು ಬ್ಯಾಂಕ್ ಗೆ ನೀಡುವುದಾಗಿ ಒಡಂಬಡಿಕೆ ಮಾಡಲಾಗಿದೆ.

ಇನ್ನು ಎಲ್.ಆರ್.ಶಿವರಾಮೇಗೌಡ ರಾಯಲ್ ಕಾನ್​ಕಾರ್ಡ್ ಸಂಸ್ಥೆಯ ಟ್ರಸ್ಟಿ ಆಗಿದ್ದು, ವರ್ತೂರಿನ ಅಂಬಲೀಪುರದ ಜಮೀನಿನ ಮೇಲೆ ಮಾಲೀಕರು ಸಾಲ ಪಡೆದಿದ್ದಾರೆ. ಒಪ್ಪಂದದಂತೆ ಸಾಲ ತೀರಿಸದೇ ಇದ್ದಾಗ ವಂಚನೆ ಆರೋಪದಡಿ ಸಿಬಿಐ ಕೇಸ್​ ದಾಖಲಿಸಲಾಗಿದೆ. ಯೂನಿಯನ್ ಬ್ಯಾಂಕ್ ಹಗರಣ ಸಂಬಂಧ ಬಂಧನದ ಭೀತಿ ಎದುರಿಸುತ್ತಿರುವ ಬಿಜೆಪಿ ನಾಯಕ ಎಲ್.ಆರ್.ಶಿವರಾಮೇಗೌಡ ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಈಗಾಗಲೇ ಶಿವರಾಮೇಗೌಡ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ವಂಚನೆ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿದ್ದಾರೆ. ಈಗ ಯೂನಿಯನ್ ಬ್ಯಾಂಕ್ ಹಗರಣದಲ್ಲೂ ಅರ್ಜಿ ಹಾಕಿದ್ದು, ಜಾಮೀನು ಅರ್ಜಿಯ ವಿಚಾರಣೆಯ ಬಳಿಕ ತಿಳಿಯಲಿದೆ.

Advertisement

Advertisement
Tags :
Advertisement