Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬ್ಯಾಂಕ್ ಸಾಲಕ್ಕೆ ಜಮೆಯಾದ ಬರದ ಹಣ : ರೈತರಿಗೆ ಸಂಕಷ್ಟ

01:33 PM May 15, 2024 IST | suddionenews
Advertisement

ಕಳೆದ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರ ಬೆಳೆ ಎಲ್ಲಾ ನೆಲ ಕಚ್ಚಿತ್ತು. ಬರದ ಛಾಯೆ ಆವರಿಸಿಕೊಂಡಿತ್ತು. ಇದರಿಂದಾಗಿ ರೈತರು ಸಾಕಷ್ಟು ನಷ್ಟ ಅನುಭವಿಸಿದರು. ಕೇಂದ್ರದಿಂದ ಬರ ಪರಿಹಾರಕ್ಕಾಗಿ ಸಾಕಷ್ಟು ಮನವಿ ಮಾಡಿದ ಮೇಲೆ ಇತ್ತಿಚೆಗೆ ಕೇಂದ್ರದಿಂದ 3,454 ಕೋಡಿ ರೂಒಅಯಿ ಬಿಡುಗಡೆ ಮಾಡಲಾಗಿತ್ತು. ಆದರೆ ಆ ಬರ ಪರಿಹಾರ ಇನ್ನು ರೈತರ ಕೈ ಸೇರಿಲ್ಲ. ಇದರಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

Advertisement

 

ಯಾಕಂದ್ರೆ ಬರ ಪರಿಹಾರ ರೈತರ ಖಾತೆಗೆ ಜಮೆಯಾದರೂ ಬ್ಯಾಂಕುಗಳು ಆ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿವೆ. ಕೆಲವು ಬ್ಯಾಂಕುಗಳಲ್ಲಿ ಬೆ ಪರಿಹಾರದ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವುದಕ್ಕೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ಯಾದಗಿರಿ ಜಿಲ್ಲೆಯ ಹುಣಸಗಿಯ ಪ್ರಗತಿ ಕೃಷ್ಣ ಬ್ಯಾಂಕ್ ನಲ್ಲಿ ಸಾಲದ ಖಾತೆಗೆ ಬರ ಪರಿಹಾರದ ಹಣವನ್ನು ಜಮೆ ಮಾಡಿಕೊಳ್ಳಲಾಗಿದೆ. ಈ ಭಾಗದ ಅದೆಷ್ಟೋ ರೈತರಿಗೆ ಈ ಸಮಸ್ಯೆ ಎದುರಾಗಿದೆ. ಬರದಿಂದಾಗಿ ಸಾಲಾ ಸೋಲ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಅನುಕೂಲವಾಗಲೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿದೆ.

ಬ್ಯಾಂಕ್ ಸಾಲ ಕೊಟ್ಟು ರೈತರ ಉಳಿತಾಯದ ಖಾತೆಗೆ ಜಮಾ ಮಾಡದೆ ಸಾಲದ ಖಾತೆಗೆ ಜಮೆ ಮಾಡಲಾಗಿದೆ. ಸರ್ಕಾರ ಪ್ರತಿ ಎಕ್ಟೇರ್ ಗೆ ಮಳೆಯಾಶ್ರಿತ ಒಣ ಬೇಸಾಯಕ್ಕೆ 8,500 ರೂಪಾಯಿ ನೀರಾವರಿಗೆ 17,000 ರೂಪಾಯಿ. ಬಹುವಾರ್ಷಿಕ/ತೋಟಗಾರಿಕರ ಬೆಳೆಗೆ 22,500 ರೂಪಾಯಿ ನೀಡಲಾಗಿದೆ. ಪರಿಹಾರ ಬಂದರೆ ಈ ಬಾರಿಯ ವ್ಯವಸಾಯಕ್ಕಾದರೂ ಅನುಕೂಲವಾಗಲಿದೆ ಎಂದುಕೊಂಡಿದ್ದರು. ಈಗಾಗಲೇ ಮುಂಗಾರು ಶುರುವಾಗಿದ್ದು, ಉಳುಮೆ ಕಡೆಗೆ ರೈತ ಗಮನ ಕೊಡುತ್ತಿದ್ದಾನೆ. ಆದರೆ ಇಂಥ ಸಮಯದಲ್ಲಿ ಬರ ಪರಿಹಾರವೂ ಸಿಗದೆ ಕಂಗಾಲಾಗಿದ್ದಾರೆ.

Advertisement
Tags :
Bank loanbank loansbengaluruchitradurgadistress for farmerssuddionesuddione newsUnearned money depositedಚಿತ್ರದುರ್ಗಬೆಂಗಳೂರುಬ್ಯಾಂಕ್ ಸಾಲರೈತರಿಗೆ ಸಂಕಷ್ಟಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article