ಉಪೇಂದ್ರ ನಿರ್ದೇಶನದ ಯುಐ ರಿಲೀಸ್ : ಅಬ್ಬರದ ವಾತಾವರಣ
ಉಪೇಂದ್ರ ನಿರ್ದೇಶಕರಾಗಿ ಮೊದಲಿನಿಂದಲೂ ಎಲ್ಲರನ್ನೂ ಅಚ್ಚರಿಕೆ ದೂಡುತ್ತಾ ಬಂದಿದ್ದಾರೆ. ಉಪೇಂದ್ರ ನಾಯಕರಾಗುವ ಮೊದಲು ನಿರ್ದೇಶಕರಾಗಿಯೇ ಅಪಾರವಾದ ಅಭಿಮಾನಿ ಬಳಗವನ್ನು ಸಂಪಾದನೆ ಮಾಡಿಕೊಂಡವರು. ಉಪೇಂದ್ರ ಅವರು ಆಕ್ಷನ್ ಕಟ್ ಹೇಳ್ತಾ ಇದಾರೆ ಅಂದ್ರೆ ಆರಂಭದಿಂದಾನೂ ಅಲ್ಲಿ ನಿರೀಕ್ಷೆ ಹೆಚ್ಚಾಗುತ್ತದೆ. ಮೊದಲ ದಿನದ ಶೋಗಾಗಿಯೇ ಎಲ್ಲರು ತುದಿಗಾಲಲ್ಲಿ ನಿಂತಿರುತ್ತಾರೆ. ಇಂದು ಎಲ್ಲೆಡೆ ಯುಐ ಸಿನಿಮಾ ರಿಲೀಸ್ ಆಗಿದ್ದು, ಥಿಯೇಟರ್ ಗಳು ಅಬ್ಬರಿಸುತ್ತಿವೆ.
ಅಡ್ವಾನ್ಸ್ ಬುಕ್ಕಿಂಗ್ ನಲ್ಲಿಯೇ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಉಪ್ಪಿ ಸಿನಿಮಾದಲ್ಲಿ ಟೈಟಲ್ ಕಾರ್ಡ್ ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಯುಐನಲ್ಲೂ ಆರಂಭದಲ್ಲಿಯೇ ಬುದ್ದಿವಂತಿಕೆಗೆ ಸವಾಲು ಹಾಕಲಾಗಿದೆ. ನೀವೂ ಬುದ್ದಿವಂತರಾಗಿದ್ರೆ ಥಿಯೇಟರ್ ನಿಂದ ಎದ್ದೋಗಿ ಎಂದು ಹಾಕಲಾಗಿದೆ. ಟೀಸರ್, ವಾರ್ನರ್, ಟ್ರೋಲ್ ಸಾಂಗ್, ಚೀಒ್ ಸಾಂಗ್ ಅಂತೆಲ್ಲ ಸದ್ದು ಮಾಡಿದ್ದ ಸಿನಿಮಾ ಟೈಟಲ್ ಕಾರ್ಡ್ ನಲ್ಲೂ ಸದ್ದು ಮಾಡಿದೆ.
ಸಿನಿಮಾವನ್ನು ಒಮ್ಮೆ ನೋಡಿದವರೇ ಮತ್ತೊಂದು ಶೋಗೆ ಟಿಕೆಟ್ ಗಾಗಿ ಮುಗಿ ಬೀಳುತ್ತಿದ್ದಾರೆ. ಒಮ್ಮೆ ನೋಡಿದರೆ ಯಾರೂ ಅರ್ಥವಾಗುವುದಿಲ್ಲ. ಫೋಕಸ್ ಮಾಡಿದರೆ ಅರ್ಥವಾಗುತ್ತದೆ ಎಂದು. ಅರ್ಥ ಆದವರು ಸಿನಿಮಾ ಬ್ಯಾನ್ ಮಾಡಿ ಎಂದು ಪ್ರತಿಭಟನೆ ಮಾಡುತ್ತಿರುತ್ತಾರೆ. ಈ ಚಿತ್ರದ ವಿಮರ್ಶೆ ಬರೆಯಲು ಹೋದ ಪತ್ರಕರ್ತನಿಗೆ ಅರ್ಥವೇ ಆಗಲ್ಲ. ಆಗ ನೇರವಾಗಿ ಉಪೇಂದ್ರ ಅವರನ್ನೇ ಹುಡುಕಿಕೊಂಡು ಹೋಗುತ್ತಾನೆ. ಆದರೆ ಅವರು ಸಿಗಲ್ಲ. ಆದರೆ ಅವರೊಂದು ಕಥೆ ಬರೆದು ಸುಟ್ಟು ಹಾಕಲು ಹೋಗಿದ್ದ ಪ್ರತಿ ಸಿಗುತ್ತೆ. ಟೈಟಲ್ ಕಾರ್ಡ್ ನಾಮದ ಕಥೆ ಏನು ಎಂಬುದೆಲ್ಲ ತಿಳಿಯುತ್ತದೆ. ಇದು ಸಿನಿಮಾದ ಕಥೆ.
ಉಪೇಂದ್ರ ಅವರ ಸಿನಿಮಾ ಅಂದ್ರೆ ಜನ ಮುಗಿಬೀಳುತ್ತಾರೆ. ಇಂದು ಥಿಯೇಟರ್ ಗಳ ಮುಂದೆ ಜನರ ಸೆಲೆಬ್ರೇಷನ್ ಜೋರಾಗಿತ್ತು. ಉಪೇಂದ್ರ ಅವರ ಕಟೌಟ್ ಗೆ ಹಾರ ಹಾಕಿ ಸಂಭ್ರಮಿಸಿದರು. ಪಟಾಕಿ ಸಿಡಿಸಿ ಖುಷಿ ಪಟ್ಟಿದ್ದಾರೆ. ವರ್ಷದ ಕೊನೆಯಲ್ಲಿ ಒಳ್ಳೆ ಒಪೆನಿಂಗ್ ಪಡೆದುಕೊಂಡಿದೆ.