Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬಂದಿದೆ : ಭವಿಷ್ಯ ಬದಲಾವಣೆ, ಬೇವು - ಬೆಲ್ಲದ ಮಹತ್ವ ಇಲ್ಲಿದೆ ಮಾಹಿತಿ

07:08 AM Apr 09, 2024 IST | suddionenews
Advertisement

 

Advertisement

ಸುದ್ದಿಒನ್ : ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬಂದಿದೆ. ಈ ಯುಗಾದಿ ಕೂಡ ಹೊಸ ಹರುಷವ ತರಲಿ ಎಂದೇ ಎಲ್ಲರೂ ಹಾರೈಸುತ್ತಾರೆ. ಯುಗಾದಿ ಎಂದರೆ ಹಿಂದೂಗಳ ಪಾಲಿನ ಹೊಸ ವರ್ಷವೇ ಸರಿ. ಯುಗ ಆದಿ = ಯುಗಾದಿ. ಈ ದಿನ ಹಲವು ವಿಶೇಷತೆಗಳು ಇದೆ. ಎಷ್ಟೋ ಜನರ ರಾಶಿ ಫಲವು ಬದಲಾಗುತ್ತದೆ. ಭವಿಷ್ಯವೂ ಬದಲಾವಣೆಯಾಗಲಿದೆ. ಆಕಾಶ ವಸ್ತುಗಳ ಭವಿಷ್ಯದ ಸ್ಥಾನಗಳು, ನಕ್ಷತ್ರದ ಪ್ರಮಾಣಗಳು ಮತ್ತು ನಕ್ಷತ್ರಪುಂಜಗಳ ಪರಾಕಾಷ್ಠೆಯ ದಿನಾಂಕಗಳು ಇರುತ್ತದೆ.

ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿಯನ್ನು ಹೊಸ ವರ್ಷದ ದಿನವಾಗಿ ಆಚರಿಸಲಾಗುತ್ತದೆ. ಈ ಹಬ್ಬವು ಹೊಸ ಯುಗದ ಆರಂಭವನ್ನು ಸಂಕೇತಿಸುತ್ತದೆ, ಏಕೆಂದರೆ ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನು ಈ ಮಂಗಳಕರ ದಿನದಂದು ಸೃಷ್ಟಿ ಪ್ರಕ್ರಿಯೆಯನ್ನು ಪ್ರಾರಂಭಿಸಿದನು ಎಂಬುದು ಈ ಹಬ್ಬಕ್ಕೆ ಸಂಬಂಧಿಸಿದ ಪೌರಾಣಿಕ ನಂಬಿಕೆಯಾಗಿದೆ.

Advertisement

 

ಯುಗಾದಿ ಹಬ್ಬ ಎಂದ ಕೂಡಲೇ ಆ ದಿನ ಬೇವು-ಬೆಲ್ಲ ಎರಡನ್ನೂ ಸೇವಿಸುತ್ತೇವೆ. ವಿಶೇಷ ಅರ್ಥವನ್ನೊಳಗೊಂಡಿರುವ ಬೇವು-ಬೆಲ್ಲವನ್ನು ಹಿಂದೂಗಳು ತಪ್ಪದೇ ಯುಗಾದಿ ಹಬ್ಬದಂದು ಸವಿಯುತ್ತಾರೆ. ಕರ್ನಾಟಕದಲ್ಲಿ ಬೇವು-ಬೆಲ್ಲವನ್ನು ತಿನ್ನುವುದು ಸಂಪ್ರದಾಯ. ಕಹಿಯಾದ ಬೇವು ಜೀವನದಲ್ಲಿ ಬರುವ ಕಷ್ಟ, ದುಃಖಗಳು, ತೊಡಕುಗಳನ್ನು ಪ್ರತಿಬಿಂಬಿಸಿದರೆ, ಸಿಹಿಯಾದ ಬೆಲ್ಲ ಜೀವನದಲ್ಲಿ ಬರುವ ಸಂತೋಷ ಸಂಭ್ರಮಗಳ ಸಂಕೇತವಾಗಿದೆ. ಜೀವನದಲ್ಲಿ ಸುಖ-ದುಃಖ ಇರುತ್ತದೆ. ಎರಡನ್ನೂ ಅನುಭವಿಸಬೇಕೆಂಬ ಅರ್ಥವನ್ನು ನೀಡುವ ಬೇವು-ಬೆಲ್ಲವನ್ನು ವರ್ಷದ ಆರಂಭದ ದಿನ ತಿನ್ನಬೇಕು ಎಂದು ನಮ್ಮ ಹಿರಿಯರು ಅಂದಿನಿಂದ ಪದ್ಧತಿಯಾಗಿ ಮಾಡಿಕೊಂಡು ಬಂದಿದ್ದಾರೆ.

Advertisement
Tags :
bengaluruchangechitradurgafutureimportanceinformationjaggeryNeemsuddionesuddione newsUgadiಇಲ್ಲಿದೆ ಮಾಹಿತಿಚಿತ್ರದುರ್ಗಬದಲಾವಣೆಬೆಂಗಳೂರುಬೇವು - ಬೆಲ್ಲಭವಿಷ್ಯಮಹತ್ವಯುಗಯುಗಾದಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article