For the best experience, open
https://m.suddione.com
on your mobile browser.
Advertisement

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬಂದಿದೆ : ಭವಿಷ್ಯ ಬದಲಾವಣೆ, ಬೇವು - ಬೆಲ್ಲದ ಮಹತ್ವ ಇಲ್ಲಿದೆ ಮಾಹಿತಿ

07:08 AM Apr 09, 2024 IST | suddionenews
ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬಂದಿದೆ   ಭವಿಷ್ಯ ಬದಲಾವಣೆ  ಬೇವು   ಬೆಲ್ಲದ ಮಹತ್ವ ಇಲ್ಲಿದೆ ಮಾಹಿತಿ
Advertisement

Advertisement
Advertisement

ಸುದ್ದಿಒನ್ : ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬಂದಿದೆ. ಈ ಯುಗಾದಿ ಕೂಡ ಹೊಸ ಹರುಷವ ತರಲಿ ಎಂದೇ ಎಲ್ಲರೂ ಹಾರೈಸುತ್ತಾರೆ. ಯುಗಾದಿ ಎಂದರೆ ಹಿಂದೂಗಳ ಪಾಲಿನ ಹೊಸ ವರ್ಷವೇ ಸರಿ. ಯುಗ + ಆದಿ = ಯುಗಾದಿ. ಈ ದಿನ ಹಲವು ವಿಶೇಷತೆಗಳು ಇದೆ. ಎಷ್ಟೋ ಜನರ ರಾಶಿ ಫಲವು ಬದಲಾಗುತ್ತದೆ. ಭವಿಷ್ಯವೂ ಬದಲಾವಣೆಯಾಗಲಿದೆ. ಆಕಾಶ ವಸ್ತುಗಳ ಭವಿಷ್ಯದ ಸ್ಥಾನಗಳು, ನಕ್ಷತ್ರದ ಪ್ರಮಾಣಗಳು ಮತ್ತು ನಕ್ಷತ್ರಪುಂಜಗಳ ಪರಾಕಾಷ್ಠೆಯ ದಿನಾಂಕಗಳು ಇರುತ್ತದೆ.

Advertisement

ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿಯನ್ನು ಹೊಸ ವರ್ಷದ ದಿನವಾಗಿ ಆಚರಿಸಲಾಗುತ್ತದೆ. ಈ ಹಬ್ಬವು ಹೊಸ ಯುಗದ ಆರಂಭವನ್ನು ಸಂಕೇತಿಸುತ್ತದೆ, ಏಕೆಂದರೆ ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನು ಈ ಮಂಗಳಕರ ದಿನದಂದು ಸೃಷ್ಟಿ ಪ್ರಕ್ರಿಯೆಯನ್ನು ಪ್ರಾರಂಭಿಸಿದನು ಎಂಬುದು ಈ ಹಬ್ಬಕ್ಕೆ ಸಂಬಂಧಿಸಿದ ಪೌರಾಣಿಕ ನಂಬಿಕೆಯಾಗಿದೆ.

Advertisement
Advertisement

ಯುಗಾದಿ ಹಬ್ಬ ಎಂದ ಕೂಡಲೇ ಆ ದಿನ ಬೇವು-ಬೆಲ್ಲ ಎರಡನ್ನೂ ಸೇವಿಸುತ್ತೇವೆ. ವಿಶೇಷ ಅರ್ಥವನ್ನೊಳಗೊಂಡಿರುವ ಬೇವು-ಬೆಲ್ಲವನ್ನು ಹಿಂದೂಗಳು ತಪ್ಪದೇ ಯುಗಾದಿ ಹಬ್ಬದಂದು ಸವಿಯುತ್ತಾರೆ. ಕರ್ನಾಟಕದಲ್ಲಿ ಬೇವು-ಬೆಲ್ಲವನ್ನು ತಿನ್ನುವುದು ಸಂಪ್ರದಾಯ. ಕಹಿಯಾದ ಬೇವು ಜೀವನದಲ್ಲಿ ಬರುವ ಕಷ್ಟ, ದುಃಖಗಳು, ತೊಡಕುಗಳನ್ನು ಪ್ರತಿಬಿಂಬಿಸಿದರೆ, ಸಿಹಿಯಾದ ಬೆಲ್ಲ ಜೀವನದಲ್ಲಿ ಬರುವ ಸಂತೋಷ ಸಂಭ್ರಮಗಳ ಸಂಕೇತವಾಗಿದೆ. ಜೀವನದಲ್ಲಿ ಸುಖ-ದುಃಖ ಇರುತ್ತದೆ. ಎರಡನ್ನೂ ಅನುಭವಿಸಬೇಕೆಂಬ ಅರ್ಥವನ್ನು ನೀಡುವ ಬೇವು-ಬೆಲ್ಲವನ್ನು ವರ್ಷದ ಆರಂಭದ ದಿನ ತಿನ್ನಬೇಕು ಎಂದು ನಮ್ಮ ಹಿರಿಯರು ಅಂದಿನಿಂದ ಪದ್ಧತಿಯಾಗಿ ಮಾಡಿಕೊಂಡು ಬಂದಿದ್ದಾರೆ.

Advertisement
Tags :
Advertisement