For the best experience, open
https://m.suddione.com
on your mobile browser.
Advertisement

ಅಕ್ಕನೇನಿ ಕುಟುಂಬದಲ್ಲಿ ಎರಡೆರಡು ಸಂಭ್ರಮ : ಅಖಿಲ್ ಗೆ 2ನೇ ಎಂಗೇಜ್ಮೆಂಟ್.. ನಾಗಚೈತನ್ಯಗೆ 2ನೇ ಮದುವೆ..!

08:08 PM Nov 26, 2024 IST | suddionenews
ಅಕ್ಕನೇನಿ ಕುಟುಂಬದಲ್ಲಿ ಎರಡೆರಡು ಸಂಭ್ರಮ   ಅಖಿಲ್ ಗೆ 2ನೇ ಎಂಗೇಜ್ಮೆಂಟ್   ನಾಗಚೈತನ್ಯಗೆ 2ನೇ ಮದುವೆ
Advertisement

ತೆಲುಗು ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜು‌ನ ಮನೆಯಲ್ಲಿ ಈಗಾಗಲೇ ಮದುವೆ ಸಂಭ್ರಮ ನಡೆಯುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ನಾಗಚೈತನ್ಯ ಹಾಗೂ ಶೋಭಿತಾ ಎಂಗೇಜ್ಮೆಂಟ್ ಆಗಿದ್ದು, ಮದುವೆಯ ತಯಾರಿ ಜೋರಾಗಿ ನಡೆಯುತ್ತಿದೆ. ಈಗಾಗಲೇ ಶೋಭಿತಾ ಮನೆಯಲ್ಲಿ ಶಾಸ್ತ್ರಗಳು ಶುರುವಾಗಿವೆ. ಇದು ನಾಗಚೈತನ್ಯ ಅವರಿಗೆ ಎರಡನೇ ಮದುವೆ. ಸಮಂತಾ ಜೊತೆಗೆ ಡಿವೋರ್ಸ್ ಪಡೆದ ಮೇಲೆ ಶೋಭಿತಾ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡರು. ಇದರ ಜೊತೆಗೆ ಅಕ್ಕಿನೇನಿ ಕುಟುಂಬದಲ್ಲಿ ಮತ್ತೊಂದು ಮದುವೆ ಸಂಭ್ರಮವೂ ನಡೆಯುತ್ತಿದೆ.

Advertisement

ಅಕ್ಕಿನೇನಿ ನಾಗಾರ್ಜುನ ಅವರ ಎರಡನೇ ಪುತ್ರ ಅಖಿಲ್ ಅಕ್ಕಿನೇನಿಗೂ ಕಂಕಣ ಭಾಗ್ಯ ಕೂಡಿ ಬಂದಿದೆ. ಅಖಿಲ್ ಅಕ್ಕಿನೇನಿ ಮದುವೆಯಾಗುತ್ತಿರುವ ಹುಡುಗಿ ಹೆಸರು ಝೈನಾಬ್ ರಾವಡ್ಜಿ. ಈಗಾಗಲೇ ಈ ಇಬ್ಬರಿಗೂ ನಿಶ್ಚಿತಾರ್ಥ ಆಗಿದೆ. ಈ ವಿಚಾರವನ್ನು ಖುದ್ದು ನಾಗಾರ್ಜುನ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಜೋಡಿಗೆ ಶುಭ ಹಾರೈಸುವಂತೆ ಕೂಡ ತಿಳಿಸಿದ್ದಾರೆ.

ಝೈನಾಬ್ ರಾವಡ್ಜಿಗೆ ಪೇಂಟಿಂಗ್ ನಲ್ಲಿ ಒಲವು ಜಾಸ್ತಿ. ಪೇಂಟಿಂಗ್ ಕ್ಷೇತ್ರದಲ್ಲಿಯೇ ಹೆಸರು ಮಾಡಿದ್ದಾರೆ. ಝೈನಾಬ್ ಗೆ ಈಗ 27 ವರ್ಷ ವಯಸ್ಸು. ಹೈದ್ರಾಬಾದ್ ನಲ್ಲಿ ನಡೆದ ರಪ್ಲೆಕ್ಷನ್ ನಂತಹ ಪ್ರದರ್ಶನಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ. ಝೈನಾಬ್ ಹೈದ್ರಾಬಾದ್ ನಲ್ಲಿ ಹುಟ್ಟಿಬೆಳೆದರು ಕೂಡ ಈಗ ಮುಂಬೈನಲ್ಲಿ ವಾಸವಿದ್ದಾರೆ. ಇದೀಗ ಅಕ್ಕಿನೇನಿ ಕುಟುಂಬದ ಸೊಸೆಯಾಗುತ್ತಿದ್ದಾರೆ. ಅಖಿಲ್ ಗೆ ಇದು ಎರಡನೇ ಎಂಗೇಜ್ಮೆಂಟ್ ಆಗಿದೆ. ಮೊದಲ ಎಂಗೇಜ್ಮೆಂಟ್ ಮುರಿದು ಬಿದ್ದಿತ್ತು. ಶ್ರೀಯಾ ಜೊತೆಗೆ ಮೊದಲ ನಿಶ್ಚಿತಾರ್ಥವಾಗಿತ್ತು. ಅಕ್ಕಿನೇನಿ ನಾಗಾರ್ಜುನ್ ಅವರು ಇದೀಗ ತಮ್ಮ ಇಬ್ಬರು ಮಕ್ಕಳ ಮದುವೆ ಶುಭ ಸಮಾರಂಭದಲ್ಲಿ ಬ್ಯುಸಿಯಾಗಿದ್ದಾರೆ.

Advertisement

Tags :
Advertisement