For the best experience, open
https://m.suddione.com
on your mobile browser.
Advertisement

ಶ್ರೀಕಾಂತ್ ಪೂಜಾರಿ ಗಲಭೆ ಕೇಸ್ ಗೆ ಟ್ವಿಸ್ಟ್ : ಎಫ್ಐಆರ್ ಕಾಪಿಯೇ ಇಲ್ಲವಾ..?

03:27 PM Jan 05, 2024 IST | suddionenews
ಶ್ರೀಕಾಂತ್ ಪೂಜಾರಿ ಗಲಭೆ ಕೇಸ್ ಗೆ ಟ್ವಿಸ್ಟ್   ಎಫ್ಐಆರ್ ಕಾಪಿಯೇ ಇಲ್ಲವಾ
Advertisement

ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿ ಗಲಭೆ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ. 1992ರ ಪ್ರಕರಣದ ದೂರು ಹಾಗೂ ಎಫ್ಐಆರ್ ಕಾಪಿಯೇ ಇಲ್ಲ. ಧಾರವಾಡ ನ್ಯಾಯಾಲಯ ಹಾಗೂ ಪೊಲೀಸರ ಬಳಿ ಕಾಪಿಯೇ ಇಲ್ಲ ಎಂದು ಶ್ರೀಕಾಂತ್ ಪರ ವಕೀಲರಾದಂತ ಸಂಜೀವ್ ಎಂ ಬಡಸ್ಕರ್ ಹೇಳಿಕೆ ನೀಡಿದ್ದಾರೆ. ಯಾವುದೇ ಆಧಾರವೇ ಇಲ್ಲವಾದರೂ ಶ್ರೀಕಾಂತ್ ಪೂಜಾರಿಯನ್ನು ಏಕೆ ಬಂಧಿಸಿದರು..? ಈ ಪ್ರಕರಣ ಖಂಡಿತವಾಗಿಯೂ ನಿಲ್ಲುವುದಿಲ್ಲ, ಬಿದ್ದು ಹೋಗುತ್ತದೆ. ಶ್ರೀಕಾಂತ್ ಪೂಜಾರಿ ಪರ ವಕೀಲರು ತಿಳಿಸಿದ್ದಾರೆ.

Advertisement

ಒಂದನೇ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ನಮ್ಮ ವಾದವನ್ನು ಸಂಕ್ಷಿಪ್ತವಾಗಿ ಮಂಡಿಸಿದ್ದೇವೆ. ಎಫ್ಐಆರ್ ಮತ್ತು ಕಂಪ್ಲೈಂಟ್, ಧಾರಾವಾಡ ಹಾಗೂ ಹುಬ್ಬಳ್ಳಿಯಲ್ಲೂ ಇಲ್ಲ. ಇದರ ಹೊರತಾಗಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಲ್ಲದೆ ಇರುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ‌. ಎಲ್ಲಾ ಕೇಸ್ ಗಳಲ್ಲೂ ಖುಲಾಸೆಯಾಗಿದ್ದಾರೆ. ಜಾಮೀನು ಕೂಡ ಸಿಕ್ಕಿದೆ. ಅವತ್ತಿನಿಂದ ಇಂದಿನವರೆಗೂ ಅಲ್ಲಿಯೇ ವಾಸವಾಗಿದ್ದರು ಪರಾರಿಯಾಗಿದ್ದಾರೆ ಎಂಬುದನ್ನು ಯಾತಕ್ಕಾಗಿ ಹೇಳುತ್ತಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

1992ರಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಯಾಗಿದ್ದಾರೆ ಶ್ರೀಕಾಂತ್ ಪೂಜಾರಿ. ಎ3 ಆರೋಪಿಯಾಗಿದ್ದಾರೆ. ಹನ್ನೆರಡು ಪ್ರಕರಣಗಳು ದಾಖಲಾಗಿತ್ತು. ಮೂರು ಬಾರಿ ಠಾಣೆಗೆ ಕರೆಸಿ ಮುಚ್ಚಳಿಕೆಯನ್ನು ಬರೆಸಿಕೊಂಡಿದ್ದರು. ಈ ಹಿಂದೆ ಜೈಲಿಗೂ ಹೋಗಿ ಬಂದಿದ್ದರು. ಇದೀಗ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಜೈಲು ಸೇರಿದ್ದಾರೆ. ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ, ಬಿಜೆಪಿ ನಾಯಕರು ಕಳೆದ ಎರಡು ದಿನಗಳಿಂದ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ನಮ್ಮನ್ನು ಬಂಧಿಸಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Advertisement

Tags :
Advertisement