For the best experience, open
https://m.suddione.com
on your mobile browser.
Advertisement

ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಟ್ವಿಸ್ಟ್ : ನಾಲ್ವರು ಸಾವು.. ಮೂವರಲ್ಲಿ ಇಲಿ ಜ್ವರ..!

02:13 PM Nov 30, 2024 IST | suddionenews
ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಟ್ವಿಸ್ಟ್   ನಾಲ್ವರು ಸಾವು   ಮೂವರಲ್ಲಿ ಇಲಿ ಜ್ವರ
Advertisement

ಬಳ್ಳಾರಿ: ಇಲ್ಲಿನ ಬಿಮ್ಸ್ ಗೆ ದಾಖಲಾಗಿದ್ದಂತ ಮೂವರಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ. ಈ ಬಗ್ಗೆ ಬಿಮ್ಸ್ ನಿರ್ದೇಶಕರಾದ ಗಂಗಾಧರ ಗೌಡ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನವೆಂಬರ್ 9 ರಂದು ಜಿಲ್ಲಾಸ್ಪತ್ರೆಯಲ್ಲಿ 7 ಜನ ಗರ್ಭಿಣಿಯರಿಗೆ ಸಿಜೇರಿಯನ್ ಆಗಿತ್ತು. ಇದರಲ್ಲಿ ನಾಲ್ವರು ಬಾಣಂತಿಯರು ಸಾವನ್ನಪ್ಪಿದ್ದರು. ಇದೀಗ ಉಳಿದ ಮೂವರಲ್ಲಿ ಇಲಿ ಜ್ವರ ಪತ್ತೆಯಾಗಿದೆ. ಬಿಮ್ಸ್ ಆಸ್ಪತ್ರೆಯಲ್ಲಿಯೇ ಈ ಮೂವರಿಗೆ ಪರೀಕ್ಷೆ ಮಾಡಲಾಗಿದೆ. ಈಗಾಗಲೇ ಇಬ್ಬರು ಬಾಣಂತಿಯರನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಒಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಏಳು ಗರ್ಭಿಣಿಯರಿಗೆ ಇಲ್ಲಿಯೇ ಸಿಜೇರಿಯನ್ ಆಗಿತ್ತು. ಈ ವೇಳೆ ಡ್ರಿಪ್ಸ್ ನಲ್ಲಿ ಪ್ರಾಬ್ಲಮ್ ಆಗಿತ್ತು ಎಂಬ ಚರ್ಚೆ ಶುರುವಾಗಿತ್ತು. ಆದರೆ ಈಗ ಮೂವರಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ. ಇದು ಹಕವರಲ್ಲಿ ಆತಂಕಕ್ಕೂ ಕಾರಣವಾಗಿದೆ. ಇದ್ದಕ್ಕಿದ್ದ ಹಾಗೇ ಇಲಿ ಜ್ವರ ಕಾಣಿಸಿಕೊಂಡಿದ್ದೇಕೆ ಎಂಬ ಪ್ರಶ್ನೆ ಮೂಡಿದೆ‌.

ನಾಲ್ವರು ಮಕ್ಕಳು ಈಗ ಅನಾಥರಾಗಿವೆ. ತಾಯಿ ಇಲ್ಲದೆ ಅಜ್ಜಿಯ ಕೈನಲ್ಲಿ ಬೆಳೆಯುತ್ತಿದ್ದಾರೆ. ಆರಂಭದಲ್ಲಿ ಏನು ಹೇಳಲ್ಲ ಖಾಲಿ ಪೇಪರ್ ಮೇಲೆ ಸಹಿ ಹಾಕಿಸಿಕೊಂಡು, ಆಮೇಲೆ ಅದರ ಮೆ ಬರೆಯುತ್ತಾರೆ. ಕೇಳುವುದಕ್ಕೆ ಹೋದರೆ ನೀವೇ ಸಹಿ ಹಾಕಿದ್ದೀರಲ್ಲ ಎನ್ನುತ್ತಾರೆ. ದುಡ್ಡು ತಿಂದ್ರೆ ತಿನ್ನಲಿ, ಆದರೆ ಅಲ್ಲಿಗೆ ಬರುವ ಬಾಣಂತಿಯರಿಗೆ ಒಳ್ಳೆಯ ಚಿಕಿತ್ಸೆ ನೀಡಲಿ. ಈಗ ನೋಡಿ ಮಕ್ಕಳು ತಾಯಿಯನ್ನ ಕಳೆದುಕೊಂಡಿವೆ ಎಂದು ಮೃತ ಪತ್ನಿಯರ ಪತಿಯರು ನೋವು ಹೊರ ಹಾಕಿದ್ದಾರೆ. ಸದ್ಯ ಇಲಿ ಜ್ವರ ಪತ್ತೆಯಾಗಿರುವ ಬಗ್ಗೆ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.

Advertisement

Tags :
Advertisement