For the best experience, open
https://m.suddione.com
on your mobile browser.
Advertisement

ಸಾಲು ಸಾಲು ವಿವಾದಗಳ ನಡುವೆಯೂ ಅಧ್ಯಕ್ಷೀಯ ಪಟ್ಟ ಗೆದ್ದ ಟ್ರಂಪ್ : ಕಮಲ ಹ್ಯಾರೀಸ್ ಹೀನಾಯ ಸೋಲು..!

07:00 PM Nov 06, 2024 IST | suddionenews
ಸಾಲು ಸಾಲು ವಿವಾದಗಳ ನಡುವೆಯೂ ಅಧ್ಯಕ್ಷೀಯ ಪಟ್ಟ ಗೆದ್ದ ಟ್ರಂಪ್   ಕಮಲ ಹ್ಯಾರೀಸ್ ಹೀನಾಯ ಸೋಲು
Advertisement

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಘಟ್ಟ ಅಂತಿಮ ತಲುಪಿದೆ. ಡೊನಾಲ್ಡ್ ಟ್ರಂಪ್ ಗೆಲುವು ನಿಶ್ಚಿತವಾಗಿದೆ. ಘೋಷಣೆಯೊಂದೆ ಬಾಕಿ ಇದೆ. ಈಗಾಗಲೇ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಜಯೋತ್ಸವದ ಭಾಷಣ ಮಾಡಿದ್ದಾರೆ. ಈ ವೇಳೆ ತಮ್ಮ ಗೆಲುವನ್ನು ಘೋಷಿಸಿದ್ದಾರೆ. ವಿವಾದಾತ್ಮಕ ವ್ಯಕ್ತಿಯಾಗಿದ್ದರು ಅಮೆರಿಕಾ ಜನ ಮತ್ತೆ ಟ್ರಂಪ್ ಕೈ ಹಿಡಿದಿದ್ದಾರೆ. ಟ್ರಂಪ್ ವಿರುದ್ಧ ಕಮಲ ಹ್ಯಾರಿಸ್ ಹೀನಾಯ ಸೋಲು ಕಂಡಿದ್ದಾರೆ.

Advertisement

ಡೊನಾಲ್ಡ್ ಟ್ರಂಪ್ ಗೆಲುವಿಗೆ ಕಾರಣಗಳು:

* ಟ್ರಂಪ್ ಅಮೆರಿಕಾ ನೆಲದಲ್ಲಿ ತಮ್ಮದೆ ಆದ ಬೆಂಬಲದ ತಂಡವನ್ನು ಹೊಂದಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಅಮೆರಿಕಾ ಫಸ್ಟ್ ಎಗೇನ್ ಎಂಬ ನೀತಿಯನ್ನು ಪದೇ ಪದೇ ಹೇಳುತ್ತಿದ್ದರು.

Advertisement

* ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ಮಾತನ್ನು ಆಡುತ್ತಿದ್ದರು.

* ಅಕ್ರಮ ವಲಸೆಗಾರರನ್ನು ತಡೆಯುವ ಬಗ್ಗೆಯೂ ಟ್ರಂಪ್ ಸ್ಪಷ್ಟ ಸಂದೇಶ ಸಾರುತ್ತಿದ್ದರು.

* ಹಿಂದೂಗಳನ್ನು ರಕ್ಷಿಸುತ್ತೇನೆ ಎಂಬ ಮಾತನ್ನು ಹೇಳುತ್ತಿದ್ದರು.

* ಟ್ರಂಪ್ ಜಾಣ ನಡೆ ತೋರಿದರು. ಪ್ರಚಾರದಲ್ಲಿ ಕಮಲಾ ಹ್ಯಾರೀಸ್ ತಪ್ಪುಗಳನ್ನೇ ಬಂಡವಾಳ ಮಾಡಿಕೊಂಡರು.

ಕಮಲ ಹ್ಯಾರಿಸ್ ಸೋಲಿಗೆ ಕಾರಣವೇನು..?

* ಭಾರತೀಯರ ಮತದಾರರ ಭಾವನೆಗಳಿಗೆ ಬೆಲೆಯೇ ಕೊಡಲಿಲ್ಲ. ಪ್ರಚಾರದಲ್ಲಿ ಹಿಂದೂಗಳ ಬಗ್ಗೆ ಹೆಚ್ಚು ಮಾತಾಡಲೇ ಇಲ್ಲ.

* ಅಮೆರಿಕಾದಲ್ಲಿ ಗರ್ಭಪಾತ ಹೆಚ್ಚಾಗಿದೆ. ಈ ವಿಚಾರದ ಬಗ್ಗೆಯೂ ಹ್ಯಾರಿಸ್ ಫೋಕಸ್ ಮಾಡಲಿಲ್ಲ.

* ವಿದೇಶಾಂಗ ನೀತಿಯ ಬಗ್ಗೆಯೂ ಹ್ಯಾರಿಸ್ ಗೆ ಸ್ಪಷ್ಟನೆ ಇರಲಿಲ್ಲ. ಗಾಜಾ ಹಾಗೂ ಇಸ್ರೇಲ್ ವಾರ್ ಕೊನೆಗೊಳಿಸುತ್ತೇನೆ ಎಂದು ಒಮ್ಮೆ ಹೇಳಿದರೆ, ಇನ್ನೊಮ್ಮೆ ಇಸ್ರೇಲ್ ರಕ್ಷಿಸುವ ಮಾತುಗಳನ್ನಾಡಿದ್ದರು.

* ಅಮೆರಿಕಾದಲ್ಲಿ ಯಾವ ವಿಚಾರದಲ್ಲಿ ಬದಲಾವಣೆ ತರಬೇಕಿದೆ ಎಂಬುದೆ ಬಗ್ಗೆ ಸ್ಪಷ್ಟನೆಯೇ ಹ್ಯಾರಿಸ್ ಗೆ ಇರಲಿಲ್ಲ. ಇವೆಲ್ಲಾ ಕಾರಣಗಳು ಕಮಲ ಹ್ಯಾರಿಸ್ ಸೋಲಿಗೆ ಕಾರಣ ಎನ್ನಲಾಗುತ್ತಿದೆ.

Tags :
Advertisement