Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಫೆಬ್ರವರಿ 26 ರಿಂದ 28 ರವರೆಗೆ ನೀರಾವರಿ ಘಟಕಗಳ ಅಳವಡಿಕೆ, ಉಪಯೋಗ ಮತ್ತು ನಿರ್ವಹಣೆ ಕುರಿತು ತರಬೇತಿ

10:05 PM Feb 23, 2024 IST | suddionenews
Advertisement

ಚಿತ್ರದುರ್ಗ.‌ಫೆ.23:  ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಇದೇ ಫೆ.26 ರಿಂದ 28 ರವರೆಗೆ ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲ್ಲೂಕಿನ ರೈತರಿಗೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೂಕ್ಷ್ಮ ಮತ್ತು ತುಂತುರ ನೀರಾವರಿ ಘಟಕಗಳ ಅಳವಡಿಕೆ, ಅವುಗಳ ಉಪಯೋಗ ಮತ್ತು ನಿರ್ವಹಣೆ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Advertisement

ಅಂದು ಬೆಳಿಗ್ಗೆ 10.30ಕ್ಕೆ ತರಬೇತಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಕಾರ್ಯಕ್ರಮದಲ್ಲಿ ಧಾರವಾಡ ಕೃಷಿ ಮಹಾವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಜಿ.ಶಶಿಧರ್, ಎಜಿಎಂ ಪ್ರೀಮೀಯರ್ ಇರೀಗೇಷನ್ ವಿಜಯ್ ಕುಮಾರ್, ನೆಟಾಫಿನ್ ಇರಿಗೇಷನ್ ಬೇಸಾಯ ತಜ್ಞ ಅಂಜಿನಪ್ಪ ಅವರು ನೀರಿನ ಸಮರ್ಥ ಬಳಕೆ, ಹನಿ ನೀರಾವರಿ ಮತ್ತು ಸ್ಪ್ರೀಂಕ್ಲರ್‍ಘಟಕಗಳ ಅಳವಡಿಕೆ, ಉಪಯೋಗ ಮತ್ತು ಅವುಗಳ ನಿರ್ವಹಣೆಯ ಕುರಿತು ವಿಷಯ ಮಂಡನೆ ಮತ್ತು ಪ್ರಾತ್ಯಕ್ಷಿಕೆ ನೀಡುವರು.

ಫೆ.26ರಂದು ಮೊಳಕಾಲ್ಮೂರು ತಾಲ್ಲೂಕಿನ  60 ಜನ ಆಸಕ್ತ ರೈತರು ಹಾಗೂ ಫೆ.27ರಂದು ಚಳ್ಳಕೆರೆ ತಾಲ್ಲೂಕಿನ ಕಸಬಾ ಮತ್ತು ಪರುಶುರಾಂಪುರ ಹೋಬಳಿಯ 60 ಜನ ರೈತರು  ಹಾಗೂ ಫೆ. 28ರಂದು ಚಳ್ಳಕೆರೆ ತಾಲ್ಲೂಕಿನ ತಳಕು ಮತ್ತು ನಾಯಕನಹಟ್ಟಿ ಹೋಬಳಿಯ 60 ಜನ ಆಸಕ್ತ ರೈತರು ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ.

Advertisement

ತರಬೇತಿಯಲ್ಲಿ ಭಾಗವಹಿಸಲು ರಜನೀಕಾಂತ. ಆರ್ ಸಹಾಯಕ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿಕೇಂದ್ರ, ಬಬ್ಬೂರು ಫಾರಂ (8277931058), ಟಿ.ಪಿ.ರಂಜಿತಾ, ಕೃಷಿ ಅಧಿಕಾರಿ (8277930959), ಸಿಕಂದರ್ ಬಾಷಾ, ಕೃಷಿ ಅಧಿಕಾರಿ (8277931058) ಮತ್ತು ಪವಿತ್ರಾ ಎಂ. ಜೆ. (9535412286) ಅವರ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಕೋರಿದೆ. ಮೊದಲು ನೋಂದಾವಣಿ ಮಾಡಿಕೊಂಡ 60 ಜನರೈತಭಾಂದವರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

Advertisement
Tags :
chitradurgaIrrigation UnitssuddioneTraining on InstallationUse and Maintenanceಉಪಯೋಗಚಿತ್ರದುರ್ಗತರಬೇತಿನಿರ್ವಹಣೆನೀರಾವರಿ ಘಟಕಗಳ ಅಳವಡಿಕೆಸುದ್ದಿಒನ್
Advertisement
Next Article