ಚಿನ್ನದ ಬೆಲೆಯಲ್ಲಿ ಇಂದು ಇಳಿಕೆ : ಎಷ್ಟಿದೆ ಡಿ.2ರ ಬೆಲೆ..?
ಚಿನ್ನ ಬೆಳ್ಳಿ ಬೆಲೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಲೆ ಇದೆ. ಕಳೆದ ಕೆಲವು ದಿನಗಳಿಂದ ಮತ್ತೆ ಇಳಿಕೆಯತ್ತ ಮುಖ ಮಾಡಿದೆ. ದಿನೇ ದಿನೇ ಹೀಗರ ಇಳಿಕೆ ಕಂಡರೆ ಚಿನ್ನಾಭರಣ ಪ್ರಿಯರಿಗೆ ಸಂತಸ. ಮತ್ತೆ ಹಾವು ಏಣಿ ಆಟವಾಡಿದರೆ ಕಷ್ಟವಾಗುತ್ತದೆ. ಹಾಗಾದ್ರೆ ಇಂದು ಚಿನ್ನಾಭರಣದ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲದೆ.
ಇಂದು ಚಿನ್ನದ ಬೆಲೆಯಲ್ಲಿ ಬರೋಬ್ಬರಿ 60 ರೂಪಾಯಿ ಇಳಿಕೆಯಾಗಿದೆ. ಅಪರಂಜಿ ಚಿನ್ನದ ಬೆಲೆಯಲ್ಲಿ 65 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ 22 ಕ್ಯಾರಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ 70,600 ರೂಪಾಯಿ ಆಗಿದೆ. ಹಾಗೇ 24 ಕ್ಯಾರಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ 77,350 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯಲ್ಲೂ ಐವತ್ತು ಪೈಸೆಯಷ್ಟು ಇಳಿಕೆಯಾಗಿದ್ದು, ಬೆಂಗಳೂರಿನಲ್ಲಿ ಗ್ರಾಂ ಬೆಳ್ಳಿ ಬೆಲೆ ಈಗ 91 ರೂಪಾಯಿ ಆಗಿದೆ. ಈ ಮೂಲಕ 100 ಗ್ರಾಂ ಬೆಳ್ಳಿ ಬೆಲೆ 9,100 ರೂಪಾಯಿ ಆಗಿದೆ.
ಭಾರತದ ವಿವಿಧ ಭಾಗದಲ್ಲಿ ಚಿನ್ನದ ಬೆಲೆಯನ್ನು ನೋಡುವುದಾದರೆ ಹತ್ತು ಗ್ರಾಂಗೆ ಬೆಂಗಳೂರು ಮುಂಬೈ, ಕೊಲ್ಕತ್ತಾ, ಕೇರಳ, ಭುವನೇಶ್ವರದಲ್ಲಿ ಒಂದೇ ಥರನಾದ ಬೆಲೆಯನ್ನು ಹೊಂದಿದೆ. ಆದರೆ ದೆಹಲಿ, ಅಹ್ಮದಾಬಾದ್, ಲಕ್ನೋ ನಗರಗಳಲ್ಲಿ ಕಂಚ ಏರಿಳಿತವಾಗಿದೆ. ಡಿಸೆಂಬರ್ ನಿಂದ ಜನವರಿ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಯಾವುದೇ ರೀತಿಯ ಶುಭ ಸಮಾರಂಭಗಳು ನಡೆಯುವುದಿಲ್ಲ. ಧನುರ್ಮಾಸದ ಸಂದರ್ಭದಲ್ಲಿ ಚಿನ್ನದ ಬೆಲೆಯಲ್ಲೇನಾದರೂ ಇನ್ನಷ್ಟು ಕಡಿಮೆಯಾಗಬಹುದು ಎಂದೇ ಮಹಿಳಾ ಮಣಿಗಳು ಭಾವಿಸಿದ್ದಾರೆ. ನೋಡೋಣಾ ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಕೆಯಾಗುತ್ತಾ ಇಳಿಕೆಯಾಗುತ್ತಾ ಎಂಬುದನ್ನು.