ಡಿಕೆ ಶಿವಕುಮಾರ್ ಅವರಿಂದ ಇಂದು ಡ್ಯಾಂಗಳು ತುಂಬಿ ತುಳುಕುತ್ತಿವೆ : ಹೆಚ್ಡಿಕೆ ವ್ಯಂಗ್ಯ
ದೆಹಲಿ: ರಾಜ್ಯದಲ್ಲಿ ಮಳೆ ಚೆನ್ನಾಗಿ ಬರುತ್ತಿದೆ. ಎಷ್ಟೋ ಕಡೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವು ಜಿಲ್ಲೆಗಳಲ್ಲಿ ಮಳೆಯಿಂದಾಗಿ ರಸ್ತೆಗಳೇ ನಾಪತ್ತೆಯಾಗಿವೆ. ಡ್ಯಾಂಗಳಿಗೂ ಉತ್ತಮವಾಗಿ ನೀರು ಬಂದಿದ್ದು, ಜುಲೈ 27ಕ್ಕೆ ಕಾವೇರಿಗೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ. ಹೀಗಾಗಿ ಜಲಸಂಪನ್ಮೂಲ ಸಚಿವ, ಡಿಸಿಎಂ ಡಿಕೆ ಶಿವಕುಮಾರ್ ಕಾರ್ಯಕ್ರಮಕ್ಕೆ ಸಂಬಂಧಿಸಿದ ಸಭೆ ನಡೆಸಿದರು, ಪರಿಶೀಲನೆ ಮಡೆಸಿದರು. ಈ ಸಂಬಂಧ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.
ಇಂದು ಡ್ಯಾಂಗಳೆಲ್ಲಾ ತುಂಬಿರುವುದು ಡಿಕೆ ಶಿವಕುನಾರ್ ಅವರಿಂದಾನೇ. ಗಂಗಾ ಆರತಿ ರೀತಿಯಲ್ಲಿ ಕಾವೇರಿ ಆರತಿ ಮಾಡಿದರೆ ಒಳ್ಳೆಯ ವಿಚಾರ. 5-6 ದಿನದಿಂದ ತಮಿಳುನಾಡಿಗೆ 5&6 ಟಿಎಂಸಿ ನೀರು ಹೋಗ್ತಿದೆ. ಜೂನ್ - ಜುಲೈ ತಿಂಗಳಿನ ಪಾಲಿಗಿಂತ ಹೆಚ್ಚು ನೀರು ಹೋಗಿದೆ. ತಮಿಳುನಾಡು ಸಿಎಂ ಸ್ಟಾಲಿನ್ ಅವರಿಗೂ ನಾನು ಹೇಳಿದ್ದು ಇಷ್ಟೆ. ತಮಿಳುನಾಡಿನ ಸಿಎಂ ಕರ್ನಾಟಕ ಪಾಲಿನ ನಡೆಯನ್ನು ತಿದ್ದುಕೊಳ್ಳಲಿ. ಕರ್ನಾಟಕ, ತಮಿಳುನಾಡಿಗೆ ಯಾವತ್ತು ಸಮಸ್ಯೆ ಮಾಡಿಲ್ಲ.
ನೀರು ಬಳಕೆ ಮಾಡುವ ದೃಷ್ಟಿಯಿಂದ ಮೇಕೆದಾಟು ಯೋಜನೆಗೆ ತಮಿಳುನಾಡು ಒಪ್ಪಬೇಕು. ರಾಜ್ಯ ಸರ್ಕಾರ ಚಿಲ್ಲೃ ರಾಜಕಾರಣ ಮಾಡುತ್ತಿದೆ. ಕೇಂದ್ರ ಸರ್ಕಾರದ ಮಂತ್ರಿಗಳ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಇನ್ನು ರಾಜ್ಯದಲ್ಲಿ ಬೆಂಬಿಡದೆ ಮಳೆಯಾಗುತ್ತಿರುವ ಹಿನ್ನೆಲೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಅನಾಹುತವನ್ನೇ ಸೃಷ್ಟಿಸಿವೆ. ಜನ ಜೀವನ ಅಸ್ತವ್ಯಸ್ತವಾಗುತ್ತಿದೆ. ಶಾಲಾ-ಕಾಲೇಜಿಗೆ ಹೋಗುವ ಮಕ್ಕಳಿಗೂ ತಾಪತ್ರಯವಾಗುತ್ತಿದೆ. ಈ ಸಮಸ್ಯೆಯ ನಡುವೆಯೂ ಡ್ಯಾಂಗಳೆಲ್ಲಾ ತುಂಬುತ್ತಿದ್ದು, ಬೆಳೆಗೆ ನೀರು ಸಿಗುತ್ತಿದೆ ಎಂಬ ಸಂತಸ ರೈತರ ಮೊಗದಲ್ಲಿದೆ.