Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಇಂದು ರೇಣುಕಾಸ್ವಾಮಿ-ಸಹನಾ ಮದುವೆಯಾದ ದಿನ : ಕಣ್ಣೀರಲ್ಲಿ ಕುಟುಂಬ.. ತನಿಖೆಯಲ್ಲಿ ರೇಣುಕಾಸ್ವಾಮಿ ಮೆಸೇಜ್ ಬಹಿರಂಗ..!

12:47 PM Jun 28, 2024 IST | suddionenews
Advertisement

ಬೆಂಗಳೂರು : ರೇಣುಕಾಸ್ವಾಮಿ ಹಾಗೂ ಸಹನಾ ಮದುವೆಯಾಗಿ ಇಂದಿಗೆ ಒಂದು ವರ್ಷ. ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸುವುದಕ್ಕೆ ಇಂದು ರೇಣುಕಾಸ್ವಾಮಿ ಬದುಕಿಲ್ಲ. ಮುದ್ದಾದ ಹೆಂಡತಿ, ಸುಸಂಸ್ಕೃತರ ಸಂಪ್ರದಾಯಸ್ಥ ಕುಟುಂಬದ ಅಪ್ಪ-ಅಮ್ಮ. ನೆಮ್ಮದಿಯಾಗಿ ಬದುಕಲು ರೇಣುಕಾಸ್ವಾಮಿ ಇಷ್ಟು ಸಾಕಿತ್ತು. ಬರೀ ಪವಿತ್ರಾ ಗೌಡಗೆ ಮಾತ್ರವಲ್ಲ ಫೇಕ್ ಅಕೌಂಟ್ ಗಳಿಂದ ಅದೆಷ್ಟೋ ಹೆಣ್ಣು ಮಕ್ಕಳಿಗೆ ತೀರಾ‌ ಮುಜುಗರ ಎನಿಸುವಂತ, ಕೆಟ್ಟ ಮೆಸೇಜ್ ಗಳನ್ನು ಮಾಡಿದ್ದಾನೆ. ಆ ರೀತಿಯ ಮೆಸೇಜ್ ಮಾಡುವ ಗುಣದಿಂದಾನೇ ಇಂದು ಗರ್ಭಿಣಿ ಹೆಂಡತಿ, ವಯಸ್ಸಾದ ತಂದೆ ತಾಯಿಯನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾನೆ.

Advertisement

ಮೊದಲ ವರ್ಷದ ವಾರ್ಷಿಕೋತ್ಸವ ಎಂಬ ಖುಷಿಗಿಂತ ಮಗನೇ ಜೊತೆಗಿಲ್ಲವಲ್ಲ ಎಂದು ತಂದೆ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಏನು ತಪ್ಪು ಮಾಡದ ಸಹನಾ ಎಂಬ ಹೆಣ್ಣು ಮಗು ಮಗುವಿನ ಭವಿಷ್ಯ ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಒಂದು ಕಡೆ ಈ ನೋವು ಮತ್ತೊಂದು ಕಡೆ ರೇಣುಕಾಸ್ವಾಮಿ ಮೆಸೇಜ್ ಗಳು ಬಹಿರಂಗವಾಗುತ್ತಿವೆ.

ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ಕಾಟ ಕೊಡುತ್ತಿದ್ದು ದರ್ಶನ್ ಕಿವಿಗೆ ಬಿದ್ದ ಮೇಲೆ ಚಿತ್ರದುರ್ಗದಿಂದ ಕರೆದುಕೊಂಡು ಹೋಗಿ  ಬೆಂಗಳೂರಿನಲ್ಲಿ ಹೊಡೆದಿದ್ದಾರೆ. ಕಡೆಗೆ ಆತನ ಕೊಲೆಯಲ್ಲಿ ಈಗ ಎಲ್ಲಾ ಜೈಲಿನಲ್ಲಿದ್ದಾರೆ. ಕೊಲೆಯಾದ ಮೇಲೆ ಆತನ ಮೊಬೈಲ್ ಅನ್ನು ಯಾರಿಗೂ ಸಿಗದಂತೆ ಎಸೆದಿದ್ದಾರೆ. ಆದರೆ ಪೊಲೀಸರು ಕೋರ್ಟ್ ಸಮ್ಮತಿ ಪಡೆದು ಹೊಸ ಸಿಮ್ ಖರೀದಿಸಿ, ಸಿಡಿಅರ್ ಮಾಡಿಸಿದ್ದಾರೆ. ಅದರಿಂದ ಕಾಲ್ ಡಿಟೈಲ್, ಆತನ ಮೆಸೇಜ್ ಎಲ್ಲವೂ ಸಿಕ್ಕಿದೆ. ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ಕೊಟ್ಟಿರುವ ಕಾಟ ಅಷ್ಟಿಷ್ಟಲ್ಲ. ಮೂಲಗಳ ಪ್ರಕಾರ ಫೆಬ್ರವರಿಯಿಂದ ಮೆಸೇಜ್ ಮಾಡಿ ಕಾಟ ಕೊಟ್ಟಿದ್ದಾನೆ. ಬರೋಬ್ಬರಿ 200 ಮೆಸೇಜ್ ಕಳುಹಿಸಿರುವುದು. ಅಷ್ಟು‌ ಮೆಸೇಜ್ ಅಶ್ಲೀಲವಾಗಿದೆ. ರೋಸೆದ್ದು ಪವಿತ್ರಾ, ಈಗ ಆರೋಪಿಯಾಗಿರುವ ಪವನ್ ಗೆ ಹೇಳಿದ್ದಾರೆ. ಅದು ದರ್ಶನ್ ತನಕ ಹೋಗಿ, ಕೊಲೆಯಲ್ಲಿ ಅಂತ್ಯವಾಗಿದೆ.

Advertisement

Advertisement
Tags :
bengaluruchitradurgafamilyinvestigationMessageRenukaswamyRenukaswamy-Sahanarevealedsuddionesuddione newstearswedding dayಕಣ್ಣೀರುಕುಟುಂಬಚಿತ್ರದುರ್ಗತನಿಖೆಬಹಿರಂಗಬೆಂಗಳೂರುಮದುವೆಮೆಸೇಜ್ರೇಣುಕಾಸ್ವಾಮಿರೇಣುಕಾಸ್ವಾಮಿ-ಸಹನಾಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article