For the best experience, open
https://m.suddione.com
on your mobile browser.
Advertisement

ಪ್ರೀತಿಯ ಘಮಲು ಪಸರಿಸಲು ಫೆ.9ಕ್ಕೆ ಬರ್ತಿದೆ "ನಗುವಿನ ಹೂಗಳ ಮೇಲೆ" ಸಿನಿಮಾ

12:19 PM Feb 06, 2024 IST | suddionenews
ಪ್ರೀತಿಯ ಘಮಲು ಪಸರಿಸಲು ಫೆ 9ಕ್ಕೆ ಬರ್ತಿದೆ  ನಗುವಿನ ಹೂಗಳ ಮೇಲೆ  ಸಿನಿಮಾ
Advertisement

ಸುದ್ದಿಒನ್, ಬೆಂಗಳೂರು : ಪ್ರೀತಿ ಪ್ರೇಮಕ್ಕೆ ವಯಸ್ಸಿನ ಹಂಗಿಲ್ಲ. ಯಾವ ವಯಸ್ಸಲ್ಲಿ ಬೇಕಾದರೂ ಪ್ರೀತಿಯಾಗಬಹುದು. ಹೀಗಾಗಿ 18 ರಿಂದ 80ರ ತನಕ ಎಲ್ಲರೂ ಕೂತೂ ನೋಡುವ ಸಿನಿಮಾ 'ನಗುವಿನ ಹೂಗಳ ಮೇಲೆ'. ಒಂದು ಬ್ಯೂಟಿಫುಲ್ ಲವ್ ಸ್ಟೋರಿ ಇರುವಂತ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಫೆಬ್ರವರಿ 9 ರಂದು ಸಿನಿಮಾ ತೆರೆಗೆ ಬರಲಿದೆ. ಮೆಡಿಕಲ್ ಹುಡುಗಿ, ಇಂಜಿನಿಯರಿಂಗ್ ಹುಡುಗ ಪ್ರೇಮಕಾವ್ಯವನ್ನು ಥಿಯೇಟರ್ ನಲ್ಲಿಯೇ ಸವಿದರೆ ಚೆಂದ.

Advertisement
Advertisement

ಈ ಹಿಂದೆ ಆಮ್ಲೆಟ್, ಕೆಂಪಿರ್ವೆ ಮುಂತಾದ ಸಿನಿಮಾಗಳನ್ನು ನಿರ್ದೇಶನ ಮಾಡಿ ಗಮನ ಸೆಳೆದಿರುವವರು ವೆಂಕಟ್ ಭಾರದ್ವಾಜ್. ಅವರು ನಗುವಿನ ಹೂಗಳ ಮೇಲೆ ಚಿತ್ರದ ಮೂಲಕ, ಎಲ್ಲ ವಯೋಮಾನದವರನ್ನೂ, ಎಲ್ಲ ತೆರನಾದ ಅಭಿರುಚಿಯ ಪ್ರೇಕ್ಷಕರನ್ನೂ ಅಚ್ಚರಿಗೀಡುಮಾದಲು ಸಜ್ಜಾಗಿದ್ದಾರೆ. ಈ ಚಿತ್ರವನ್ನು ತೆಲುಗಿನ ಖ್ಯಾತ ನಿರ್ಮಾಪಕ ಕೆ. ರಾಧಾ ಮೋಹನ್ ಶ್ರೀ ಸತ್ಯಸಾಯಿ ಆಟ್ರ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.

Advertisement
Advertisement

ಅಭಿ ದಾಸ್ ಮತ್ತು ಶರಣ್ಯಾ ಶೆಟ್ಟಿ ನಾಯಕ ನಾಯಕಿಯರಾಗಿ ನಟಿಸಿರುವ ಈ ಚಿತ್ರ ಈಗಾಗಲೇ ಹಾಡುಗಳು, ಟ್ರೇಲರ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಭಿನ್ನ ಪ್ರೇಮಕಥಾನಕದ ಸ್ಪಷ್ಟ ಸುಳಿವಿನೊಂದಿಗೆ ಭರವಸೆ ಮೂಡಿಸಿರುವ ನಗುವಿನ ಹೂಗಳ ಮೇಲೆ ಸಾಕಷ್ಟು ಹೊಸತನಗಳಿದೆ.

ಬಲ ರಾಜವಾಡಿ, ಆಶಾ ಸುಜಯ್, ಗಿರೀಶ್ ನಂಜಪ್ಪ, ಹರ್ಷಿತ್ ಗೌಡ, ಅಭಿಷೇಕ್ ಐಯಂಗಾರ್, ಹರೀಶ್ ಚೌಹಾಣ್, ಹರ್ಷ ಗೋ ಭಟ್ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ. ಪ್ರಮೋದ್ ಭಾರತೀಯ ಛಾಯಾಗ್ರಹಣ, ಅಭಿಷೇಕ್ ಐಯಂಗಾರ್ ಸಂಭಾಷಣೆ, ಲವ್ ಫ್ರಾನ್ ಮೆಹತಾ ಸಂಗೀತ ನಿರ್ದೇಶನ, ಚಂದನ್ ಪಿ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನದೊಂದಿಗೆ ನಗುವಿನ ಹೂಗಳ ಮೇಲೆ ರೂಪುಗೊಂಡಿದೆ.

Advertisement
Tags :
Advertisement