Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಟಿಜೆ ಅಬ್ರಾಹಂ ಮೂಡಾಗೆ ಭೇಟಿ..!

02:54 PM Aug 05, 2024 IST | suddionenews
Advertisement

ಮೈಸೂರು : ಮೂಡಾ ಹಗರಣ ಸಂಬಂಧ ರಾಜ್ಯಪಾಲರಿಗೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ ಇಂದು ಮೂಡಾಗೆ ಭೇಟಿ ನೀಡಿ ಕುತೂಹಲ ಮೂಡಿಸಿದ್ದಾರೆ. ಮೈಸೂರು ನಗರಾಭಿವೃದ್ಧಿ ಕಮಿಷನರ್ ರಘುನಂದನ್ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದ್ದಾರೆ. ಹಲವು ದಾಖಲೆಗಳ ಸಮೇತ ಅಬ್ರಾಹಂ ಅವರು ರಾಜ್ಯಪಾಲರಿಗೆ ದೂರು ನೀಡಿದ್ದರು.

Advertisement

ಮೂಡಾ ಕಮೀಷನರ್ ರಘುನಂದನ್ ಅವರನ್ನು ಭೇಟಿ ನೀಡಿದ ಬಳಿಕ ಮಾತನಾಡಿದ ಟಿಜೆ ಅಬ್ರಾಹಂ ಅವರು, ಬಿಎಸ್ವೈ ಹಾಗೂ ಶೆಟ್ಟರ್ ಅವರ ವಿರುದ್ಧ ಆರೋಪ ಮಾಡಿದಾಗ ನನ್ನದು ಸತ್ಯ ಇತ್ತು. ಈಗ ಇವರ ಬಗ್ಗೆ ಮಾತಮಾಡಿದರೆ ನಾನು ಬ್ಲ್ಯಾಕ್ ಮೇಲ್ ಮಾಡ್ತಾ ಇದ್ದೀನಿ. ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಟ್ರೋಲ್ ಮಾಡುತ್ತಿದ್ದಾರೆ. ಇದನ್ನೆಲ್ಲ ನೋಡಿದರೆ ಸಿಎಂ ಸಿದ್ದರಾಮಯ್ಯ ಅವರು ಸೋಲನ್ನು ಒಪ್ಪಿಕೊಂಡ ರೀತಿ ಆಗುತ್ತದೆ ಅಲ್ಲವೆ. 2004ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಕೃಷಿ ಭೂಮಿ ಖರೀದಿಸಿದ್ದರು. ಆಗ ಅಲ್ಲಿ ಕೃಷಿ ಭೂಮಿ ಇತ್ತಾ..? 2001ರಲ್ಲಿ ಕೆಸರೆಯಲ್ಲಿ ಅಭಿವೃದ್ಧಿ ಮಾಡಿದ್ದ ಬಡಾವಣೆ ಆಗಿತ್ತು.

2004ರಲ್ಲಿ ಕೃಷಿ ಭೂಮಿ ಅಂತ ಹೇಗೆ ಖರೀದಿ ಮಾಡಿದರು. ನಿವೇಶನ ಹಂಚಿದ್ದನ್ನು ಮತ್ತೆ ವಸತಿ ಭೂಮಿ ಎಂದು ಪರಿವರ್ತನೆ ಮಾಡಿದ್ದಾರೆ. ತಮ್ಮ ತಾಯಿಗೆ ಪರಿಹಾರದ ಭೂಮಿ ಸಿಗುವಾಗ ಪ್ರಮುಖ ಸಭೆಗಳಲ್ಲಿ ಯತೀಂದ್ರ ಸಿದ್ದರಾಮಯ್ಯ ಕೂತಿದ್ದರು. ಸಿದ್ದರಾಮಯ್ಯ ಅವರ ಕುಟುಂಬಕ್ಕೆ ನೀಡಿರುವ 14 ಸೈಟ್ ಗಳನ್ನು ಹಿಂಪಡೆಯಬೇಕು. ಸೈಟ್ ಕೊಟ್ಟಿರುವುದು ಅಕ್ರಮ. ಅದನ್ನು ವಾಒಅಸ್ ಪಡೆಯಿರಿ ಎಂದು ಮೈಸೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಾಂ ಹೇಳಿದ್ದಾರೆ.

Advertisement

Advertisement
Tags :
bengaluruChief Minister Siddaramaiahchitradurgamudamysurusuddionesuddione newsTj abrahamಚಿತ್ರದುರ್ಗಟಿಜೆ ಅಬ್ರಾಹಂದೂರುಬೆಂಗಳೂರುಭೇಟಿಮೂಡಾಮೈಸೂರುಸಿದ್ದರಾಮಯ್ಯಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article