For the best experience, open
https://m.suddione.com
on your mobile browser.
Advertisement

ತಿರುಪತಿ ಲಡ್ಡು ಪ್ರಕರಣ : ವಿಶೇಷ ತನಿಖೆಗೆ ಆಗ್ರಹಿಸಿದ ಸುಪ್ರೀಂ ಕೋರ್ಟ್..!

01:08 PM Oct 04, 2024 IST | suddionenews
ತಿರುಪತಿ ಲಡ್ಡು ಪ್ರಕರಣ   ವಿಶೇಷ ತನಿಖೆಗೆ ಆಗ್ರಹಿಸಿದ ಸುಪ್ರೀಂ ಕೋರ್ಟ್
Advertisement

Advertisement
Advertisement

ತಿರುಪತಿಗೆ ಹೋದವರು ಲಡ್ಡು ಪ್ರಸಾದವನ್ನು ತರದೆ ಬರುವುದೇ ಇಲ್ಲ. ಆದರೆ ಇದೇ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ದೇಶದಲ್ಲಿ ಈ ವಿಚಾರ ಬಾರೀ ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ ಇದೀಗ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ವಿಶೆಷವಾದ ತನಿಖೆಗೆ ಆಗ್ರಹ ಮಾಡಿದೆ‌.

ತಿರುಪತಿ ಲಡ್ಡು ತಯಾರಿಕೆಯಲ್ಲಿ ಮೀನು ಎಣ್ಣೆ, ಹಂದಿ‌ ಕೊಬ್ಬನ್ನು ಬಳಕೆ ಮಾಡಿದೆ ಎಂಬ ಆರೋಪವಿದೆ. ಈ ಸಂಬಂಧ ವಿಶೇಷ ತನಿಖಾ ತಂಡ ರಚಿಸಬೇಕು. ಅದರಲ್ಲಿ ಆಂಧ್ರಪ್ರದೇಶದ ಇಬ್ಬರೂ ಪೊಲೀಸ್ ಅಧಿಕಾರಿಗಳು, ಕೇಂದ್ರ ಆಹಾರ ನಿಯಂತ್ರಕ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಲಡ್ಡು ಪ್ರಕರಣದ ವಿಶೇಷ ತನಿಖಾ ತಂಡದಲ್ಲಿದ್ದಾರೆ ಎಂಬ ಮಾಹಿತಿಯನ್ನು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ನೀಡಿದೆ.

Advertisement

ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ವಿಭಾಗೀಯ ಪೀಠದಲ್ಲಿ ಲಡ್ಡು ಪ್ರಕರಣ ವಿಚಾರಣೆ ನಡೆದಿದೆ. ಈ ವೇಳೆ ಈ ಪ್ರಕರಣದಲ್ಲಿ ಯಾವುದೇ ರೀತಿಯ ರಾಜಕೀಯ ಮಾಡುವುದು ಬೇಡ ಎಂದೇ ಪೀಠ ಹೇಳಿದೆ. ಯಾಕಂದ್ರೆ ಇದು ಪ್ರಪಂಚದಾದ್ಯಂತ ಇರುವ ತಿರುಪತಿ ತಿಮ್ಮಪ್ಪ ಭಕ್ತರ ನಂಬಿಕೆಯ ಪ್ರಶ್ನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.

ತಿರುಪತಿ ಲಡ್ಡು ವಿಚಾರದಲ್ಲಿ ಹಾಲಿ ಹಾಗೂ ಮಾಜಿ ಸಿಎಂಗಳ ನಡುವೆ ಕಿತ್ತಾಟ ನಡೆದಿದೆ. ಹಾಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಈ ಹಿಂದಿನ ಸಿಎಂ ಜಗನ್ ಮೋಹನ್ ರೆಡ್ಡಿ ಬಗ್ಗೆ ಆರೋಪ ಮಾಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ನಡುವೆಯೇ ವಾಗ್ಯುದ್ಧ ನಡೆಯುತ್ತಿದೆ.

Tags :
Advertisement