For the best experience, open
https://m.suddione.com
on your mobile browser.
Advertisement

ಕಾಂಗ್ರೆಸ್ ನಿಂದ ಘಟಾನುಘಟಿ ನಾಯಕರಿಗೆ ಟಿಕೆಟ್ : ಆಂತರಿಕ ಪಟ್ಟಿ ಇಲ್ಲಿದೆ

12:31 PM Feb 09, 2024 IST | suddionenews
ಕಾಂಗ್ರೆಸ್ ನಿಂದ ಘಟಾನುಘಟಿ ನಾಯಕರಿಗೆ ಟಿಕೆಟ್   ಆಂತರಿಕ ಪಟ್ಟಿ ಇಲ್ಲಿದೆ
Advertisement

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಮೂರು ಪಕ್ಷಗಳಿಗೆ ಗೆಲುವು ಎಂಬುದು ಬಹಳ ಮುಖ್ಯವಾಗಿದೆ. ಹೆಚ್ಚಿನ ಕಾಂಪಿಟೇಷನ್ ನಿರ್ಮಾಣವಾಗುವುದರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ಮೂರು ಪಕ್ಷಗಳು ಗೆಲ್ಲುವುದರ ಕಡೆಗೆ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ಬಹುಮತದೊಂದಿಗೆ ಗೆದ್ದು ಗದ್ದಿಗೆ ಏರಿರುವ ಕಾಂಗ್ರೆಸ್ ಪಕ್ಷವನ್ನು ಶತಾಯಗತಾಯ ಸೋಲಿಸಲೇಬೇಕೆಂದು ಬಿಜೆಪಿ ಹಾಗೂ ಜೆಡಿಎಸ್ ಪಣ ತೊಟ್ಟಿದೆ. ಆದರೆ ಕಾಂಗ್ರೆಸ್ ನಾಯಕರು, ಗ್ಯಾರಂಟಿಗಳ ಮೂಲಕ ಮತ್ತೆ ಹೆಚ್ಚಿನ ಕ್ಷೇತ್ರಗಳನ್ನು ಪಡೆಯಬೇಕೆಂದು ಕಾಂಗ್ರೆಸ್ ಪ್ರಯತ್ನದಲ್ಲಿದೆ. ಇದರ ನಡುವೆ ಕಾಂಗ್ರೆಸ್ ಅಭ್ಯರ್ಥಿಗಳ ಆಂತರಿಕ ಪಟ್ಟಿ ಸಿಕ್ಕಿದೆ.

Advertisement

ಜೆಡಿಎಸ್ ಹಾಗೂ ಬಿಜೆಪಿ ಒಂದಾಗಿ ಕಾಂಗ್ರೆಸ್ ವಿರುದ್ಧ ಸಮರ ಸಾರಿದೆ. ಹೀಗಿರುವಾಗ ಲೋಕಸಭಾ ಚುನಾವಣೆಯಲ್ಲಿ ಸ್ಟ್ರಾಂಗ್ ಅಭ್ಯರ್ಥಿಗಳನ್ನೇ ಹಾಕಬೇಕಾಗುತ್ತದೆ. ಹೀಗಾಗಿಯೇ ಡಿಸಿಎಂ ಡಿಕೆ ಶಿವಕುಮಾರ್ ಈಗಾಗಲೇ ದೆಹಲಿಯಲ್ಲಿ ಸಭೆ ನಡೆಸಿ, ಸ್ಥಳೀಯ ನಾಯಕರ ಜೊತೆಗೆ ಚರ್ಚೆ ನಡೆಸಿದ್ದಾರೆ. ಲೋಕಸಭೆ ಚುನಾವಣೆಗೆ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿಪ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದೆ.

ಈಗ ಲಭ್ಯವಾಗಿರುವ ಆಂತರಿಕ ಪಟ್ಟಿಯ ಪ್ರಕಾರ, ಬೆಳಗಾವಿಗೆ - ಸತೀಶ್ ಜಾರಕಿಹೊಳಿ, ಚಿಕ್ಕೋಡಿ - ಲಕ್ಷ್ಮಣ್ ಸವದಿ ಪುತ್ರ ಅಥವಾ ಗಣೇಶ್ ಹುಕ್ಕೇರಿ, ಹಾವೇರಿ - ಹೆಚ್ ಕೆ ಪಾಟೀಲ್, ಮಂಗಳೂರು - ಯುಟಿ ಖಾದರ್, ಬಾಗಲಕೋಟೆ - ಸರ್ ನಾಯಕ್, ವೀಣಾ ಕಾಶಪ್ಪನವರ್, ಸಂಯುಕ್ತ ಶಿವಾನಂದ ಪಾಟೀಲ್, ಕಲಬುರಗಿ - ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ, ಉತ್ತರ ಕನ್ನಡ - ಆರ್ ವಿ ದೇಶಪಾಂಡೆ, ಮೈಸೂರು - ಲಕ್ಷ್ಮಣ್ ಹಾಗೂ ಶುಶ್ರುತ್ ಗೌಡ, ಬಳ್ಳಾರಿ - ಸೌಪರ್ಣಿಕಾ ತುಕರಾಂ, ಬೆಂಗಳೂರು ಉತ್ತರ - ಕೃಷ್ಣ ಭೈರೇಗೌಡ, ಬೆಂಗಳೂರು ದಕ್ಷಿಣ - ಪ್ರಿಯಾಕೃಷ್ಣ ಹೆಸರು ಕೇಳಿ ಬರುತ್ತಿದೆ ಎನ್ನಲಾಗಿದೆ.

Advertisement

Tags :
Advertisement