For the best experience, open
https://m.suddione.com
on your mobile browser.
Advertisement

ಇತ್ತಿಚೆಗೆ ಕಾರು ಖರೀದಿಸಿದ್ದ ತುಕಾಲಿ ಸಂತೋಷ್ : ಅಪಘಾತದಿಂದ ಆಟೋ ಚಾಲಕ ಸಾವು..!

12:15 PM Mar 14, 2024 IST | suddionenews
ಇತ್ತಿಚೆಗೆ ಕಾರು ಖರೀದಿಸಿದ್ದ ತುಕಾಲಿ ಸಂತೋಷ್   ಅಪಘಾತದಿಂದ ಆಟೋ ಚಾಲಕ ಸಾವು
Advertisement

Advertisement
Advertisement

ಕಾಮಿಡಿ ಪಾತ್ರಗಳ ಮನರಂಜಿಸಿದ್ದ ತುಕಾಲಿ ಸಂತೋಷ್ ಬಿಗ್ ಬಾಸ್ ಸೀಸನ್ 10 ಸ್ಪರ್ಧಿಯಾಗಿಯೂ ಜನ ಮನ ಗೆದ್ದಿದ್ದರು. ತಮ್ಮ ಹಾಸ್ಯದಿಂದಾನೇ ಫಿನಾಲೆ ತಲುಪಿದ್ದರು. ಬಳಿಕ ಕಲರ್ಸ್ ಕನ್ನಡದ ರಿಯಾಲಿಟಿ ಶೋ ಮೂಲಕವೇ ತಮ್ಮ ಜರ್ನಿ ಮುಂದುವರೆಸಿದ್ದಾರೆ. ಈ ಎಲ್ಲಾ ಯಶಸ್ಸಿನ ಅಲೆಯಲ್ಲಿರುವಾಗಲೇ ಇತ್ತೀಚೆಗೆ ಹೊಸ ಕಾರೊಂದನ್ನು ಖರೀದಿ ಮಾಡಿದ್ದರು. ಆ ಕಾರಿನ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕಿಯಾ ಶೋರೂಮಿನ ಗಾಡಿ ಅದಾಗಿತ್ತು. ಇದೀಗ ಅದೇ ಕಾರು ಅಪಘಾತಕ್ಕೆ ಈಡಾಗಿದೆ.

ತುಕಾಲಿ ಸಂತೋಷ್ ಕಾರು ಗುದ್ದಿ ಆಟೋ ಚಾಲಕ ಸಾವನ್ನಪ್ಪಿರುವ ಘಟನೆ ನಡೆದಿರುವುದು ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ತುಕಾಲಿ ಸಂತೋಷ್ ಅವರು ಕಾರಿನಲ್ಲಿ ಬರುವಾಗ ಈ ಘಟನೆ ನಡೆದಿದೆ.

Advertisement

ತುಕಾಲಿ ಸಂತೋಷ್ ಮೂಲತಃ ಹೊಳೆನರಸೀಪುರದವರು. ಯಾವುದೋ ಕೆಲಸಕ್ಕೆಂದು ತುಮಕೂರಿಗೆ ಹೋಗಿದ್ದರು. ತುಮಕೂರಿನಿಂದ ಹೊಳೆನರಸೀಪುರಕ್ಕೆ ಬರುವ ಹಾದಿಯಲ್ಲಿ ಈ ಘಟನೆ ನಡೆದಿದೆ. ತುಮಕೂರಿನಿಂದ ಕುಣಿಗಲ್ ತಲುಪಿದ್ದಾರೆ. ಅಲ್ಲಿಂದ ಕುರುಡಿಹಳ್ಳಿಗೆ ತೆರಳುತ್ತಿದ್ದಾಗ, ಆಟೋ ಚಾಲಕನಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಸೇರಿಸಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ತುಕಾಲಿ ಸಂತೋಷ್ ಕಾರು ಯಾರು ಓಡಿಸುತ್ತಿದ್ದರು, ಅಪಘಾತವಾಗಲೂ ಆದ ಪ್ರಮಾದವೇನು ಎಂಬುದರ ಯಾವ ಮಾಹಿತಿಯೂ ಇನ್ನು ಲಭ್ಯವಾಗಿಲ್ಲ. ಆಟೋ ಚಾಲಕ ಮಾತ್ರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ಮೊಕದ್ದಮೆ ದಾಖಲಿಸಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Tags :
Advertisement