ರೇವಣ್ಣ ಬಂಧನದ ಬೆನ್ನಲ್ಲೇ ದೂರು ನೀಡಲು ಬಂದ ಮೂವರು ಸಂತ್ರಸ್ತೆಯರು : ಮತ್ತಷ್ಟು ಸಂಕಷ್ಟ..!
ಬೆಂಗಳೂರು: ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ ಆರೋಪದ ಹಿನ್ನೆಲೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯೊಬ್ಬರು ದೂರು ನೀಡಿರುವುದು ಹಾಗೂ ಇನ್ನೊಬ್ಬ ಸಂತ್ರಸ್ತೆಯ ಮಗ ಕಿಡ್ನ್ಯಾಪ್ ಪ್ರಕರಣದಲ್ಲಿ ದೂರು ನೀಡಿರುವ ಕಾರಣಕ್ಕೆ ಬಂಧನವಾಗಿದೆ. ಬಂಧನಕ್ಕೂ ಮುನ್ನ ಆ ಸಂತ್ರಸ್ತ ಮಹಿಳೆಯನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಪೊಲೀಸರು ಕಿಡ್ನ್ಯಾಪ್ ಆದ ಮಹಿಳೆಯನ್ನು ಬಂಧಿಸಿದ್ದಾರೆ. ಎರಡು ಕೇಸು ದಾಖಲಾಗಿರುವ ಕಾರಣ ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ.
ಇದೀಗ ರೇವಣ್ಣಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಯಾಕಂದ್ರೆ ಮತ್ತೆ ಮೂವರು ಸಂತ್ರಸ್ತೆಯರು ದೂರು ನೀಡಲು ಮುಂದಾಗಿದ್ದಾರೆ. ಆ ಮೂವರು ಸಂತ್ರಸ್ತೆಯರು ಈಗಾಗಲೇ ಎಸ್ಐಟಿ ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಎಸ್ಐಟಿ ಅಧಿಕಾರಿಗಳಿಂದ ಆ ಸಂಬಂಧ ಪರಿಶೀಲನೆ ನಡೆಯುತ್ತಿದೆ. ಮತ್ತೆ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.
ನಿನ್ನೆ ರಾತ್ರಿ ಖಚಿತ ಮಾಹಿತಿಯೊಂದಿಗೆ ಎಸ್ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ರೇವಣ್ಣ ಅವರ ಮೊಬೈಲ್ ಸೀಜ್ ಮಾಡಲಾಗಿದೆ. ಮೊಬೈಲ್ ನಲ್ಲಿರುವ ಚಾಟಿಂಗ್, ಕಾಲ್ ಹಿಸ್ಟರಿ ಎಲ್ಲವನ್ನು ಪರಿಶೀಲನೆ ಮಾಡುವುದಕ್ಕೆ ಎಸ್ಐಟಿ ಮುಂದಾಗಿದೆ. ಕಿಡ್ನ್ಯಾಪ್ ಕೇಸ್ ಬಂದಿರುವ ಕಾರಣ ಟೆಕ್ನಿಕಲ್ ಎವಿಡೆನ್ಸ್ ಗಾಗಿ ಎಲ್ಲಾ ರೀತಿಯ ಪರಿಶೀಲನೆ ಮಾಡುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ವಿದೇಶದಿಂದ ಇನ್ನು ರಾಜ್ಯಕ್ಕೆ ಬಂದಿಲ್ಲ. ಪ್ರಜ್ವಲ್ ರೇವಣ್ಣನಿಗೂ ಲುಕ್ ಔಟ್ ನೋಟೀಸ್ ಕೂಡ ನೀಡಲಾಗಿದೆ. ಬಂದ ಕೂಡಲೇ ಪ್ರಜ್ವಲ್ ರೇವಣ್ಣರನ್ನು ಬಂಧಿಸುವ ಸಾಧ್ಯತೆ ಹೆಚ್ಚಾಗಿದೆ.