ಟೀಂ ಇಂಡಿಯಾ ಕೋಚ್ ಹುದ್ದೆಗೆ ಮೂವರ ಹೆಸರು ರೇಸ್ ನಲ್ಲಿ : ದ್ರಾವಿಡ್ ಗೆ ಸಿಗಲ್ವಾ ಮತ್ತೆ ಹುದ್ದೆ..?
ಐಪಿಎಲ್ ಮುಗಿದ ಕೂಡಲೇ ಟಿ20 ವಿಶ್ವಕಪ್ ಶುರುವಾಗಲಿದೆ. ಅದಕ್ಕೆ ಉಳಿದಿರುವುದು ಇನ್ನು ಕೇವಲ 20 ದಿನಗಳಷ್ಟೇ. ಆದರೆ ಈ ಬೆನ್ನಲ್ಲೇ ಟೀಂ ಇಂಡಿಯಾ ಕೋಚ್ ಬಗ್ಗೆ ಚರ್ಚೆ ಶುರುವಾಗಿದೆ. ಈಗ ಇರುವ ಟೀಂ ಇಂಡಿಯಾದ ಕೋಚ್ ಆಗಿ ರಾಹುಲ್ ದ್ರಾವಿಡ್ ಇದ್ದರು. ಆದರೆ ಈಗ ಅವರ ಕೋಚ್ ಅವಧಿ ಮುಕ್ತಾಯವಾಗಲಿದೆ. ಹೀಗಾಗಿ ಹೊಸ ಕೋಚ್ ಆಯ್ಕೆಯ ಪ್ರಕ್ರಿಯೆ ನಡೆಸಲಾಗುತ್ತಿದೆ.
ಈಗಾಗಲೇ ಬಿಸಿಸಿಐ ಕಾರ್ಯದರ್ಶಿ ಟೀಂ ಇಂಡಿಯಾ ಕೋಚ್ ಗೆ ಹುದ್ದೆ ಅರ್ಜಿ ಆಹ್ವಾನಿಸಲಾಗುತ್ತೆ. ಆ ಸಮಯದಲ್ಲು ರಾಹುಲ್ ದ್ರಾವಿಡ್ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. ಆಮೇಲೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಮುಂದಿನ ಮೂರು ವರ್ಷಕ್ಕೆ ಕೋಚ್ ನೋಡುತ್ತಿದ್ದೇವೆ ಎಂದಿದ್ದಾರೆ. ಈಗಾಗಲೇ ಈ ರೇಸ್ ನಲ್ಲಿ ಮೂವರ ಹೆಸರು ಕೂಡ ಕೇಳಿ ಬರುತ್ತಿದೆ. ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್, ಗುಜರಾತ್ ಟೈಟನ್ಸ್ ತಂಡದ ಕೋಚ್ ಆಶಿಶ್ ನೆಹ್ರಾ, ಮಾಜಿ ಆಸಿಸ್ ಕ್ರಿಕೆಟಿಗ ರಿಕಿ ಪಾಂಟಿಂಗ್ ಹೆಸರುಗಳು ಓಡಾಡುತ್ತಿವೆ. ಆದರೆ ಕನ್ನಡಿಗರ ಆಸೆ ಮತ್ತೆ ರಾಹುಲ್ ದ್ರಾವಿಡ್ ಮುಂದುವರೆಯಲಿ ಎಂಬುದಾಗಿದೆ.
ಟೀ ಇಂಡಿಯಾದ ಕೋಚ್ ಆಗಿ ರಾಹುಲ್ ದ್ರಾವಿಡ್ 3 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಆದರೆ ಅವರ ಅಧಿಕಾರಾವಧಿ ಏಕದಿನ ವಿಶ್ವಕಪ್ ವೇಳೆಯೇ ಅಂತ್ಯವಾಗಿತ್ತು. ಆದರೆ ಟಿ20 ವಿಶ್ವಕಪ್ ಹಿತದೃಷ್ಟಿಯಿಂದ ಅವರ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಣೆ ಮಾಡಲಾಗಿತ್ತು. ಇದೀಗ ಆ ಅವಧಿಯು ಮುಕ್ತಾಯಗೊಂಡಿರುವ ಕಾರಣ, ಬಿಸಿಸಿಐ ಹೊಸ ಕೋಚ್ ನೇಮಕಕ್ಕೆ ಅರ್ಜಿ ಆಹ್ವಾನಿಸಲು ತೀರ್ಮಾನ ಮಾಡಲಾಗಿದೆ.