For the best experience, open
https://m.suddione.com
on your mobile browser.
Advertisement

ಖಾಸಗಿ ವಿಡಿಯೋ ಲೀಕ್ ಮಾಡುವುದಾಗೊ ಬೆದರಿಕೆ : ವರುಣ್ ಆರಾಧ್ಯ ವಿರುದ್ಧ ವರ್ಷಾ ಕಾವೇರಿ ದೂರು

09:01 PM Sep 11, 2024 IST | suddionenews
ಖಾಸಗಿ ವಿಡಿಯೋ ಲೀಕ್ ಮಾಡುವುದಾಗೊ ಬೆದರಿಕೆ   ವರುಣ್ ಆರಾಧ್ಯ ವಿರುದ್ಧ ವರ್ಷಾ ಕಾವೇರಿ ದೂರು
Advertisement

Advertisement
Advertisement

ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮೂಲಕವೇ ಖ್ಯಾತಿ ಪಡೆದಿದ್ದ ವರುಣ್ ಆರಾಧ್ಯ ಬಳಿಕ ಕಲರ್ಸ್ ಕನ್ನಡದ ಬೃಂದಾವನ ಸೀರಿಯಲ್ ನಲ್ಲಿ ಅವಕಾಶವನ್ನು ಪಡೆದಿದ್ದರು. ಅದಕ್ಕೂ ಮುನ್ನ ಸುಮಾರು ವರ್ಷಗಳಿಂದ ಪ್ರೀತಿ ಮಾಡಿದ್ದಂತ ವರ್ಷಾ ಜೊತೆಗೆ ಬ್ರೇಕಪ್ ಮಾಡಿಕೊಂಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಜೋಡಿ ಒಂದೊಳ್ಳೆ ಫಾಲೋವರ್ಸ್ ಅನ್ನು ಸಂಪಾದನೆ ಮಾಡಿತ್ತು. ಇಬ್ಬರು ಲವ್ ಬ್ರೇಕಪ್ ಅನ್ನು ಸೋಷಿಯಲ್ ಮೀಡಿಯಾದಲ್ಲಿಯೇ ಘೋಷಣೆ ಮಾಡಿಕೊಂಡಿದ್ದರು.

Advertisement
Advertisement

ಇದೀಗ ಮಾಜಿ ಪ್ರೇಯಸಿ ವರ್ಷಾ ಕಾವೇರಿ, ವರುಣ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. 4 ವರ್ಷಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದ ವರುಣ್ ಆರಾಧ್ಯ, ನನ್ನ ಜೊತೆ ಪ್ರೀತಿಸಿ, ವಂಚನೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಆತ ನನ್ನ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ದಯವಿಟ್ಟು ಆತನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ದೂರು ನೀಡಿದ್ದಾರೆ.

ವರ್ಷಾ ಕಾವೇರಿ ನೀಡಿದ ದೂರಿನಲ್ಲಿ, 'ನಾನು ಸಾಮಾಜಿಕ ಜಾಲತಾಣವಾದ Instagram ನಲ್ಲಿ ಜಾಹಿರಾತು ಕೆಲಸವನ್ನು ಮಾಡಿಕೊಂಡಿದ್ದು, 2019ರ ಮಾರ್ಚ್ 31ರಂದು ಸೀರಿಯಲ್ ನಟ, ಯೂಟ್ಯೂಬರ್ ಆದ ವರುಣ್ ಆರಾಧ್ಯ ಪರಿಚಯವಾಗಿತ್ತು. ಮುಂದೆ ಸ್ನೇಹಿತರಾಗಿದ್ದೆವು. ಸ್ನೇಹ ಪ್ರೀತಿಯಾಗಿ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದೆವು. 4-5 ತಿಂಗಳ ನಂತರ ನಾನು ಮತ್ತು ವರುಣ್ ಪರಸ್ಪರ ಭೇಟಿಯಾದಾಗ ತಿಳಿದೋ ಅಥವಾ ತಿಳಿಯದೆಯೋ ನನ್ನ ವೈಯಕ್ತಿಕ ಫೋಟೋ ಹಾಗೂ ವಿಡಿಯೋಗಳನ್ನ ತನ್ನ ಮೊಬೈಲ್ ನಲ್ಲಿ ತೆಗೆದುಕೊಂಡಿದ್ದ.

2023ರಲ್ಲಿ ವರುಣ್ ಆರಾಧ್ಯ ಫೋನ್ ನೋಡಿದಾಗ ಆತ ಬೇರೆ ಹುಡುಗಿಯ ಜೊತೆಗಿದ್ದ ಖಾಸಗಿ ವಿಡಿಯೋ ಮತ್ತು ಫೋಟೋ ನೋಡಿದೆ. ಅದನ್ನು ಪ್ರಶ್ನೆ ಮಾಡಿದಾಗ ಅಫೇರ್ ವಿಚಾರವನ್ನು ಎಲ್ಲಿಯೂ ಹೇಳಬಾರದು. ಹೇಳಿದರೆ ನಿನ್ನ ವೈಯಕ್ತಿಕ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆಂದು ಬೆದರಿಕೆ ಹಾಕಿದ್ದಾನೆ. 2023 ಸೆ.10ರಂದು ನನ್ನ ಮೊಬೈಲ್ ಗೆ ವರುಣ್ ಆರಾಧ್ಯ ನನ್ನ ಖಾಸಗಿ ಫೋಟೋಗಳನ್ನು ಕಳುಹಿಸಿದ್ದ. ಯಾಕೆ ಕಳುಹಿಸಿದೆ ಎಂದು ಕೇಳಿದಾಗ ಈ ರೀತಿ ಇನ್ನು ಹೆಚ್ಚು ಫೋಟೋ, ವಿಡಿಯೋಗಳಿದಾವೆ. ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತೇನೆ ಎಂದು ಬೆದರಿಕೆ ಹಾಕಿ, ನನ್ನನ್ನು ಅವಾಚ್ಯ ಶಬ್ದಗಳಿಂದ ಬೈದು, ನನ್ನ ದೇಹದ ಅಂಗಾಂಗಗಳ ಬಗ್ಗೆ ಕೆಟ್ಟದಾಗಿ ನಿಂದಿಸಿದ್ದಾನೆ. ಮುಂದೆ ನೀನು ಮದುವೆಯಾದಲ್ಲಿ ಆತನನ್ನು ಸೇರಿ ಸಾಯಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಭಯಕ್ಕೆ ಇಲ್ಲಿಯವರೆಗೂ ದೂರು ನೀಡಿರಲಿಲ್ಲ. ತಡವಾಗಿ ನೀಡುತ್ತಿದ್ದೇನೆ ಎಂದು ದೂರಿನಲ್ಲಿ ಬರೆದುಕೊಟ್ಟಿದ್ದಾರೆ.

Advertisement
Tags :
Advertisement