Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಇಸ್ರೋ ಅಧ್ಯಕ್ಷ ಸೋಮನಾಥ್ ಸೇರಿ ಯಾರಿಗೆಲ್ಲಾ ಈ ವರ್ಷದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ : ಇಲ್ಲಿದೆ‌ ಮಾಹಿತಿ

05:25 PM Oct 31, 2023 IST | suddionenews
Advertisement

ಬೆಂಗಳೂರು: ಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕನ್ನಡ‌ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡದ ಆಯ್ಕೆ ಸಮಿತಿಯಲ್ಲಿ, ಸಾಧಕರ ಹೆಸರನ್ನು ಘೋಷಣೆ ಮಾಡಲಾಗಿದೆ.

Advertisement

ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರೇ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಣೆ ಮಾಡಿದ್ದಾರೆ. 2023ನರೆ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯ ಸಾಧಕರು ಈ ಕೆಳಕಂಡಂತಿದೆ. ಚಲನಚಿತ್ರ, ರಂಗಭೂಮಿ, ನೃತ್ಯ, ಶಿಲ್ಪಕಲೆ, ಯಕ್ಷಗಾನ, ಜಾನಪದ ಕ್ಷೇತ್ರದಲ್ಲಿ ಸಾಧಕರನ್ನು ಗುರುತಿಸಿ, ಪ್ರಶಸ್ತಿ ನೀಡಲಾಗುತ್ತಿದೆ. 13 ಮಹಿಳೆಯರು ಮತ್ತು 54 ಪುರುಷರು ಮತ್ತು ಒಬ್ಬರು ಮಂಗಳಮುಖಿಗೆ ಪ್ರಶಸ್ತಿ ನೀಡಲಾಗುತ್ತಿದೆ.

ಹಿರಿಯ ನಟ ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ದನ್, ಡಾ. ನಯನ ಎಸ್ ಮೊರೆ, ನೀಲಾ ಎಂ ಕೊಡ್ಲಿ, ಶಬ್ಬೀರ್ ಅಹ್ಮದ್, ಬಾಳೇಶ್ ಭಜಂತ್ರಿ, ಚಿದಂಬರ ರಾವ್ ಬಂಬೆ - ಶಿವಮೊಗ್ಗ, ಪಿ ಗಂಗಾಧರ ಸ್ವಾಮಿ - ಮೈಸೂರು, ಹೆಚ್ ಬಿ ಸರೋಜಮ್ಮ - ಧಾರವಾಡ, ತಯ್ಯಬಖಾನ್ ಎಂ ಇನಾಮದಾರ - ಬಾಗಲಕೋಟೆ, ಡಾ. ವಿಶ್ವನಾಥ್ ವಂಶಾಕೃತ ಮಠ - ಬಾಗಲಕೋಟೆ, ಪಿ ತಿಪ್ಪೇಸ್ವಾಮಿ - ಚಿತ್ರದುರ್ಗ, ಟಿ.ಶಿವಶಂಕರ್- ದಾವಣಗೆರೆ, ಕಾಳಪ್ಪ ವಿಶ್ವಕರ್ಮ- ರಾಯಚೂರು, ಮಾರ್ಥಾ ಜಾಕಿಮೋವಿಚ್- ಬೆಂಗಳೂರು, ಪಿ.ಗೌರಯ್ಯ- ಮೈಸೂರು, ಅರ್ಗೋಡ್ ಮೋಹನದಾಸ್ ಶೆಣೈ - ಉಡುಪಿ, ಕೆ.ಲೀಲಾವತಿ ಬೈಪಾಡಿತ್ತಾಯ - ದಕ್ಷಿಣ ಕನ್ನಡ, ಕೇಶವಪ್ಪ ಶಿಳ್ಳಿಕ್ಯಾತರ - ಕೊಪ್ಪಳ, ದಳವಾಯಿ ಸಿದ್ದಪ್ಪ - ವಿಜಯನಗರ, ಹುಸೇನಾಬಿ, ಬುಡೆನ್ ಸಾಬ್ ಸಿದ್ದಿ - ಉತ್ತರ ಕನ್ನಡ, ಶಿವಂಗಿ ಶಣ್ಮರಿ - ದಾವಣಗೆರೆ, ಮಹದೇವು - ಮೈಸೂರು, ನರಸಪ್ಪಾ - ಬೀದರ್, ಶಕುಂತಲಾ ದೇವಲಾನಾಯಕ - ಕಲಬುರಗಿ, ಶಂಭು ಬಳಿಗಾರ - ಗದಗ, ವಿಭೂತಿ ಗುಂಡಪ್ಪ - ಕೊಪ್ಪಳ, ಚೌಡಮ್ಮ - ಚಿಕ್ಕಮಗಳೂರು ಇವರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

Advertisement

Advertisement
Tags :
bangaloreDingri NagarajHere is the informationISRO Chairman SomnathKannada Rajyotsav AwardKarnatakaLatest newsಇಸ್ರೋ ಅಧ್ಯಕ್ಷ ಸೋಮನಾಥ್ಕನ್ನಡ ರಾಜ್ಯೋತ್ಸವ ಪ್ರಶಸ್ತಿಡಿಂಗ್ರಿ ನಾಗರಾಜ್ಬೆಂಗಳೂರು
Advertisement
Next Article