For the best experience, open
https://m.suddione.com
on your mobile browser.
Advertisement

ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗೋದು ಇವರೇ ನೋಡಿ..!

06:29 PM Nov 25, 2023 IST | suddionenews
ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗೋದು ಇವರೇ ನೋಡಿ
Advertisement

Advertisement
Advertisement

ಬಿಗ್ ಬಾಸ್ ಸೀಸನ್‌ 10.. ದಿನಕಳೆದಂತೆ ಗಂಭೀರವಾಗುತ್ತಿದೆ. ಆಟಗಳು ಜೋರಾಗುತ್ತಿವೆ. ಸ್ಪರ್ಧಿಗಳಿಗೆ ನಡುಕ ಉಂಟಾಗುತ್ತಿದೆ. ಕಳೆದ ವಾರದವರೆಗೆ ನಿರೀಕ್ಷಿಸಿದ ಸ್ಪರ್ಧಿಗಳು ಮನೆಯಿಂದ ಹೊರಗೆ ಹೋಗಿದ್ದಾರೆ. ಈ ವಾರದಿಂದ ಸ್ಪರ್ಧೆ ಕಠಿಣವಾಗುತ್ತಾ ಸಾಗುತ್ತಿದೆ. ಈ ವಾರ ಮನೆಯಿಂದ ಯಾರು ಹೊರಗೆ ಹೋಗಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ. ಯಾಕಂದ್ರೆ ಎಲ್ಲರೂ ಚೆನ್ನಾಗಿಯೇ ಆಟವಾಡುತ್ತಿದ್ದಾರೆ. ಹೀಗಾಗಿ ಜಡ್ಜ್ ಮಾಡುವುದು ಬಹಳ ಕಷ್ಟವಾಗುತ್ತಿದೆ.

Advertisement

ಈ ವಾರದ ನಾಮಿನೇಷನ್ ನಲ್ಲಿ ಎಲ್ಲರೂ ಇದ್ದಾರೆ. ಕ್ಯಾಪ್ಟನ್ ಆಗಿರುವ ಕಾರ್ತಿಕ್, ಮೈಕೆಲ್ ಹಾಗೂ ವರ್ತೂರು ಸಂತೋಷ್ ಪಾರಾಗಿದ್ದಾರೆ. ಇನ್ನು ಉಳಿದ ಎಲ್ಲರೂ ನಾಮಿನೇಷನ್ ಸಾಲಿನಲ್ಲಿ ಇದ್ದಾರೆ. ತುಕಾಲಿ ಸಂತೋಷ್, ಸಂಗೀತಾ, ಪ್ರತಾಪ್, ಸಿರಿ, ಸ್ನೇಹಿತ್, ತನಿಶಾ, ವಿನಯ್, ನಮ್ರತಾ, ನೀತೂ ಇವರಲ್ಲಿ ಹೊರಗೆ ಹೋಗುವುದು ಯಾರು ಎಂಬ ಪ್ರಶ್ನೆ ಎದುರಾಗಿದೆ.

Advertisement
Advertisement

ಇವತ್ತು ವಾರದ ಕಥೆ ಕಿಚ್ಚನ ಜೊತೆ ಪಂಚಾಯ್ತಿ ನಡೆಯಲಿದೆ‌. ಈ ಪಂಚಾಯ್ತಿಯಲ್ಲಿ ಹಲವು ವಿಚಾರಗಳು ಚರ್ಚೆಗೆ ಬರಲಿವೆ. ಈ ವಾರ ಸಂಗೀತಾ ಹಾಗೂ ಕಾರ್ತೀಕ್ ನಡುವಿನ ಮುನಿಸಿನ ಬಗ್ಗೆ ಕಿಚ್ಚ ಪ್ರಶ್ನೆ ಮಾಡಿದ್ದಾರೆ. ಒಂದೇ ಒಂದು ದಿನದಲ್ಲಿ ಅಭಿಪ್ರಾಯ ಹೇಗೆ ಬದಲಾಯಿತು ಎಂಬುದನ್ನು ಕೇಳಿದ್ದಾರೆ. ವಿಲನ್ ಆಗಿದ್ದ ವಿನಯ್ ಈಗ ಸಂಗೀತಾ ಪಾಲಿಗೆ ಸಾಫ್ಟ್ ಹೀರೋ ಆಗಿದ್ದಾರಂತೆ‌. ಇದನ್ನ ಕಿಚ್ಚನ ಮುಂದೆ ಸಂಗೀತಾ ಅವರೇ ಹೇಳಿದ್ದಾರೆ.

ಈ ವಾರದಲ್ಲಿ ನಾಮಿನೇಟ್ ಆದ ಸದಸ್ಯರಲ್ಲಿ ಸಿರಿ, ಸ್ನೇಹಿತ್ ಹಾಗೂ ನಮ್ರತಾ ನಡುವೆ ನೆಕ್ ಮೂಮೆಂಟ್ ಫೈಟ್ ಇದೆ. ಈ ಫೈಟ್ ನಲ್ಲಿ ಸಿರಿ ಮನೆಯಿಂದ ಹೊರ ಹೋಗುವ ಸಾಧ್ಯತೆ ಇದೆ ಎನ್ನುತ್ತಿವೆ ಮೂಲಗಳು.

Advertisement
Tags :
Advertisement