ಪಿಂಚಣಿದಾರರಿಗಾಗಿ ಈ ಸುದ್ದಿ : ಜೀವ ಪ್ರಮಾಣ ಪತ್ರ ಸಲ್ಲಿಸಲು ಎಷ್ಟು ದಿನ ಬಾಕಿ..?
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಉದ್ಯೋಗ ಮಾಡಿ ನಿವೃತ್ತಿ ಹೊಂದಿರುವವರಿಗೆ ಪಿಂಚಣಿ ಬರಲಿದೆ. ಆ ಪಿಂಚಣಿ ಪಡೆಯಲು ಜೀವ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಇದೀಗ ಪಿಂಚಣಿದಾರರು ಪಿಂಚಣಿ ಪಡೆಯಲು ಜೀವ ಪ್ರಮಾಣ ಪತ್ರ ಸಲ್ಲಿಸಲು ಇನ್ನು ಮೂರು ದಿನಗಳ ಕಾಲ ಅವಕಾಶ ನೀಡಲಾಗಿದೆ. ಇನ್ನು ಮೂರು ದಿನಗಳಲ್ಲಿ ಜೀವ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗಿದೆ.
ಪಿಂಚಣಿಯ ಫಲಾನುಭವಿಗಳು ಪ್ರತಿ ವರ್ಷ ಕೂಡ ಜೀವಂತ ಇರುವ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಸಲ್ಲಿಸದೇ ಹೋದಲ್ಲಿ ಬರುವ ಪಿಂಚಣಿ ನಿಂತು ಹೋಗುತ್ತದೆ. ಜೀವ ಪ್ರಮಾಣ ಪತ್ರವನ್ನು ಹತ್ತಿರದ ಅಂಚೆ ಕಚೇರಿ ಅಥವಾ ಬ್ಯಾಂಕ್ ಗೆ ಸಲ್ಲಿಸಬೇಕಾಗುತ್ತದೆ. ಪಿಂಚಣಿ ತಪ್ಪದೆ ಬರುವುದಕ್ಕೆ ಈ ಪ್ರಮಾಣ ಪತ್ರ ಅತ್ಯಗತ್ಯವಾಗಿದೆ. ಸಮಯ ಮೀರಿದರೆ ಮತ್ತೆ ಅದಕ್ಕೆ ಬೇರೆ ನಿಯಮಗಳು ಅಪ್ಲೈ ಆಗಲಿವೆ.
ನವೆಂಬರ್ 30 ಇದಕ್ಕೆ ಕೊನೆಯ ದಿನ. ಅಷ್ಟರ ಒಳಗೆ ಜೀವ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಸಲ್ಲಿಸದೆ ಹೋದಲ್ಲಿ ಮುಂದಿನ ತಿಂಗಳ ಪಿಂಚಣಿ ನಿಂತು ಹೋಗಲಿದೆ. ಪ್ರಮಾಣ ಪತ್ರ ನೀಡಿ ಮತ್ತೆ ಸಕ್ರೀಯಗೊಳಿಸಿದ ಬಳಿಕ ಪಿಂಚಣಿ ಬರಲಿದೆ. ಪಿಂಚಣಿ ಪಡೆಯುತ್ತಿರುವವರು ಮೃತರಾದರೂ ಸಹ ಅವರ ಖಾತೆಗೆ ಹಣ ಜಮೆಯಾಗುತ್ತಿತ್ತು. ಹೀಗಾಗಿ ಅದನ್ನು ತಪ್ಪಿಸಲು ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಫಲಾನುಭವಿಗಳು ಪ್ರತಿ ವರ್ಷವೂ ತಾವೂ ಬದುಕಿರುವ ಪ್ರಮಾಣ ಪತ್ರವನ್ನು ನೀಡಿ, ಪಿಂಚಣಿ ಪಡೆಯಬಹುದಾಗಿದೆ. ಪಿಂಚಣಿ ಹಣ ಪಡೆಯುವ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಸಲ್ಲಿಸಬೇಕು.