Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಜ್ಞಾನ ದೇಗುಲವಿದು.. ಧೈರ್ಯವಾಗಿ ಒಳಗೆ ಬಾ: ಧ್ಯೇಯ ವಾಕ್ಯ ಬದಲಾವಣೆ : ಕಾಂಗ್ರೆಸ್ ವಿರುದ್ಧ ಬಿಜೆಪಿ ಕೆಂಡಾಮಂಡಲ

05:01 PM Feb 19, 2024 IST | suddionenews
Advertisement

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಆರಂಭದಲ್ಲಿಯೇ ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ ಎಂಬ ಬೋರ್ಡ್ ಕಾಣಿಸುತ್ತದೆ. ಆದರೆ ಈಗ ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಈ ಧ್ಯೇಯ ವಾಕ್ಯ ಬದಲಾವಣೆಯಾಗಿದೆ‌. ಜ್ಞಾನ ದೇಗುಲವಿದು.. ಧೈರ್ಯವಾಗಿ ಪ್ರಶ್ನಿಸು ಎಂಬುದಾಗಿ ಬದಲಾವಣೆಯಾಗಿದೆ. ಇದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಇಂದಿನ ವಿಧಾನಸಭೆಯಲ್ಲಿ ಈ ವಿಚಾರವಾಗಿ ಧ್ವನಿ ಎತ್ತಿದ್ದಾರೆ.

Advertisement

ಕುವೆಂಪು ಅವರ ಧ್ಯೇಯ ವಾಕ್ಯವನ್ನು ಬದಲಾವಣೆ ಮಾಡಿರುವುದಕ್ಕೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಕಾಂಗ್ರೆಸ್ ಹಿಂದೂ ವಿರೋಧಿ ಮನಸ್ಥಿತಿಯನ್ನು ತೋರುತ್ತಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ‌.

ವಸತಿ ಶಾಲೆಗಳಲ್ಲಿನ ಧ್ಯೇಯ ವಾಕ್ಯ ಬದಲಾವಣೆ ಬಗ್ಗೆ ಕಲಾಪದ ನಡುವೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕುವೆಂಪು ಅವರಿಗೆ ಅವಮಾನ ಮಾಡುವ ರೀತಿ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ನಡೆದುಕೊಂಡಿದ್ದಾರೆ. ರಾಜ್ಯ ಸರ್ಕಾರದಲ್ಲಿ ಏನು ಆಗುತ್ತಿದೆ ಎಂಬುದನ್ನು ತಿಳಿಸಬೇಕಿದೆ. ಸರ್ಕಾರ ಮತ್ತೊಂದು ಮತಿಗೇಡಿತನಕ್ಕೆ ಕೈ ಹಾಕಿ ವಿಕೃತಿ ಮೆರೆಯುತ್ತಿದೆ. ವಿದ್ಯಾರ್ಥಿಗಳನ್ನು ಶಿಕ್ಷಕರ ವಿರುದ್ಧ ಎತ್ತಿಕಟ್ಟಲು ಇದು ಪ್ರಚೋದನೆ ನೀಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ಬಗ್ಗೆ ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡಿದ್ದು,
ಶಾಲೆಯ ಘೋಷ ವಾಕ್ಯ ಬದಲಿಸಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕುವೆಂಪು ಆಚಾರ, ವಿಚಾರ ನಾವು ಪ್ರಚಾರ ಮಾಡುತ್ತಿದ್ದೇವೆ ಎಂದಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ ಕುವೆಂಪು ಸಾಹಿತ್ಯ ನಾವೇಕೆ ಬದಲಿಸೋಣ ಎಂದಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಕುರಿತು ಮಾತನಾಡಿದ್ದು, ವಸತಿ ಶಾಲೆಯಲ್ಲಿ ಘೋಷ ವಾಕ್ಯ ಬದಲಾವಣೆಯ ಕಾರಣ ಗೊತ್ತಿಲ್ಲ. ಯಾವ ನಿಟ್ಟಿನಲ್ಲಿ ಈ ರೀತಿಯಾಗಿ ವಿಷಯ ಬದಲಾವಣೆ ಮಾಡಿದ್ದಾರೆ ಅಂತ ಗೊತ್ತಿಲ್ಲ ಎಂದಿದ್ದಾರೆ.

Advertisement
Tags :
BjpCongressMission statement changetemple of knowledgeಕಾಂಗ್ರೆಸ್ಜ್ಞಾನ ದೇಗುಲ ಧೈರ್ಯವಾಗಿ ಒಳಗೆ ಬಾಧ್ಯೇಯ ವಾಕ್ಯ ಬದಲಾವಣೆಬಿಜೆಪಿ ಕೆಂಡಾಮಂಡಲ
Advertisement
Next Article