ದ್ವೇಷದ ರಾಜಕಾರಣಕ್ಕೆ ಸಿಬಿಐ ಒಳಪಡಬಾರದು ಎಂಬ ದೃಷ್ಟಿಯಿಂದ ಈ ತೀರ್ಮಾನ : ಡಿಕೆಶಿ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕೇಸಿನ ವಿಚಾರದಲ್ಲಿ ಸಚಿವ ಸಂಪುಟದಲ್ಲಿ ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ಸಿಬಿಐ ಎಂಟ್ರಿಯಾಗುವಂತೆ ಇಲ್ಲ ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
'ಸಿಬಿಐನವರು ಏನೇನು ಮಾಡ್ತಾ ಇದ್ದಾರೆ ಎಂಬುದನ್ನು ನಾವೂ ಚರ್ಚೆ ಮಾಡೋದು ಬೇಡ. ಜೆಡಿಎಸ್ ನವರು ಏನ್ ಮಾಡಿದ್ರು, ಕುಮಾರಸ್ವಾಮಿ ಅವರು ಏನು ಮಾತಾಡಿದ್ರು, ಬಿಜೆಪಿ ಅವರು ಏನ್ ಮಾತಾಡಿದ್ರು ಅನ್ನೋದು ಗೊತ್ತಿದೆ. ಈಗ ಚರ್ಚೆ ಬೇಡ. ಅವರು ಎಷ್ಟು ಕೇಸ್ ಕೊಟ್ಟಿದ್ರು, ಕೇಸ್ ಏನಾಗಿದೆ, ಸಿಬಿಐ ರಿಪೋರ್ಟ್ ಏನಾಗಿದೆ ಎಂಬುದೆಲ್ಲವನ್ನು ಚರ್ಚೆ ಮಾಡೋದು ಬೇಡ ಎಂದಿದ್ದಾರೆ.
ಸಿದ್ದರಾಮಯ್ಯ ಅವರನ್ನು ಉಳಿಸಲು ಸಿಬಿಐ ದೂರ ಇಟ್ಟಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ ಡಿಸಿಎಂ, ಸರ್ಕಾರ ಒಂದು ಚರ್ಚೆ ಮಾಡಿದೆ. ದ್ವೇಷದ ರಾಜಕಾರಣಕ್ಕೆ ಸಿಬಿಐ ಒಳಪಡಬಾರದು ಎಂಬ ದೃಷ್ಟಿಯಿಂದ ಈ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ. ನಮ್ಮ ಅಧಿಕಾರಿಗಳು ಮಾಡುವುದಕ್ಕೆ ಆಗಲ್ಲ ಎಂದಾಗ ನೋಡೋಣಾ. ವಿಪಕ್ಷಗಳು ಮಾತಾಡ್ಲಿ. ಅವರಿಗೆಲ್ಲ ಉತ್ತರವನ್ನು ಬೇರೆ ಸಮಯದಲ್ಲಿ ಕೊಡೋಣಾ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಇತ್ತ ವಿಪಕ್ಷ ನಾಯಕರು ಸಿದ್ದರಾಮಯ್ಯ ಅವರು ಮೊದಲು ರಾಜೀನಾಮೆ ನೀಡಲಿ ಎಂದೇ ಕೇಳುತ್ತಿದ್ದಾರೆ.
ರಾಜ್ಯಪಾಲರಿಂದ ಮಾಹಿತಿ ಸೋರಿಕೆ ಆರೋಪದ ಬಗ್ಗೆ ಮಾತನಾಡಿ, ಆ ಬಗ್ಗೆ ನಂಗೆ ಗೊತ್ತಿಲ್ಲ. ಅದು ಇಂಟರ್ನಲ್ ಮ್ಯಾಟರ್. ಯಾರೂ ಏನು ಬರೆದಿದ್ದಾರೆ ಎಂಬುದು ಗೊತ್ತಿಲ್ಲ. ರಾಜ್ಯಪಾಲರ ಆಫೀಸಲ್ಲಿ ಏನು ನಡೆದಿದೆ, ಲೋಕಾಯುಕ್ತ ಆಫೀಸಲ್ಲಿ ಏನು ನಡೆದಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಎಂದಿದ್ದಾರೆ.