For the best experience, open
https://m.suddione.com
on your mobile browser.
Advertisement

ಈ ಬಾರಿಯ ಬಿಗ್ ಬಾಸ್ ಗೆ ಹೋಗ್ತಿದ್ದಾರೆ ಈ ಸ್ಟಾರ್ ಗಳು : ಕನ್ಫರ್ಮ್ ಸುದ್ದಿ ಇದು..!

05:46 PM Sep 28, 2024 IST | suddionenews
ಈ ಬಾರಿಯ ಬಿಗ್ ಬಾಸ್ ಗೆ ಹೋಗ್ತಿದ್ದಾರೆ ಈ ಸ್ಟಾರ್ ಗಳು   ಕನ್ಫರ್ಮ್ ಸುದ್ದಿ ಇದು
Advertisement

ಬೆಂಗಳೂರು : ಬಿಗ್ ಬಾಸ್ ಕನ್ನಡ‌ ಸೀಸನ್ 11ಗೆ ಕ್ಷಣಗಣನೆ ಶುರುವಾಗಿದೆ. ಬಿಗ್ ಬಾಸ್ ಮನೆಯೊಳಗೆ ಹೋಗೋದು ಯಾರು ಎಂಬ ಕುತೂಹಲ ಇಡೀ ಕರ್ನಾಟಕದ ಜನತೆಗೆ ಇದೆ. ಇಂದು ಸಂಜೆ ಅದಕ್ಕೆ ಕೊಂಚ ತೆರೆ ಬೀಳಲಿದೆ. ರಾಜಾರಾಣಿ ರಿಲೋಡೆಡ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಿದ್ದಾರೆ. ಆದರೆ ಅದಕ್ಕೂ ಮುನ್ನವೇ ಮೂಲಗಳ ಪ್ರಕಾರ, ಈ ನಟರು ಬಿಗ್ ಬಾಸ್ ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಮಾಹಿತಿ ಇದೆ.

Advertisement
Advertisement

ಬಿಗ್ ಬಾಸ್ ಮನೆಗೆ ಎಲ್ಲಾ ಕ್ಷೇತ್ರಗಳಿಂದಾನು ಸ್ಪರ್ಧಿಗಳು ಬರುತ್ತಾರೆ. ಅದರಲ್ಲೂ ಮನರಂಜನೆ, ಗ್ಲಾಮರ್ ಎಲ್ಲದಕ್ಕೂ ಗಮನ ಕೊಡುತ್ತಾರೆ. ಇದೀಗ ಈ ಬಾರಿ ಬಿಗ್ ಬಾಸ್ ಮನೆಗೆ ನಟಿ ಅನುಷಾ ರೈ ಹೋಗ್ತಿದ್ದಾರೆ. ಇವರು ಆಯ್ಕೆಯಾಗಿರುವುದು 100% ಖಚಿತ ಎಂಬುದನ್ನೇ ಹೇಳುತ್ತಿವೆ ಮೂಲಗಳು. ಇದರ ಜೊತೆಗೆ ಇನ್ನು ಹಲವು ಸ್ಟಾರ್ ಗಳು ಹೋಗುತ್ತಿದ್ದಾರೆ.

ಧರ್ಮ ಕೀರ್ತಿ ರಾಜ್ ಕೂಡ ಈ ಬಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಿದ್ದಾರೆ ಎನ್ನುತ್ತಿವೆ ಮೂಲಗಳು. ಚಾಕಲೃಟ್ ಬಾಯ್ ಧರ್ಮ ಕೀರ್ತಿ ರಾಜ್ ದೊಡ್ಮನೆಯಲ್ಲಿ ತಮ್ಮ ಜರ್ನಿಯನ್ನು ಹೇಗೆ ಕಳೆಯುತ್ತಾರೆ ಎಂಬುದನ್ನು ನೋಡುವುದಕ್ಕೆ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ.

Advertisement
Advertisement

ಇನ್ನು ಉಗ್ರಂ ಮಂಜು ಎಂದೇ ಖ್ಯಾತಿ ಪಡೆದಿರುವ ನಟ ಮಂಜುನಾಥ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಒಂದಷ್ಟು ಹೆಸರು ಇಂದೇ ಅಧಿಕೃತವಾಗಿ ಅನೌನ್ಸ್ ಆಗಲಿದೆ. ನಾಳೆ ಸಂಜೆ ಅಧಿಕೃತವಾಗಿ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಸೋಮವಾರದಿಂದ ಅದ್ದೂರಿ ಮನರಂಜನೆ ಸಿಗಲಿದೆ.

Advertisement
Tags :
Advertisement