Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಂದು ಹೆಂಡತಿ ವಿಚಾರ.. ಇಂದು ಪ್ರೇಯಸಿ ವಿಚಾರ.. 2ನೇ ಬಾರಿಗೆ ಜೈಲು ಸೇರಿದ ನಟ ದರ್ಶನ್

05:07 PM Jun 22, 2024 IST | suddionenews
Advertisement

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇಂದು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಇಂದು ಜೈಲು ಪಾಲಾಗಿದ್ದಾರೆ. ಹದಿಮೂರು ದಿನಗಳ ಕಾಲ ಅಂದರೆ ಜುಲೈ 4ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಮಹತ್ವದ ಆದೇಶ ಹೊರಡಿಸಿದೆ.

Advertisement

ದರ್ಶನ್ ಸೇರಿದಂತೆ ಅವರ ಗ್ಯಾಂಗ್ ನಲ್ಲಿದ್ದ ನಾಲ್ವರಿಗೆ ಇಂದು ಕಸ್ಟಡಿ ಅಂತ್ಯವಾಗಿತ್ತು. ಈ ಹಿನ್ನೆಲೆ‌ ಪೊಲೀಸರು ನ್ಯಾಯಾಧೀಶರ ಮುಂದೆ ನಾಲ್ವರನ್ನು ಹಾಜರುಪಡಿಸಿದ್ದರು. 24ನೇ ಎಸಿಎಂಎಂ ಕೋರ್ಟ್ ನಲ್ಲಿ ಹಾಜರುಪಡಿಸಿದ್ದರು. ದರ್ಶನ್, ವಿನಯ್, ಪ್ರದೂಶ್ ಮತ್ತು ಧನರಾಜ್ ರನ್ನು ತನಿಖಾಧಿಕಾರಿ ಚಂದನ್ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಸರ್ಕಾರದ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಹಾಗೂ ಅವರ ತಂಡ ಹಾಜರಿತ್ತು. ಜೊತೆಗೆ ದರ್ಶನ್ ಹಾಗೂ ಇತರೆ ನಾಲ್ಕು ಆರೋಪಿಗಳ ಪರ ವಕೀಲರು ಕೂಡ ಹಾಜರಿದ್ದರು. ಬಳಿಕ ಕೋರ್ಟ್ ಜುಲೈ 4ರವರೆಗೂ ನಾಲ್ಕು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇನ್ನು ದರ್ಶನ್ ಜೈಲಿಗೆ ಹೋಗುತ್ತಿರುವುದು ಇದು ಎರಡನೇ ಸಲ. ಮೊದಲ ಬಾರಿಗೆ ದರ್ಶನ್ ತಮ್ಮ ಹೆಂಡತಿ ವಿಜಯಲಕ್ಷ್ಮೀಗೆ ಹೊಡೆದು ಜೈಲುಪಾಲಾಗಿದ್ದರು. ಇಂದು ಪವಿತ್ರಾ ಗೌಡ ವಿಚಾರಕ್ಕೆ ಜೈಲು ಪಾಲಾಗುತ್ತಿದ್ದಾರೆ. ಪರಪ್ಪನ ಅಗ್ರಹಾರದ ಕಡೆಗೆ ಹೊರಟಿದ್ದಾರೆ. ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲವಾದ ಮೆಸೇಜ್ ಕಳುಹಿಸಿದ ಎಂಬ ಕಾರಣಕ್ಕೆ ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿಯನ್ನು ಕ್ರೂರವಾಗಿ ಕೊಂದಿದ್ದಾರೆ. ಹೀಗಾಗಿ ಕಳೆದ ಹದಿನೈದು ದಿನದಿಂದ ಪೊಲೀಸರು ವಿಚಾರಣೆ ನಡೆಸಿ, ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಜುಲೈ 4 ರ ಬಳಿಕ ದರ್ಶನ್ ಭವಿಷ್ಯ ಏನಾಗಲಿದೆ ಎಂಬುದನ್ನು ನೋಡಬೇಕಿದೆ.

Advertisement

Advertisement
Tags :
actor DarshanbengaluruChallenging star darshanchitradurgasuddionesuddione newsಚಿತ್ರದುರ್ಗಜೈಲುನಟ ದರ್ಶನ್ಪ್ರೇಯಸಿ ವಿಚಾರಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಹೆಂಡತಿ ವಿಚಾರ
Advertisement
Next Article