Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ವಾರದಿಂದ ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಮತ್ತೆ ಏರಿಕೆ..!

12:59 PM Dec 03, 2024 IST | suddionenews
Advertisement

 

Advertisement

 

ಚಿನ್ನ ಬೆಳ್ಳಿ ದರ ಹಾವು ಏಣಿ ಆಟ ಆಡುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಜೊತೆಗೆ ಈ ಹಾವು ಏಣಿ ಆಟದಲ್ಲಿ ಚಿನ್ನ ಖರೀದಿ ಮಾಡಬೇಕು ಎಂದುಕೊಂಡವರು ಯಾವಾಗಪ್ಪ ತೆಗೆದುಕೊಳ್ಳುವುದು ಎಂಬ ಗೊಂದಲ ಉಂಟಾಗಿದೆ. ಸದ್ಯ ಇಂದು 40 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಒಂದು ಗ್ರಾಂ 22 ಕ್ಯಾರಟ್ ಚಿನ್ನದ ದರ 7,130 ರೂಪಾಯಿಗೆ ತಲುಪಿದೆ. ನಿನ್ನೆ ತನಕ 7,090 ರೂಪಾಯಿ ಇತ್ತು.

Advertisement

ಇನ್ನು 24 ಕ್ಯಾರಟ್ ಚಿನ್ನದ ದರವೂ ಏರಿಕೆಯಾಗಿದ್ದು, ಈಗ 7,778 ರೂಪಾಯಿ ಆಗಿದೆ. ಬೆಳ್ಳಿಯ ಬೆಲೆಯಲ್ಲಿ ಇಂದು ಯಾವುದೇ ವ್ಯತ್ಯಯವಾಗಿಲ್ಲ. 91 ರೂಪಾಯಿ ಇದ್ದ ಬೆಳ್ಳಿ ಬೆಲೆ ಇಂದು ಕೂಡ ಅಷ್ಟೇ ಬೆಲೆ ಇದೆ. ಉಳಿದಂತೆ ಚಿನ್ನ ಬೆಳ್ಳಿಯ ಬೆಲೆ ಭಾರತದಾದ್ಯಂತ ಎಷ್ಟಿದೆ ಎಂಬುದನ್ನು ನೋಡೋಣಾ ಬನ್ನಿ.

ಭಾರತದಲ್ಲಿ 22 ಕ್ಯಾರಟ್ ಹತ್ತು ಗ್ರಾಂ ಚಿನ್ನದ ಬೆಲೆ 71,300 ರೂಪಾಯಿ ಇದೆ. 24 ಕ್ಯಾರಟ್ ಚಿನ್ನದ ಬೆಲೆ 77,780 ರೂಪಾಯಿ ಆಗಿದೆ. 18 ಕ್ಯಾರಟ್ ಚಿನ್ನದ ಬೆಲೆ 58,340 ರೂಪಾಯಿ ಆಗಿದೆ. ಉಳಿದಂತೆ ಬೆಳ್ಳಿ ಬೆಲೆ 91 ರೂಪಾಯಿ ಇದೆ. ಬೆಂಗಳೂರು, ಚೆನ್ನೈ, ಮುಂಬೈ, ಕೊಲ್ಕತ್ತಾ, ಕೇರಳ, ಭುವನೇಶ್ವರ ನಗರದಲ್ಲಿ ಹತ್ತು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 71,300 ಇದೆ. ಉಳಿದಂತೆ ದೆಹಲಿ, ಅಹ್ಮದಾಬಾದ್, ಜೈಪುರ, ಲಕ್ನೋ ನಗರದಲ್ಲಿ ಕೊಂಚ ಏರಿಳಿತದ ಬೆಲೆ ನಿಗದಿಯಾಗಿದೆ. ಒಳ್ಳೆ ಬೆಲೆ ಇಳಿಕೆಯಾಗುವುದಕ್ಕಾಗಿಯೇ ಜನ ಕಾಯುತ್ತಿದ್ದಾರೆ. ಆದರೆ ಈ ಹಾವು ಏಣಿ ಆಟದಲ್ಲಿ ಇಳಿಕೆ ಯಾವಾಗ ಅನ್ನೋದೆ ಚಿಂತೆಯಾಗಿದೆ.

Advertisement
Tags :
bengaluruchitradurgagoldincreasedkannadaKannadaNewsPricesuddionesuddionenewsಇಳಿಕೆಏರಿಕೆಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಚಿನ್ನದ ದರಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article