ಗಣನೀಯವಾಗಿ ಇಳಿಕೆ ಕಂಡ ಚಿನ್ನದ ದರ : ಇಂದು ಚಿನ್ನದ ಬೆಲೆ ಎಷ್ಟಿದೆ..?
ನವದೆಹಲಿ: ಕೇಂದ್ರ ಬಜೆಟ್ ಮಂಡನೆಯಾದ ಬೆನ್ನಲ್ಲೇ ಚಿನ್ನದ ದರ ಕೂಡ ಇಳಿಕೆಯತ್ತ ಮುಖ ಮಾಡಿದೆ. ಸತತವಾಗಿ ಮೂರು ದಿನಗಳಿಂದ ಇಳಿಕೆಯಾಗಿದ್ದು, ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಕಡಿಮೆಯಾಗಿದೆ. ಇದು ಮಹಿಳಾ ಮಣಿಗಳ ಸಂತಸವನ್ನು ಹೆಚ್ಚಿಸಿದೆ.
ಇಂದಿನ ಮಾರುಕಟ್ಟೆಯ ಬೆಲೆ 24 ಕ್ಯಾರೆಟ್‌ನ 10 ಗ್ರಾಂಗೆ 68,720 ಇದ್ದು, 22 ಕ್ಯಾರೆಟ್ 10 ಗ್ರಾಂಗೆ 62,000 ರೂ ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 6,325 ರೂಪಾಯಿ ಇದ್ದು, 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆಯು 6,900 ರೂ ಇದೆ. 22 ಕ್ಯಾರೆಟ್ 8 ಗ್ರಾಂ ಚಿನ್ನದ ಬೆಲೆ 50,600 ಇದೆ. 24 ಕ್ಯಾರೆಟ್ 8 ಗ್ರಾಂ ಚಿನ್ನದ ಬೆಲೆ 55,200 ಇದೆ.
ಚಿನ್ನದ ದರ ಇದೇ ರೀತಿ ಇಳಿಕೆಯಾದರೆ ಎಲ್ಲರಿಗೂ ಖುಷಿ. ಆದರೆ ತಜ್ಞರು ಹೇಳುವ ಚಿನ್ನದ ದರ ಏರಿಕೆಯಾದರೂ ಆಗಬಹುದು, ಈ ತಿಂಗಳ ಕೊನೆಯ ತನಕ ಕಾದು ಹೂಡಿಕೆ ಮಾಡುವುದು ಉತ್ತಮ ಎಂದೇ ಸಲಹೆಯನ್ನು ನೀಡಿದ್ದಾರೆ. ಕೇಂದ್ರ ಬಜೆಟ್ ನಲ್ಲಿ ಚಿನ್ನದ ಮೇಲೆ ಶೇಕಡ 6% ರಷ್ಟು ಕಸ್ಟಮ್ಸ್ ಸುಂಕದಲ್ಲಿ ಕಡಿಮೆ ಮಾಡಲಾಗಿದೆ. ಇದರ ಪರಿಣಾಮ ಚಿನ್ನ ಮತ್ತು ಬೆಳ್ಳಿಯಲ್ಲಿ ದರ ಇಳಕೆಯಾಗುತ್ತಲೇ ಇದೆ. ಆದರೆ ಇದು ಆಷಾಢಮಾಸವಾಗಿರುವ ಕಾರಣ ಜನರು ಹೆಚ್ಚಿನ ಸಂಖ್ಯೆಯಲ್ಲೇನು ಚಿನ್ನ ಖರೀದಿ ಮಾಡುತ್ತಿಲ್ಲ. ಇನ್ನೊಂದು ವಾರ ಆಷಾಢ ಕಳೆದು ಶ್ರಾವಣ ಬರಲಿದ್ದು, ಆ ಬಳಿಕ ಚಿನ್ನದ ದರ ಏನಾಗಬಹುದು ಎಂಬುದನ್ನು ಯೋಚನೆ ಮಾಡಬೇಕಿದೆ.