ವೈರಲ್ ಆಗ್ತಿರುವ ಫೋಟೋ ನಿಜವಾದ ರಾಮಲಲ್ಲಾ ಅಲ್ವಾ..? ಪ್ರಧಾನ ಅರ್ಚಕರು ಹೇಳಿದ್ದೇನು..?
ಸುದ್ದಿಒನ್ : ಜನವರಿ 22ರಂದು ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಯಾಗಲಿದೆ. ಈ ದಿನಕ್ಕಾಗಿ ಇಡೀ ಭಾರತ ಕಾಯುತ್ತಿದೆ. ರಾಮಲಲ್ಲಾ ಮೂರ್ತಿ ಅದಾಗಲೇ ಅಯೋಧ್ಯೆ ತಲುಪಿದೆ. ಯಾವಾಗ ಮೂರ್ತಿಯ ದರ್ಶನವಾಗುತ್ತದೆಯೋ ಎಂದು ಕಾಯುತ್ತಿದ್ದವರಿಗೆ, ನಿನ್ನೆ ಸಂಜೆಯೇ ರಾಮ ಲಲ್ಲಾ ದರ್ಶನ ನಿಡೀದ್ದಾನೆ. ಎಲ್ಲರ ವಾಟ್ಸಾಪ್, ಫೇಸ್ಬುಕ್ ಗಳಲ್ಲಿ ರಾಮಲಲ್ಲಾ ಫೋಟೋ ಹರಿದಾಡುತ್ತಿದೆ.
https://x.com/ANI/status/1748552719240225029?s=20
ಈ ಬಗ್ಗೆ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಾಣ ಪ್ರತಿಷ್ಟೆಗೊಳ್ಳುವ ಮುನ್ನ ಮುಚ್ಚಿರುವ ಬಾಲರಾಮನ ಮೂರ್ತಿಯ ಕಣ್ಣುಗಳನ್ನು ತೆರೆಯುವುದಿಲ್ಲ. ಶ್ರೀರಾಮನ ಕಣ್ಣುಗಳು ಕಾಣುವ, ವೈರಲ್ ಆಗುತ್ತಿರುವ ಮೂರ್ತಿ ನಿಜವಾದುದ್ದಲ್ಲ ಎಂದಿದ್ದಾರೆ.
https://x.com/ANI/status/1748552719240225029?s=20
ಇನ್ನು ಮೂರ್ತಿ ಕಾಣುವಂತ ಫೋಟೋ ಬಹಿರಂಗವಾಗಿದೆ ಆದರೆ ಯಾರಿಂದ ಆಯಿತು..? ವಿಗ್ರಹದ ಚಿತ್ರಗಳು ಹೇಗೆ ವೈರಲ್ ಆದವು ಎಂಬುದರ ಬಗ್ಗೆ ತನಿಖೆಯಾಗಬೇಕು. ಬಾಲ ರಾಮನ ಮೂರ್ತಿಯನ್ನು ಬಟ್ಟೆಯಿಂದ ಮುಚ್ಚಲಾಗಿದೆ. ವಿಗ್ರಹವನ್ನೂ ಇನ್ನೂ ಬಹಿರಂಗ ಪಡಿಸಿಲ್ಲ. ಅಂತಿಮಗೊಳಿಸಿರುವ ಬಾಲರಾಮನ ಮೂರ್ತಿಯನ್ನು ಬಟ್ಟೆಯಿಂದ ಮುಚ್ಚಲಾಗಿದೆ. ಅಯೋಧ್ಯೆಯ ಬಾಲರಾಮನದ್ದು ಎನ್ನಲಾದ ಬಾಲರಾಮನ ಮೂರ್ತಿಯನ್ನು ಬಟ್ಟೆಯಿಂದ ಮುಚ್ಚಲಾಗಿದೆ. ಆದರೆ ಶುಕ್ರವಾರ ಸಂಜೆಯಿಂದ ಈ ಫೋಟೋಗಳು ವೈರಲ್ ಆಗುತ್ತಿದೆ. ಯಾರೂ ಈ ಫೋಟೋಗಳನ್ನು ವೈರಲ್ ಮಾಡಿದ್ದಾರೆ ಎಂಬ ತನಿಖೆಯಾಗಬೇಕೆಂದು ಒತ್ತಾಯಿಸಿದ್ದಾರೆ.
ವಿಗ್ರಹವನ್ನು ದೇವಾಲಯದ ಒಳಗೆ ತರುವುದಕ್ಕೂ ಮುನ್ನವೇನಾದರೂ ಫೋಟೋಗಳನ್ನು ತೆಗೆದಿರಬಹುದು. ಆ ಫೋಟೋಗಳು ಈಗ ವೈರಲ್ ಆಗುತ್ತಿರಬಹುದು. ಕೆಲವರು ಈ ಫೋಟೋ ಹಂಚಿಕೊಳ್ಳುತ್ತಿಲ್ಲ. ಜನವರಿ 22ರಂದು ಪ್ರಾಣ ಪ್ರತಿಷ್ಠಾಪನೆಯಾದ ನಂತರವಷ್ಟೇ ಬಾಲರಾಮನ ಮೂರ್ತಿಯ ಸಂಪೂರ್ಣ ದರ್ಶನವಾಗಲಿದೆ. ಉದ್ಘಾಟನೆ ಮಾಡಲು ಪ್ರಧಾನಿ ಮೋದಿ ಅವರು ಕಠಿಣ ವ್ರತ ಮಾಡುತ್ತಿದ್ದಾರೆ.