For the best experience, open
https://m.suddione.com
on your mobile browser.
Advertisement

ಕುವೆಂಪು ಅವರ ಆಶಯದಂತೆ ಮದುವೆಯಾಗುತ್ತಿರುವ 'ಮುಂಗಾರು ಮಳೆ' ಹುಡುಗಿ

01:10 PM Nov 28, 2023 IST | suddionenews
ಕುವೆಂಪು ಅವರ ಆಶಯದಂತೆ ಮದುವೆಯಾಗುತ್ತಿರುವ  ಮುಂಗಾರು ಮಳೆ  ಹುಡುಗಿ
Advertisement

ಮದುವೆಯೆಂಬುದನ್ನು ಇತ್ತಿಚಿನ ದಿನಗಳಲ್ಲಿ ಆಡಂಬರ, ಅದ್ದೂರಿತನದ ಸಂಕೇತವಾಗಿದೆ. ಆದರೆ ಅಲ್ಲೊಬ್ಬರು, ಇಲ್ಲೊಬ್ಬರಂತೆ ಕುವೆಂಪು ಅವರ ಆಶಯದಂತೆ ಮಂತ್ರ ಮಾಂಗಲ್ಯ ಮಾಡಿಕೊಳ್ಳುತ್ತಾರೆ. ಇದೀಗ 'ಮುಂಗಾರು ಮಳೆ' ಹುಡುಗಿ ಪೂಜಾಗಾಂಧಿ ಕೂಡ ತುಂಬಾ ಸರಳವಾಗಿ ಮಂತ್ರ ಮಾಂಗಲ್ಯ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

Advertisement

ನಾಳೆಯೇ ಮದುವೆಯಾಗುತ್ತಿರುವ ಪೂಜಾ ಗಾಂಧಿ, ಅಭಿಮಾನಿಗಳಿಗೆಲ್ಲಾ ಈಗಾಗಲೇ ಆಮಂತ್ರಣವನ್ನು ನೀಡಿದ್ದಾರೆ. ಯಲಹಂಕದಲ್ಲಿ ಮಂತ್ರ ಮಾಂಗಲ್ಯದ ರೀತಿಯಲ್ಲಿ ಮದುವೆಯಾಗಲಿದ್ದಾರೆ. ಮದುವೆಯ ಆಮಂತ್ರಣವನ್ನು ಕನ್ನಡದಲ್ಲಿಯೇ ಮುದ್ರಿಸಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಸಿದ್ದ ಹುಡುಗನ ಕೈಹಿಡಿಯಲಿದ್ದಾರೆ ಪೂಜಾಗಾಂಧಿ.

Advertisement

ಪೂಜಾ ಗಾಂಧಿ ಮದುವೆಯಾಗುತ್ತಿರುವುದು ಲಾಜೆಸ್ಟಿಕ್ ಕಂಪನಿ ಮಾಲೀಕ ವಿಜಯ್ ಅವರನ್ನು. ಪೂಜಾ ಗಾಂಧಿ ಹಾಗೂ ವಿಜಯ್ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇದೀಗ ಮಂತ್ರ ಮಾಂಗಲ್ಯದ ಮೂಲಕ ಮದುವೆಯಾಗುತ್ತಿದ್ದಾರೆ‌. ಇತ್ತಿಚೆಗಂತೂ ನಟಿ ಪೂಜಾ ಗಾಂಧಿ ಟ್ರೆಂಡಿಂಗ್ ನಲ್ಲಿ ಇದ್ದಾರೆ. ಕನ್ನಡ ವಿಚಾರದಲ್ಲಿ ಹೆಚ್ಚು ಪ್ರಚಾರದಲ್ಲಿದ್ದು, ಪೂಜಾ ಗಾಂಧಿಯ ಕನ್ನಡ ಪ್ರೇಮಕ್ಕೆ ಕನ್ನಡಿಗರು ಮನಸೋತಿದ್ದಾರೆ.

Advertisement

Tags :
Advertisement