For the best experience, open
https://m.suddione.com
on your mobile browser.
Advertisement

ನಿರ್ದೇಶಕನ ಮೇಲೆ ಗುಂಡು ಹಾರಿಸಿದ್ದ 'ಜೋಡಿಹಕ್ಕಿ' ಹೀರೋ : ಎಫ್ಐಆರ್ ನಲ್ಲಿ ಬಯಲಾಯ್ತು ಸತ್ಯ..!

09:44 PM Nov 20, 2024 IST | suddionenews
ನಿರ್ದೇಶಕನ ಮೇಲೆ ಗುಂಡು ಹಾರಿಸಿದ್ದ  ಜೋಡಿಹಕ್ಕಿ  ಹೀರೋ   ಎಫ್ಐಆರ್ ನಲ್ಲಿ ಬಯಲಾಯ್ತು ಸತ್ಯ
Advertisement

ಜೋಡಿಹಕ್ಕಿ ಧಾರಾವಾಹಿ ಖ್ಯಾತಿಯ ತಾಂಡವ್ ರಾಮ್ ತಮ್ಮ‌ ಸಿನಿಮಾ ನಿರ್ದೇಶಕರ ಮೇಲೆಯೇ ಗುಂಡು ಹಾರಿಸಿದ್ದ ಘಟನೆ ಎಲ್ಲರಿಗೂ ಗೊತ್ತಿದೆ. ತಾಂಡವದ ರಾಮ್ ನನ್ನು ಬಂಧಿಸಿ ಈಗಾಗಲೇ ವಿಚಾರಣೆ ಕೂಡ ನಡೆಯುತ್ತಿದೆ. ಇದರ ನಡುವೆ ಎಫ್ಐಆರ್ ದಾಖಲಾಗಿದ್ದು, ಶೂಟ್ ಮಾಡಲು ಏನೆಲ್ಲಾ ಕಾರಣವಿತ್ತು ಎಂಬುದನ್ನು ನಿರ್ದೇಶಕ ಭರತ್ ಅವರು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Advertisement

'ದೇವನಾಂಪ್ರಿಯ ಸಿನಿಮಾ ಆರಂಭವಾಗಿ ಎರಡು ವರ್ಷಗಳಾಗಿವೆ. ಆದರೆ ನಟಿಯ ಆಯ್ಕೆ ಮಾತ್ರ ಇನ್ನು ಆಗಿರಲಿಲ್ಲ. ಅದಕ್ಕೆ ತಾಂಡವ ರಾಮ್ ನನ್ನ ಮೇಲೆ ಕೋಪಗೊಂಡಿದ್ದರು. ಎರಡು ಬಾರಿ ಇದೇ ವಿಚಾರಕ್ಕೆ ಗಲಾಟೆಯನ್ನು ಮಾಡಿಕೊಂಡಿದ್ದರು. ಅಲ್ಲದೆ ಸಿನಿಮಾ ತಂತ್ರಜ್ಞರಿಂದ ನಾನು ಕಮಿಷನ್ ಪಡೆದಿದ್ದೇನೆ ಎಂಬ ಆರೋಪವನ್ನು ಮಾಡಿದ್ದರು. ಬಳಿಕ ತಾನು ಖರ್ಚು ಮಾಡಿದ ಆರು ಲಕ್ಷ ಹಣವನ್ನು ವಾಪಾಸ್ ನೀಡುವಂತೆ ತಾಂಡವ್ ರಾಮ್ ಪಟ್ಟು ಹಿಡಿದರು. ಅದರ ಸಲುವಾಗಿಯೇ ಗುಂಡು ಹಾರಿಸುವುದಕ್ಕೂ ಮುನ್ನ ಪ್ರೊಡ್ಯೂಸರ್ ಕಚೇರಿಯಲ್ಲಿ ಸಭೆ ಸೇರಿದ್ದೆವು.

ಚಂದ್ರಾಲೇಔಟ್ ನಲ್ಲಿ ನಿರ್ಮಾಪಕರ ಕಚೇರಿಯಲ್ಲಿ ಸಭೆ ಸೇರಿದೆವು‌. ಅಲ್ಲಿಯೂ ತಮ್ಮ ಆರು ಲಕ್ಷ ಹಣವನ್ನು ವಾಪಸ್ ನೀಡುವಂತೆ ಕೇಳಿದರು. ಈ ವಿಚಾರಕ್ಕೆ ಗಲಾಟೆಯನ್ನು ಮಾಡಿದರು. ಮಾತಿಗೆ ಮಾತು ಬೆಳೆದು ಅವರು ತಮ್ಮ ಬಳಿಯಿದ್ದ ಪಿಸ್ತೂಲ್ ನಲ್ಲಿ ಗುಂಡು ಹಾರಿಸಿದರು. ನಾನು ತಕ್ಷಣ ಬಾಗಿದೆ. ಗುಂಡು ಸೀಲಿಂಗ್ ಫ್ಯಾನ್ ಗೆ ತಗುಲಿತು. ಇಲ್ಲವಾಗಿದ್ದರೆ ಆ ಗುಂಡು ನನ್ನ ತಲೆಗೆ ಬಿದ್ದು, ಇಷ್ಟೊತ್ತಿಗೆ ಪ್ರಾಣವೇ ಹೋಗಬೇಕಿತ್ತ' ಎಂದು ಎಫ್ಐಆರ್ ನಲ್ಲಿ ದಾಖಲಿಸಿದ್ದಾರೆ. ಸದ್ಯ ಚಂದ್ರಾಲೇಔಟ್ ಪೊಲೀಸರು ತಾಂಡವ್ ರಾಮ್ ನ ವಿಚಾರಣೆ ನಡೆಸುತ್ತಿದ್ದಾರೆ.

Advertisement

Tags :
Advertisement