For the best experience, open
https://m.suddione.com
on your mobile browser.
Advertisement

ಖಾಯಂ ಹುದ್ದೆಗೆ ಆಗ್ರಹಿಸಿ ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಶುರು ಮಾಡಿದ ಅತಿಥಿ ಉಪನ್ಯಾಸಕರು..!

08:38 PM Jan 01, 2024 IST | suddionenews
ಖಾಯಂ ಹುದ್ದೆಗೆ ಆಗ್ರಹಿಸಿ ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಶುರು ಮಾಡಿದ ಅತಿಥಿ ಉಪನ್ಯಾಸಕರು
Advertisement

ತುಮಕೂರು: ತಮ್ಮ ಸೇವೆ ಖಾಯಂಗಾಗಿ ಒತ್ತಾಯಿಸಿ, ಇಂದು ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಮೂಲಕ ಹೊರಟಿದ್ದಾರೆ. ಸರ್ಕಾರದಿಂದ ಪರ್ಯಾಯ ವ್ಯವಸ್ಥೆ ಬಗ್ಗೆ ಸೂಚನೆ ಇದ್ದರು, ಅದಕ್ಕೆ ತಲೆಕೆಡಿಸಿಕೊಳ್ಳದ ಅತಿಥಿ ಉಪನ್ಯಾಸಕರು, ನಿಗದಿಯಂತೆ ಪಾದಯಾತ್ರೆ ಆರಂಭಿಸಿದ್ದಾರೆ.

Advertisement

ಸುಮಾರು 80 ಕಿ.ಮೀಟರ್ ತನಕ ಪಾದಯಾತ್ರೆ ಆರಂಭವಾಗಿದೆ. ಸಿದ್ಧಗಂಗಾ ಮಠದಿಂದ ಹಿಡಿದು, ಫ್ರೀಡಂ ಪಾರ್ಕ್ ತನಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಪಾದಯಾತ್ರೆ ಜನವರಿ 3ರಂದು ಫ್ರೀಡಂ ಪಾರ್ಕ್ ತಲುಪಲಿದೆ. ಬಳಿಕ ನಾನಾ ಕಡೆಗಳಿಂದ ಅತಿಥಿ ಉಪನ್ಯಾಸಕರು ಬಂದು ಸೇರುತ್ತಾರೆ. ಈ ಮೂಲಕ ಬೃಹತ್ ಪ್ರತಿಭಟನೆಗೆ ಫ್ರೀಡಂ ಪಾರ್ಕ್ ಸಾಕ್ಷಿಯಾಗಲಿದೆ. ಇದು ಸರ್ಕಾರಕ್ಕೆ ನಿಜಕ್ಕೂ ತಲೆ ನೋವಾಗಿ ಪರಿಣಮಿಸಬಹುದು.

ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿದ್ದಾಗ ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗೆ ಸದನದಲ್ಲೇ ಅಂದಿನ ಬಿಜೆಪಿ ಸರ್ಕಾರವನ್ನು ಆಗ್ರಹಿಸಿದ್ದರು. ಈ ಸಂಬಂಧ ವಿಡಿಯೋ ಎಲ್ಲ ಕಡೆ ವೈರಲ್‌ ಆಗಿದೆ. ಈಗ ಅಧಿಕಾರಕ್ಕೆ ಬಂದಾಗ ಅದೇ ಮಾತಿನ ಮೇಲೆ ತಮ್ಮ ಸರ್ಕಾರ ಏಕೆ ನಿಲ್ಲುವುದಿಲ್ಲ? ಜೊತೆಗೆ ಪ್ರಣಾಳಿಕೆಯಲ್ಲೂ ಈ ಬಗ್ಗೆ ಭರವಸೆ ನೀಡಿದ್ದೀರಿ. ಹಾಗಾಗಿ ನುಡಿದಂತೆ ನಡೆಯುವ ಸರ್ಕಾರ ತಮ್ಮದು ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿ ಎಂಬುದು ಅತಿಥಿ ಉಪನ್ಯಾಸಕರ ಆಗ್ರಹವಾಗಿದೆ.

Advertisement

ಸರ್ಕಾರ ಅತಿಥಿ ಉಪನ್ಯಾಸಕರ ಬೇಡಿಕೆಯಲ್ಲಿ ವೇತನದ ವಿಚಾರದ ಕಡೆಗೆ ಗಮನ ನೀಡಿದೆ. ಅತಿಥಿ ಉಪನ್ಯಾಸಕರ ವೇತನ 5 ಸಾವಿರ ರೂಪಾಯಿ ಹೆಚ್ಚಳಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದರು ಸಚಿವ ಡಾ. ಎಂ ಸಿ ಸುಧಾಕರ್ ತಿಳಿಸಿದ್ದರು. ಆದರೆ ವೇತನ ಹೆಚ್ಚಳ ಒಂದಕ್ಕೆ ಸಮಾಧಾನಗೊಳ್ಳದ ಅತಿಥಿ ಉಪನ್ಯಾಸಕರು, ಖಾಯಂ ಸೇವೆಗೆ ಆಗ್ರಹಿಸಿದ್ದಾರೆ.

Tags :
Advertisement