Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕಾಟನ್ ಕ್ಯಾಂಡಿ ಮಾರಾಟಕ್ಕೆ ಷರತ್ತು ವಿಧಿಸಿದ ಸರ್ಕಾರ : ಏನದು..?

05:04 PM Mar 11, 2024 IST | suddionenews
Advertisement

ಬೆಂಗಳೂರು: ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದ ಹಿನ್ನೆಲೆ ಕೆಲವು ರಾಜ್ಯಗಳು ಕಾಟನ್ ಕ್ಯಾಂಡಿಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಈ ವಿಚಾರ ಬೆಳಕಿಗೆ ಬಂದ ಮೇಲೆ ರಾಜ್ಯದಲ್ಲೂ ಕಾಟನ್ ಕ್ಯಾಂಡಿ ಬಗ್ಗೆ ಚರ್ಚೆಯಾಗಿತ್ತು. ಇದೀಗ ಮಾರಾಟಕ್ಕೆ ಒಪ್ಪಿಗೆ ನೀಡಿದ್ದಾದರೂ ಒಂದು ಕಂಡಿಷನ್ ಹಾಕಲಾಗಿದೆ.

Advertisement

ಕಾಟನ್ ಕ್ಯಾಂಡಿ ಅಂದ್ರೆ ಮಕ್ಕಳಿಗೆ ಇನ್ನಿಲ್ಲದ ಇಷ್ಟ. ಅದನ್ನು ತಿಂದಾಗ ನಾಲಿಗೆ ಪಿಂಕ್ ಆದಾಗ ನೋಡಿಕೊಳ್ಳುವುದಕ್ಕೇನೆ ಮಕ್ಕಳಿಗೆ ಖುಷಿ. ಆದರೆ ಇಂಥ ಕ್ಯಾಂಡಿಯ ಕಲರ್ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದರಿಂದಾನೇ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಈ ಬಗ್ಗೆ ಸರ್ಕಾರ ಸೀರಿಯಸ್ ಆಗಿ ಗಮನ ಹರಿಸಿದ್ದು, ಇಂದು ಈ ಸಂಬಂಧ ಮಹತ್ವದ ಸುದ್ದಿಗೋಷ್ಟಿ ನಡೆಸಿದ್ದಾರೆ‌.

 

Advertisement

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಕಾಟನ್ ಕ್ಯಾಂಡಿಯ 25 ಮಾದರಿಗಳನ್ನು ಸಂಗ್ರಹ ಮಾಡಿ, ಅವುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವೇಳೆ ಅವುಗಳ 15 ಮಾದರಿಯಲ್ಲಿ ಕೃತಕ ಬಣ್ಣಗಳು ಕಂಡು ಬಂದಿದೆ. ಅದರಲ್ಲಿ ರೋಡಮೈನ್ ಬಿ ಎಂಬ ಕ್ಯಾನ್ಸರ್ ಗೆ ಸಂಬಂಧ ಪಟ್ಟ ಅಂಶವೊಂದು ಕಂಡು ಬಂದಿದೆ. ಹೀಗಾಗಿ ಕಾಟನ್ ಕ್ಯಾಂಡಿಯನ್ನು ಇನ್ನು ಮುಂದೆ ಮಾರಾಟ ಮಾಡಬಹುದು. ಆದರೆ ಆ ಕ್ಯಾಂಡಿಯಲ್ಲಿ ಕೃತಕವಾದ ಬಣ್ಣವನ್ನು ಬಳಕೆ ಮಾಡುವಂತಿಲ್ಲ ಎಂಬ ಷರತ್ತುನ್ನು ವಿಧಿಸಿದೆ.

Advertisement
Tags :
bengaluruchitradurgaconditionscotton candyGovernmentimposedsuddionesuddione newsಕಾಟನ್ ಕ್ಯಾಂಡಿಚಿತ್ರದುರ್ಗಬೆಂಗಳೂರುಮಾರಾಟಷರತ್ತುಸರ್ಕಾರಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article