ಚಾಮುಂಡೇಶ್ವರಿ ತಾಯಿಗೂ 2 ಸಾವಿರ ನೀಡಲು ಸರ್ಕಾರ ನಿರ್ಧಾರ
ಮೈಸೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನುಡೊದಂತೆ ನಡೆದಿದೆ. ಗೃಹಲಕ್ಷ್ಮೀ ಯೋಜನೆಯಡಿ, ಪ್ರತಿ ತಿಂಗಳು ಮನೆಯ ಯಜಮಾನಿಗೆ ಎರಡು ಸಾವಿರ ರೂಪಾಯಿ ಹಣ ನೀಡುತ್ತಿದೆ. ಇದೀಗ ತಾಯಿ ಚಾಮುಂಡಿಗೂ ಗೃಹಲಕ್ಷ್ಮೀ ಯೋಜನೆಯಡಿ ಹಣ ನೀಡಲು ಸರ್ಕಾರ ಮುಂದಾಗಿದೆ.
ದಸರಾ ಪೂಜಾ ಸಮಯದಲ್ಲಿಯೇ ತಾಯಿ, ನಾಡ ಅಧಿದೇವತೆ. ಹೀಗಾಗಿ ಚಾಮುಂಡೇಶ್ವರಿಗೂ ಪ್ರತಿ ತಿಂಗಳು ಗೃಹಲಕ್ಷ್ಮೀ ಯೋಜನೆಯಡಿ ಎರಡು ಸಾವಿರ ನೀಡಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಳಿ ಮನವಿ ಮಾಡಲಾಗಿತ್ತು. ಅದರಂತೆ ಸರ್ಕಾರ ಆ ಮನವಿಯನ್ನು ಪುರಸ್ಕಾರ ಮಾಡಿದ್ದು, ಮುಂದಿನ ತಿಂಗಳಿನಿಂದ ತಾಯಿ ಚಾಮುಂಡೇಶ್ವರಿಗೂ ಗೃಹಲಕ್ಷ್ಮೀ ಯೋಜನೆ ಅಪ್ಲೈ ಆಗಲಿದೆ.
ಪ್ರತಿ ತಿಂಗಳು 2 ಸಾವಿರದಂತೆ 59 ತಿಂಗಳ ಹಣವನ್ನು ಒಮ್ಮೆಗೆ ನೀಡಲು ನಿರ್ಧಾರ ಮಾಡಲಾಗಿದೆ. ಒಟ್ಟು 1,18,000 ಸಾವಿರ ರೂಪಾಯಿ ಹಣವನ್ನು ತಾಯಿ ಚಾಮುಂಡಿ ಹೆಸರಿಗೆ ನೀಡಲಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೃಹಲಕ್ಷ್ಮೀ ಯೋಜನೆಯ ಹಣವನ್ನು ತಾಯಿ ಚಾಮುಂಡಿಗೆ ನೀಡಲಿದ್ದಾರೆ. ಪ್ರತಿ ತಿಂಗಳು 2 ಸಾವಿರ ನೀಡುವಂತೆ, ತಮ್ಮ ವೈಯಕ್ತಿಕ ಹಣದಲ್ಲಿ ತಾಯಿಗೆ ಅರ್ಪಿಸಲಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಪ್ರತಿ ಮನೆಯ ಗೃಹಿಣಿಯರು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೆ ಸಾಕಷ್ಟು ಮಹಿಳೆಯರಿಗೆ ಈ ಹಣ ಇನ್ನು ತಲುಪಿಲ್ಲ. ಕೆಲವರಿಗೆ ಈ ತಿಂಗಳಿನಿಂದ ಮೆಸೇಜ್ ಬಂದಿದೆ. ಹೀಗಾಗಿ ಮುಂದಿನ ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆಯ ಹಣ ಸಂದಾಯವಾಗಬಹುದು.