Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದುನಿಯಾ ವಿಜಯ್ ಶ್ಯೂರಿಟಿ ಕೊಟ್ಟು ಬಿಡಿಸಿದ್ದವನಿಂದ ಜೋಡಿ ಕೊಲೆ..!

02:53 PM Nov 11, 2024 IST | suddionenews
Advertisement

ಬೆಂಗಳೂರು: ಭೀಮಾ ಸಿನಿಮಾ ಸಮಯದಲ್ಲಿ ದುನಿಯಾ ವಿಜಯ್ ಒಂದಷ್ಟು ಜೈಲು ಹಕ್ಕಿಗಳಿಗೆ ಮುಕ್ತಿ ಕೊಡಿಸಿದ್ದರು‌. ತಮ್ಮದೇ ಶ್ಯೂರಿಟಿ ನೀಡಿ ಬಿಡುಗಡೆ ಮಾಡಿಸಿದ್ದರು. ಇದೀಗ ಬಿಡುಗಡೆಯಾಗಿದ್ದವ ಮತ್ತೆ ಅದೇ ತಪ್ಪು ಮಾಡಿದ್ದಾನೆ. ಸಣ್ಣ ಕಾರಣಕ್ಕೆ ಜೋಡಿ ಕೊಲೆ ಮಾಡಿ ಜೈಲು ಪಾಲಾಗಿದ್ದಾನೆ. ಸುರೇಶ್ ಎಂಬಾತ ಮತ್ತೆ ಜೈಲು ಸೇರಿದ್ದಾನೆ.

Advertisement

ದುನಿಯಾ ವಿಜಯ್ ದಸೆಯಿಂದ ಜೈಲಿನಿಂದ ಹಿರ ಬಂದು, ಮಾರ್ಕೆಟ್ ನಲ್ಲಿ ಕೊತ್ತಂಬರಿ ಸೊಪ್ಪು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಬಳಿಕ ಬಸ್ ಸರ್ವೀಸ್ ಶೆಡ್ ನಲ್ಲೂ ಕೆಲಸ ಮಾಡಿಕೊಂಡು ಇದ್ದ. ಈ ವೇಳೆ ಗುಜರಿ ಮಾರುವ ವಿಚಾರಕ್ಕೆ ಗಲಾಟೆಯಾಗಿದೆ. ಈ ಗಲಾಟೆಯಲ್ಲಿ ನಾಗೇಶ್ ಮತ್ತು ಮಂಜುನಾಥ್ ಎಂಬುವವರ ಕೊಲೆ ಮಾಡಿದ್ದಾನೆ. ನವೆಂಬರ್ 8 ರಂದು ಈ ಜೋಡಿ ಕೊಲೆಯಾಗಿತ್ತು. ಕೊಲೆ ಮಾಡಿ, ಸುರೇಶ ಎಸ್ಕೇಪ್ ಆಗಿದ್ದ. ಕೊಲೆಯಾದ ನಾಗೇಶ್ ಹಾಗೂ ಮಂಜುನಾಥ, ಸದಾ ಸುರೇಶನನ್ನು ಹೀಯಾಳಿಸುತ್ತಿದ್ದರಂತೆ. ನೀನು ಕುಳ್ಳ, ನಿನ್ನ ಮೇಲೆ ಹಪವು ಪೊಲೀಸ್ ಕೇಸುಗಳಿವೆ ಎಂದು. ಕುಳ್ಳ ಎಂದು ರೇಗಿಸುತ್ತಿದ್ದ ವಿಚಾರಕ್ಕೆ ಕೋಪಗೊಂಡ ಸುರೇಶ್ ಇಬ್ಬರಿಗೂ ರಾಡ್ ನಿಂದ ಹೊಡೆದಿದ್ದಾನೆ. ಇಬ್ಬರು ಸತ್ತ ಮೇಲೆ ಎಸ್ಕೇಪ್ ಆಗಿದ್ದ, ಸುರೇಶನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ಈತ ಈ ಹಿಂದೆ ಕೂಡ ಜೋಡಿ ಕೊಲೆ ಹಾಗೂ ಅತ್ಯಾಚಾರ ಕೇಸಲ್ಲಿ ಜೈಲು ಸೇರಿದ್ದ. ಬಳಿಕ ದುನಿಯಾ ವಿಜಯ್ ಅವರು ಶ್ಯೂರಿಟಿ ಕೊಟ್ಟು ಬಿಡಿಸಿದ್ದರು. ಮೂರು ಲಕ್ಷ ಹಣ ಇಟ್ಟು ಬಿಡಿಸಿದ್ದರು. ಹತ್ತು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಈ ವ್ಯಕ್ತಿಗೆ ಶ್ಯೂರಿಟಿ ನೀಡಲು ಯಾರೂ ಇರಲಿಲ್ಲ. ಇದೀಗ ಮತ್ತೆ ಜೈಲು ಪಾಲಾಗಿದ್ದಾನೆ.

Advertisement

Advertisement
Tags :
bengaluruchitradurgaduniya vijaykannadaKannadaNewssuddionesuddionenewsಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಜೋಡಿ ಕೊಲೆದುನಿಯಾ ವಿಜಯ್ಬೆಂಗಳೂರುಶ್ಯೂರಿಟಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article