For the best experience, open
https://m.suddione.com
on your mobile browser.
Advertisement

ದೇಶ-ರಾಜ್ಯ ಮುಳುಗಿ ಹೋಗುವಂತ ಕೆಲಸ ಮಾಡಿಲ್ಲ : ಕರೆಂಟ್ ವಿಚಾರಕ್ಕೆ ಹೆಚ್ಡಿಕೆ ಪ್ರತಿಕ್ರಿಯೆ

07:36 PM Nov 14, 2023 IST | suddionenews
ದೇಶ ರಾಜ್ಯ ಮುಳುಗಿ ಹೋಗುವಂತ ಕೆಲಸ ಮಾಡಿಲ್ಲ   ಕರೆಂಟ್ ವಿಚಾರಕ್ಕೆ ಹೆಚ್ಡಿಕೆ ಪ್ರತಿಕ್ರಿಯೆ
Advertisement

Advertisement
Advertisement

ಬೆಂಗಳೂರು: ದೀಪಾವಳಿ ಹಬ್ಬದಂದು ದೀಪಲಂಕಾರಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ಜೆಪಿ ನಗರ ನಿವಾಸಕ್ಕೆ, ಲೈಟ್ ಕಂಬದ ಮೂಲಕ ಅಕ್ರಮವಾಗಿ ಪವರ್ ಕನೆಕ್ಷನ್ ತೆಗೆದುಕೊಂಡಿದ್ದಾರೆ. ಈ ಸಂಬಂಧ ಕಾಂಗ್ರೆಸ್ ವಿಡಿಯೋ ಸಮೇತ ಪೋಸ್ಟ್ ಮಾಡಿ ಟೀಕೆ ಮಾಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ನಾನೇನು ದೇಶ - ರಾಜ್ಯ ಮುಳುಗಿ ಹೋಗುವ ಕೆಲಸ‌ ಮಾಡಿಲ್ಲ ಎಂದಿದ್ದಾರೆ.

Advertisement

ಸಾವಿರ ರೂಪಾಯಿ ಕರೆಂಟ್ ಕದಿಯುವ ಪ್ರಮೇಯ ನನಗೆ ಬಂದಿಲ್ಲ. ಕಾಂಗ್ರೆಸ್ ಬೇರೆ ಕೆಲಸ ಇಲ್ಲ. ಅದಕ್ಕೆ ಈ ವಿಚಾರ ಇಟ್ಟುಕೊಂಡು ಚರ್ಚೆ ಮಾಡುತ್ತಾ ಇದ್ದಾರೆ. ಅಚಾತುರ್ಯದಿಂದ ಈ ಕೆಲ ನಡೆದು ಹೋಗಿದೆ. ನಾನೇನು ದೇಶವನ್ನು ಲೂಟಿ ಹೊಡೆದಿಲ್ಲ. ವಿದ್ಯುತ್ ಕಳ್ಳತನ ಮಾಡುವಂತ ದರಿದ್ರ ನನಗೆ ಬಂದಿಲ್ಲ. ನನ್ನ ಎಲ್ಲಾ ವಿಚಾರಗಳು ತೆರೆದ ಪುಸ್ತಕವಿದ್ದಂತೆ. ಕಾಂಗ್ರೆಸ್ ನವರಂತೆ ಲೂಟಿ ಹೊಡೆಯುವ ಕೆಲಸ ನಾನು ಮಾಡಿಲ್ಲ ಎಂದಿದ್ದಾರೆ.

Advertisement

ಬಿಡದಿ ತೋಟದಿಂದ ಬಂದ ಕೂಡಲೇ ವಿಚಾರ ಗೊತ್ತಾಗಿದೆ. ಕೂಡಲೇ ಆ ಕನೆಕ್ಷನ್ ತೆಗೆಯುವಂತೆ ಸೂಚಿಸಿದ್ದೇನೆ. ಲೈನ್ ಮ್ಯಾನ್ ಅಕ್ರಮವಾಗಿ ಕನೆಕ್ಷನ್ ಕೊಡಿ ಎಂದು ನಾನು ಹೇಳಿದ್ದೇನಾ. ಏನೇ ಆದರೂ ಹೊಣೆ ನಾನೇ. ಬೆಸ್ಕಾಂನವರು ದಂಡ ಹಾಕಿದರೆ ನಾನು ಕಟ್ಟುತ್ತೇನೆ ಎಂದು ಅಕ್ರಮ ಕರೆಂಟ್ ಕನೆಕ್ಷನ್ ಗೆ ಕುಮಾರಸ್ವಾಮಿ ಅವರೇ ಸ್ಪಷ್ಟ ಉತ್ತರ ನೀಡಿದ್ದಾರೆ.

Advertisement
Tags :
Advertisement