For the best experience, open
https://m.suddione.com
on your mobile browser.
Advertisement

ಆನೇಕಲ್ ಪಟಾಕಿ ದುರಂತದಲ್ಲಿ ಅಮಾನತಾಗಿದ್ದ ಸಿಸಿಬಿ ಇನ್ಸ್‌ಪೆಕ್ಟರ್ ಆತ್ಮಹತ್ಯೆ..!

12:41 PM Aug 05, 2024 IST | suddionenews
ಆನೇಕಲ್ ಪಟಾಕಿ ದುರಂತದಲ್ಲಿ ಅಮಾನತಾಗಿದ್ದ ಸಿಸಿಬಿ ಇನ್ಸ್‌ಪೆಕ್ಟರ್ ಆತ್ಮಹತ್ಯೆ
Advertisement

Advertisement
Advertisement

ರಾಮನಗರ: ಎರಡು ತಿಂಗಳ ಹಿಂದೆ ಸಿಸಿಬಿಗೆ ಟ್ರಾನ್ಸ್‌ಫರ್ ಆಗಿದ್ದ ಇನ್ಸ್‌ಪೆಕ್ಟರ್ ತಿಮ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಾಮನಗರದ ಕಗ್ಗಲಿಪುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 2023ರಲ್ಲಿ ಆನೇಕಲ್ ದುರಂತ ನಡೆದಿದ್ದಂತ ಸಂದರ್ಭದಲ್ಲಿ ಮಾನತುಗೊಂಡಿದ್ದರು. ಬಳಿಕ ಈ ಕೇಸಲ್ಲಿ ಕ್ಲೀನ್ ಚಿಟ್ ಕೂಡ ಸಿಕ್ಕಿತ್ತು. ಆಮೇಲೆ ಸಿಸಿಬಿಗೆ ರಿಪೋರ್ಟ್ ಮಾಡಿಕೊಂಡಿದ್ದರು. ಈಗ ನೋಡಿದರೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. 1998ರಲ್ಲಿ ರೂರಲ್ ಬ್ಯಾಚ್ ಇನ್ಸ್‌ಪೆಕ್ಟರ್ ಆಗಿದ್ದರು. ಚನ್ನಪಟ್ಟಣದ ಹಳ್ಳಿಯೊಂದರಿಂದ ಬಂದವರು. ಗ್ರಾಮೀಣ ಕೃಪಾಂಕದಿಂದ ಆಯ್ಕೆಯಾಗಿದ್ದವರು. ಕಳೆದ ವುಧಾನಸಭಾ ಚುನಾವಣೆಯ ವೇಳೆಗೆ ಅತ್ತಿಬೆಲೆಗೆ ವರ್ಗಾವಣೆಯಾಗಿದ್ದರು. 2023ರ ಸೆಪ್ಟೆಂಬರ್ ನಲ್ಲಿಪಟಾಕಿ ದುರಂತ ನಡೆದಿತ್ತು.

Advertisement
Advertisement

ಈ ಹಿಂದೆ ಇದ್ದಂತ ಇನ್ಸ್‌ಪೆಕ್ಟರ್ ಪಟಾಕಿ ಅಂಗಡಿಗೆ ಅನುಮತಿ ನೀಡಿದ್ದರು. ಸಹಿ ಹಾಕಿ ಅಪ್ರೂವಲ್ ನೀಡಿದ್ದರು. ಆದರೆ ಆ ಘಟನೆಯ ಬಳಿಕ ತಿಮ್ಮೇಗೌಡ ಅವರೇ ಅಪ್ರೂವಲ್ ನೀಡಿದ್ದರು ಎಂದು ಅಮಾನತು ಮಾಡಲಾಗಿತ್ತು. ಹೀಗಾಗಿ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದರು. ಆದರೆ ಅಮಾನತಿನ ಸಂದರ್ಭದಲ್ಲಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕರೂ ಖಿನ್ನತೆಯಿಂದ ಹೊರ ಬಂದಿರಲಿಲ್ಲ. ಇಂದು ಕಗ್ಗಲಿಪುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಮಾನತಿನ ವೇಳೆಯಲ್ಲಿ ಮಾನಸಿಕವಾಗಿ ಕಿರುಕುಳ ನೀಡಿದ್ದರು. ತಿಮ್ಮೇಗೌಡ ಸಾವಿಗೆ ಇಲಾಖೆಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಯಾದಗಿರಿಯಲ್ಲಿ ಪಿಎಸ್ಐ ಪರಶುರಾಮ್ ಇತ್ತಿಚೆಗಷ್ಟೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪರಶುರಾಮ್ ಸಾವಿನ ಹಿಂದೆ ವರ್ಗಾವಣೆಗಾಗಿ ಶಾಸಕರು ಲಂವ ಕೇಳಿದ್ದರು ಎಂದು ಆರೋಪವಿದೆ. ಈ ಬೆನ್ನಲ್ಲೇ ಎಸ್ಐ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement
Tags :
Advertisement