Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸ್ಪಾಟ್ ಖಾತೆ ಮಾಡುವ ಅಭಿಯಾನ ಶುರು ಆಗಿದೆ : ಸಚಿವ ಕೃಷ್ಣ ಭೈರೇಗೌಡ

03:48 PM Jan 17, 2024 IST | suddionenews
Advertisement

 

Advertisement

ಮೈಸೂರು: ಕಂದಾಯ ಅದಾಲತ್ ಬಗ್ಗೆ ರೈತರಿಗೆ ಸಚಿವ ಕೃಷ್ಣ ಭೈರೇಗೌಡ ಒಂದಷ್ಟು ಮಾಹಿತಿ ತಿಳಿಸಿಕೊಟ್ಟಿದ್ದಾರೆ. ಕಂದಾಯ ಅದಾಲತ್ ಅನ್ನು ಈ ಹಿಂದೆ ಕಾಂಗ್ರೆಸ್ ಇದ್ದಾಗಲೂ ಬಹಳ ಪರಿಣಾಮಕಾರಿಯಾಗಿ ನಡೆಸಿದ್ದೆವು. ಹಾಗಾಗಿ ಅದಾಲತ್ ಮೂಲಕ ಬಗೆಹರಿಸಬಹುದಾದಂತ ಸಮಸ್ಯೆಗಳು ಬಹುತೇಕ ಬಗೆಹರಿದಿದ್ದಾವೆ. ಈಗ ಉಳಿದಿರುವುದು ಜಟಿಲವಾದಂತ ಸಮಸ್ಯೆಗಳು. ಅದಾಲತ್ ನಲ್ಲಿ ಸಣ್ಣ ಸ್ವರೂಪದ ಸಮಸ್ಯೆಗಳನ್ನು ಪರಿಹಾರ ಮಾಡಬಹುದು.

ಸುಮಾರು ಪವತಿ ಖಾತೆಗಳು, ಖಾತೆಯಾಗದೆ ಹಾಗೆ ಉಳಿದಿದ್ದಾವೆ. ಕೆಲವು ಜಿಲ್ಲೆಗಳಲ್ಲಿ ಈಗ ಪವತಿ ಖಾತೆಯ ಆಂದೋಲನವನ್ನು ಆರಂಭ ಮಾಡಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೂ ವಿಸ್ತರಿಸಬೇಕೆಂಬುದು ಇದೆ. ಅದನ್ನ ಮಾಡಿದರೆ ಲಕ್ಷಾಂತರ ಖಾತೆಗಳು ಒವತಿ ಖಾತೆಯಾಗದೆ, ಹಳಬರ ಹೆಸರುಗಳಲ್ಲೆ ಉಳಿದು ಹೋಗಿದೆ. ಜಮೀನುದಾರರು ಈ ಖಾತೆಯನ್ನು ಇಂಥವರ ಹೆಸರಿಗೆ ಮಾಡಿ ಎಂದಾಗ, ಅದಾಲತ್ ಮೂಲಕ ಆನ್ ಸ್ಪಾಟ್ ಖಾತೆ ಮಾಡುವ ಅಭಿಯಾನ ಶುರು ಮಾಡಿದ್ದೀವಿ ಎಂದಿದ್ದಾರೆ.

Advertisement

ಕಳೆದ ವಾರದಿಂದಾನೇ ರೈತರ ಖಾತೆಗಳಿಗೆ ಹಣ ಹಾಕುವ ಪ್ರಕ್ರಿಯೆ ಆರಂಭವಾಗಿದೆ. ಪ್ರತಿನಿತ್ಯ ರೈತರ ಖಾತೆಗೆ ಹಣ ಹೋಗುತ್ತಾ ಇದೆ. 25-30 ಲಕ್ಷ ರೈತರ ಖಾತೆಗೆ ಹೋಗುತ್ತಿದೆ. ಇನ್ನೊಂದು ವಾರ ಸುಮಾರು 500 ಕೋಟಿಯಷ್ಟು ಹಣ ರೈತರುಗಳ ಹೋಗಲಿದೆ. ಇದು ಮೊದಲ ಕಂತಿನ ಹಣ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದರೆ ಬಾಕು ಕಂತನ್ನು ಸಹ ರೈತರ ಖಾತೆಗೆ ಹಾಕುತ್ತೇವೆ‌.

Advertisement
Tags :
campaignMinister Krishna bhairegowdamysoremysuruspot accountssuddioneಅಭಿಯಾನಮೈಸೂರುಸಚಿವ ಕೃಷ್ಣಭೈರೇಗೌಡಸುದ್ದಿಒನ್ಸ್ಪಾಟ್ ಖಾತೆ
Advertisement
Next Article