For the best experience, open
https://m.suddione.com
on your mobile browser.
Advertisement

ಆಂಧ್ರಪ್ರದೇಶದಲ್ಲಿ ಭೀಕರ ರೈಲು ಅಪಘಾತ : ಆರು ಮಂದಿ ಸಾವು, 20 ಕ್ಕೂ ಹೆಚ್ಚು ಮಂದಿಗೆ ಗಾಯ

09:53 PM Oct 29, 2023 IST | suddionenews
ಆಂಧ್ರಪ್ರದೇಶದಲ್ಲಿ ಭೀಕರ ರೈಲು ಅಪಘಾತ   ಆರು ಮಂದಿ ಸಾವು  20 ಕ್ಕೂ ಹೆಚ್ಚು ಮಂದಿಗೆ ಗಾಯ
Advertisement

ಸುದ್ದಿಒನ್ : ಆಂದ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ವಿಶಾಖದಿಂದ ಪಲಾಸಕ್ಕೆ ತೆರಳುತ್ತಿದ್ದ ವಿಶೇಷ ಪ್ಯಾಸೆಂಜರ್ ರೈಲು ಕೋತವಲಸ ಮಂಡಲದ ಅಲಮಂಡ - ಕಂಟಕಪಲ್ಲಿಯಲ್ಲಿ ಸಿಗ್ನಲ್‌ಗಾಗಿ ಹಳಿಯಲ್ಲಿ ನಿಂತಿತ್ತು. ಅದೇ ಸಮಯದಲ್ಲಿ ಹಿಂದೆ ಬಂದ ವಿಶಾಖ - ರಾಯಗಡ ಎಕ್ಸ್ ಪ್ರೆಸ್ ರೈಲು ಪಲಾಸ ಪ್ಯಾಸೆಂಜರ್ ರೈಲಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ 4 ಬೋಗಿಗಳು ಜಖಂಗೊಂಡಿವೆ. ಆರು ಮಂದಿ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಪಘಾತದ ಸ್ಥಳದಲ್ಲಿ ಭೀಕರ ಪರಿಸ್ಥಿತಿ ಇದೆ. ಕತ್ತಲೆಯಲ್ಲಿ ಏನಾಯಿತು ಎಂದು ಅರ್ಥವಾಗದ ಪರಿಸ್ಥಿತಿಯಿದೆ. ಗಂಭೀರವಾಗಿ ಗಾಯಗೊಂಡವರು ಸಹಾಯಕ್ಕಾಗಿ ಅಳುತ್ತಿದ್ದಾರೆ. ಎರಡು ರೈಲುಗಳು ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿ ವಿದ್ಯುತ್ ತಂತಿ ತುಂಡಾಗಿ ಇಡೀ ಪ್ರದೇಶ ಕತ್ತಲೆಯಲ್ಲಿ ಆವರಿಸಿದೆ. ಇದರಿಂದ ಪರಿಹಾರ ಕಾರ್ಯಕ್ಕೆ ಅಡ್ಡಿಯಾಗಿದೆ.

Advertisement

ರೈಲು ಅಪಘಾತದ ಕುರಿತು ರೈಲ್ವೆ ಮಂಡಳಿಯ ಡಿಆರ್‌ಎಂ ಸೌರಭ್ ಪ್ರಸಾದ್ ಅವರು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಜಯನಗರಂ ಜೊತೆಗೆ ವಿಶಾಖಪಟ್ಟಣಂ ಮತ್ತು ಅನಕಾಪಲ್ಲಿಯಿಂದ ತುರ್ತು ಆಂಬ್ಯುಲೆನ್ಸ್‌ಗಳನ್ನು ಕಳುಹಿಸಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ವಿಶಾಖ ಮತ್ತು ವಿಜಯನಗರಂ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಉತ್ತಮ ಚಿಕಿತ್ಸೆ ನೀಡಲು ಸಮೀಪದ ಆಸ್ಪತ್ರೆಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡುವಂತೆ ಸಿಎಂ ಜಗನ್ ಆದೇಶಿಸಿದ್ದಾರೆ.

Advertisement
Tags :
Advertisement