Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಖಾನಾಹೊಸಹಳ್ಳಿ ಬಳಿ ಭೀಕರ ರಸ್ತೆ ಅಪಘಾತ : ಓರ್ವ ಸಾವು 10 ಜನರಿಗೆ ಗಂಭೀರ ಗಾಯ

11:05 AM Jun 27, 2024 IST | suddionenews
Advertisement

ಸುದ್ದಿಒನ್, ವಿಜಯನಗರ, (ಜೂ.27) : ನಿಂತಿದ್ದ ಲಾರಿಗೆ ಟೆಂಪೋ ಟ್ರಾವೆಲರ್ಸ್‌‌ ವಾಹನ ಡಿಕ್ಕಿಯಾಗಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, 10 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಬಳಿಯ ಹುಲಿಕೆರೆ ಕ್ರಾಸ್ ನ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಇಂದು (ಗುರುವಾರ) ಬೆಳಗಿನ ಜಾವ ನಡೆದಿದೆ.

Advertisement

ಮೃತರನ್ನು ದೊಡ್ಡಬಳ್ಳಾಪುರ ತಾಲೂಕಿನ ರಾಮಕೃಷ್ಣಪ್ಪ (62 ವರ್ಷ) ಎಂದು ಗುರುತಿಸಲಾಗಿದ್ದು, 10 ಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲುಬುರ್ಗಿಯಲ್ಲಿ ನಿಶ್ಚಿತಾರ್ಥ ಮುಗಿಸಿಕೊಂಡು, ಆರೂಢಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

ಟಿಟಿಯೊಳಗೆ ಇಬ್ಬರು ಮಕ್ಕಳು ಸೇರಿದಂತೆ 16 ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಡಿಕ್ಕಿ ರಭಸಕ್ಕೆ ಟಿಟಿ ನಜ್ಜು- ಗುಜ್ಜಾಗಿದ್ದು, ಇಬ್ಬರು ಸಿಲುಕಿಕೊಂಡಿದ್ದರು, ಅವರನ್ನು ಹೊರ ತೆಗೆಯಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ.

Advertisement

ಗಂಗಾವತಿಯಿಂದ ಮೈಸೂರಿಗೆ ತೆರಳುತ್ತಿದ್ದ ಲಾರಿ ಕೆಟ್ಟು ನಿಂತಿದ್ದು ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಟಿಟಿ ಡಿಕ್ಕಿ ಹೊಡೆದಿದೆ. ಖಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
bengaluruchitradurgadeadinjuredKhanahosahallioneroad accidentseriouslysuddionesuddione newsterribleVijayanagaraಓರ್ವ ಸಾವುಖಾನಾಹೊಸಹಳ್ಳಿಗಂಭೀರ ಗಾಯಚಿತ್ರದುರ್ಗಜನರುಬೆಂಗಳೂರುಭೀಕರ ರಸ್ತೆ ಅಪಘಾತವಿಜಯನಗರಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article