Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಂಡಮಾರುತಕ್ಕೆ ಸಿಲುಕಿದ್ದ ಟೀಂ ಇಂಡಿಯಾ ಕಡೆಗೂ ತವರಿಗೆ ಪ್ರಯಾಣ : ನಾಳೆ ಮುಂಬೈನಲ್ಲಿ ಟ್ರೋಫಿಯೊಂದಿಗೆ ರೋಡ್ ಶೋ

09:52 PM Jul 03, 2024 IST | suddionenews
Advertisement

ನವದೆಹಲಿ: ಹಲವು ವರ್ಷಗಳ ಬಳಿಕ ಟೀಂ ಇಂಡಿಯಾ ವಿಶ್ವಕಪ್ ಗೆದ್ದು ಬೀಗಿದೆ. ಈ ಸಂತಸವನ್ನು ಇಡೀ ದೇಶವೇ ಸಂಭ್ರಮಿಸಿದೆ, ಟೀಂ ಇಂಡಿಯಾ ಆಟಗಾರರನ್ನು ಕೊಂಡಾಡಿದ್ದಾರೆ. ಗೆದ್ದ ಮರುದಿನವೇ ಈ ಯಶಸ್ಸನ್ನು ಸಂಭ್ರಮಿಸಬೇಕೆಂದುಕೊಂಡಿದ್ದ ಕ್ರಿಕೆಟ್ ಪ್ರೇಮಿಗಳು ಅದು ಸಾಧ್ಯವಾಗಲಿಲ್ಲ. ಚಂಡಮಾರುತದಿಂದಾಗಿ ಟೀಂ ಇಂಡಿಯಾ ಆಟಗಾರರು ಭಾರತಕ್ಕೆ ಮರಳಲಿಲ್ಲ. ಬೆರಿಲ್ ಚಂಡಮಾರುತಕ್ಕೆ ಸಿಲುಕಿ ಟೀಂ ಇಂಡಿಯಾ ಆಟಗಾರರು ಬಾರ್ಬಡಾಸ್ ನಲ್ಲಯೇ ಲಾಕ್ ಆಗಿ ಬಿಟ್ಟರು. ಆದರೆ ಇದೀಗ ವಿಶೇಷ ವಿಮಾನದ ಮೂಲಕ ಭಾರತದ ತಂಡದ ನಾಯಕರು ತವರಿಗೆ ಬರುತ್ತಿದ್ದಾರೆ.

Advertisement

ಬಿಸಿಸಿಐ ವ್ಯವಸ್ಥೆ ಮಾಡಿರುವ ಚಾರ್ಟರ್ ಫ್ಲೈಟ್ ಮೂಲಕ ಟೀಂ ಇಂಡಿಯಾ ಆಟಗಾರರು ನಾಳೆ ದೆಹಲಿಗೆ ಬಂದಿಳಿಯಲಿದ್ದಾರೆ. ನಾಳೆ ಅಂದ್ರೆ ಗುರುವಾರ ಸಂಜೆ 5 ಗಂಟೆಯ ಸುಮಾರಿಗೆ ತೆರೆದ ಬಸ್ ನಲ್ಲಿ ಭಾರತ ತಂಡವನ್ನು ಟ್ರೋಪಿಯೊಂದಿಗೆ ಮೆರವಣಿಗೆ ಮಾಡಲಿದ್ದಾರೆ. ಮೆರವಣಿಗೆ ಮೂಲಕ ವಾಂಖೇಡೆ ಕ್ರೀಡಾಂಗಣಕ್ಕೆ ಕರೆದೊಯ್ಯುತ್ತಾರೆ. ಈ ರೋಡ್ ಶೋನಲ್ಲಿ ಭಾರತದ ಎಲ್ಲಾ ಆಟಗಾರರು ಟ್ರೋಫಿಯೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಬೇಕೆಂದು ಬಿಸಿಸಿಐ ಸೂಚನೆ ನೀಡಿದೆ.

ಟೀಂ ಇಂಡಿಯಾ ತಂಡಕ್ಕೆ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಅವರು 125 ಕೋಟಿ ಬಹುಮಾನವನ್ನು ಘೋಷಣೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿಯೇ ಬಹುಮಾನದ ಹಣವನ್ನು ನೀಡಲಿದ್ದಾರೆ. ಈ ವಿಜಯೋತ್ಸವ ಆಚರಣೆ ಮಾಡಲು ಫ್ಯಾನ್ಸ್ ಗೂ ಕರೆ ನೀಡಲಾಗಿದೆ. ಕ್ರಿಕೆಟ್ ಅಭಿಮಾನಿಗಳಿಗೆ ಜೈ ಶಾ ಕರೆ ನೀಡಿದ್ದು, ವಾಂಖೆಡೆ ಕ್ರೀಡಾಂಗಣದಲ್ಲಿ ಹಾಜರಾಗುವ ಮೂಲಕ ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ವಿಶ್ವಕಪ್ ಗೆದ್ದಿರುವ ಸಂಭ್ರಮದಲ್ಲಿ ಭಾಗಿಯಾಗಲು ಫ್ಯಾನ್ಸ್ ಕೂಡ ಕಾತುರದಿಂದ ಕಾಯುತ್ತಿದ್ದಾರೆ.

Advertisement

Advertisement
Tags :
bengaluruchitradurgaMumbairoad showsuddionesuddione newsTeam indiatrophyಚಂಡಮಾರುತಚಿತ್ರದುರ್ಗಟೀ ಇಂಡಿಯಾಟ್ರೋಫಿತವರಿಗೆ ಪ್ರಯಾಣಬೆಂಗಳೂರುಮುಂಬೈರೋಡ್ ಶೋಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article