For the best experience, open
https://m.suddione.com
on your mobile browser.
Advertisement

ಸಾಕು ನಾಯಿಗೋಸ್ಕರ ಬ್ರಿಟನ್ ಪ್ರಶಸ್ತಿಯನ್ನೇ ತಿರಸ್ಕರಿಸಿದ್ದರು ಟಾಟಾ..!

12:19 PM Oct 10, 2024 IST | suddionenews
ಸಾಕು ನಾಯಿಗೋಸ್ಕರ ಬ್ರಿಟನ್ ಪ್ರಶಸ್ತಿಯನ್ನೇ ತಿರಸ್ಕರಿಸಿದ್ದರು ಟಾಟಾ
Advertisement

ದೇಶದ ಪ್ರತಿಷ್ಠಿತ ಕೈಗಾರಿಕೋದ್ಯಮಿ ರತನ್ ಟಾಟಾ ಇಂದು ದೈಹಿಕವಾಗಿ ಜೀವಂತವಾಗಿ ಇಲ್ಲ. ಇವರ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ಆದರೆ ಇವರ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ.

Advertisement
Advertisement

ಉದ್ಯಮದಲ್ಲಿ ಸಾಮ್ರಾಜ್ಯವನ್ನೇ ನಿರ್ಮಿಸಿದವರು ರತನ್ ಟಾಟಾ. ಆದರೆ ಹೆಚ್ಚು ಪ್ರಾಣಿ ಪ್ರಿಯರಾಗಿದ್ದರು. ನಾಯಿಗಳು ಎಂದರೆ ಇನ್ನಿಲ್ಲದ ಪ್ರೀತಿ. ತಮ್ಮ ಸಾಕು ನಾಯಿಗೋಸ್ಕರ ಬ್ರಿಟನ್ ನ ರಾಜಮನೆತನದ ಪ್ರಶಸ್ತಿಯನ್ನೇ ತಿರಸ್ಕರಿಸಿದ್ದರು. 2018ರ ಫೆಬ್ರವರಿ 6ರಂದು ಬ್ರಿಟನ್ ನ ರಾಜಮನೆತನದ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಕಾರ್ಯಕ್ರಮ ಒಂದನ್ನ ಆಯೋಜಿಸಲಾಗಿತ್ತು. ಅಂದು ಸಮಾರಂಭ ಸಭೆಯಲ್ಲಿ ರತನ್ ಟಾಟಾ ಅವರಿಗೆ ಲೋಕೋಪಕಾರಿ ಕೆಲಸಕ್ಕೆ ಜೀವಮಾನದ ಸಾಧನೆಯ ಪ್ರಶಸ್ತಿ ನೀಡಿ ಗೌರವಿಸಲು ಬಯಸಿದ್ದರು. ಆ ಕಾರ್ಯಕ್ರಮಕ್ಕೆ ರತನ್ ಟಾಟಾ ಅವರು ಹೋಗಬೇಕಾಗಿತ್ತು. ಆದರೆ ರತನ್ ಟಾಟಾ ಅವರು ಹೋಗಲಿಲ್ಲ. ಅದಕ್ಕೆ ಕಾರಣ ಅವರ ಸಾಕು ನಾಯಿ. ಕೇಳಲು ಆಶ್ಚರ್ಯವೆನಿಸಿದರು, ಇದು ಸತ್ಯ.

ರತನ್ ಟಾಟಾ ಅವರ ಒಂದು ಸಾಕು ನಾಯಿಗೆ ಅನಾರೋಗ್ಯ ಕಾಡಿತ್ತು. ಅದಕ್ಕೆ ಕಾಯಿಲೆ ಇದೆ ಅದನ್ನು ಬಿಟ್ಟು ಬರಲು ಸಾಧ್ಯವಿಲ್ಲ ಎಂದು ಹೇಳಿದ್ದರಂತೆ‌. ರತನ್ ಟಾಟಾ ಅವರ ಮನವೊಲಿಸುವ ಪ್ರಯತ್ನ ನಡೆದರು ಅದು ಸಾಧ್ಯವಾಗಿರಲಿಲ್ಲವಂತೆ. ರತನ್ ಟಾಟಾ ಅವರು ಕಾರ್ಯಕ್ರಮಕ್ಕೆ ಬಾರದೆ ಇದ್ದ ಕಾರಣ ರಾಜಕುಮಾರ ಚಾರ್ಲ್ಸ್ ಅವರಿಗೂ ತಿಳಿಯಿತು. ಆಗ ಅವರು, ಮನುಷ್ಯನೆಂದರೆ ಹೀಗಿರಬೇಕು. ರತನ್ ಟಾಟಾ ಅದ್ಭುತ ವ್ಯಕ್ತಿ ಎಂದು ಹೇಳಿದ್ದರು‌. ಅದೆಲ್ಲವನ್ನು ಅಂಕಣಕಾರ ಸುಹೇಲ್ ಅವರು ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ. ಇದು ರತನ್ ಟಾಟಾ ಅವರುಗೆ ತಮ್ಮ ಸಾಕು ನಾಯಿಗಳ ಮೇಲಿದ್ದ ಪ್ರೀತಿಯನ್ನು ತೋರಿಸುತ್ತದೆ.

Advertisement
Advertisement

Advertisement
Tags :
Advertisement